More

    ಅಕ್ಕಮಹಾದೇವಿ ವಚನಗಳು ಸಮಾನತೆಯ ಪ್ರತೀಕ – ಭಾನುಪ್ರಕಾಶ ಖೇಣೇದ್ ಅಭಿಮತ

    ದೇವದುರ್ಗ: ಹನ್ನೆರಡನೇ ಶತಮಾನದ ಶರಣರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ಸರ್ವರನ್ನೂ ಸಮಾನವಾಗಿ ಕಂಡಿದ್ದರು. ಅಕ್ಕಮಹಾದೇವಿ ಪ್ರಮುಖ ಶರಣೆಯಾಗಿದ್ದರು. ಇವರ ವಚನಗಳು ಮಹಿಳಾ ಸಮಾನತೆಯ ಪ್ರತೀಕವಾಗಿವೆ ಎಂದು ಬಸವ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಭಾನುಪ್ರಕಾಶ ಖೇಣೇದ್ ಹೇಳಿದರು.

    ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಖರ ಮಠದಲ್ಲಿ ತಾಲೂಕು ಬಣಜಿಗ ಸಮುದಾಯ ಶನಿವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಶರಣರ ವಚನಗಳು ಎಲ್ಲ ಸಮುದಾಯಗಳಿಗೆ ದಾರಿ ದೀಪವಾಗಿವೆ. ಕಾಯಕದ ಜತೆಗೆ ಶಾಂತಿ ಸಂದೇಶ ಸಾರುತ್ತವೆ. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯ ಎಂದರು.

    ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಸಿದ್ದಯ್ಯ ಸ್ವಾಮಿ ಪೂಜೆ ಸಲ್ಲಿಸಿದರು. ಬಣಜಿಗ ಸಮುದಾಯದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಗದ್ಗಿ ಸೂಗಮ್ಮ, ಪ್ರಮುಖರಾದ ಸಂಗಮೇಶ ಹರವಿ, ಮಲ್ಲನಗೌಡ ಪಾಟೀಲ್ ವಕೀಲ, ವಿಜಯಕುಮಾರ ಅಮರಾಪುರ, ಪ್ರಕಾಶ ಪಾಟೀಲ್, ಸಂಗಪ್ಪ ಆಲ್ಕೊಡ, ಬಸವರಾಜ್ ಮಶ್ಯಾಳ, ಸುರೇಶ ಪೊ.ಪಾ., ಸಿದ್ದಪ್ಪ ವಾಗಣಗೇರಿ, ವೀರೇಶ ರಾಮದುರ್ಗ, ಅಡಿವೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts