More

    ಸಾಧನೆ ಮಾಡುವವರಿಗೆ ಪ್ರೋತ್ಸಾಹ ಅಗತ್ಯ

    ದೇವದುರ್ಗ: ರಾಸಾಯನಿಕ ಯುಕ್ತ ಇಂದಿನ ಆಹಾರ ಪದ್ಧತಿ ಮನುಷ್ಯ ಜೀವನಕ್ಕೆ ಮಾರಕವಾಗಿದ್ದು, ನಾನಾ ರೋಗವನ್ನು ಆಹ್ವಾನಿಸುತ್ತಿದೆ. ಹಿರಿಯರ ಆಹಾರ ಪದ್ಧತಿಯೇ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ವೈದ್ಯೆ ಲೀಲಾವತಿ ನರೇಂದ್ರ ಹೇಳಿದರು.

    ಪಟ್ಟಣದ ಸಮೂಹ ಕ್ಯಾಂಪಸ್ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ಉತ್ಸವ ಹಾಗೂ ಮಹಿಳಾ ಶಕ್ತಿ ಸಮಾವೇಶ ಉದ್ಘಾಟಿಸಿ ಶನಿವಾರ ಮಾತನಾಡಿದರು. ಒಲೆ ಮೇಲೆ ಮಾಡುವ ಆಹಾರದ ರುಚಿಯೆ ಬೇರೆ. ವಿದ್ಯುತ್, ಸಿಲಿಂಡರ್ ಮೇಲೆ ಮಾಡುವ ಅಡುಗೆಯಲ್ಲಿ ರುಚಿಯ ಕೊರತೆ ಕಾಣುತ್ತಿದ್ದೇವೆ. ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡರೆ ಆಸ್ಪತ್ರೆಯಿಂದ ನಾವು ದೂರವಿರಬಹುದು.

    ಸಾಧನೆ ಮಾಡಲು ಶರೀರಕ್ಕೆ ಗಟ್ಟಿತನಬೇಕಿದೆ. ಮಾನಸಿಕ ಒತ್ತಡದಿಂದ ಹೊರಬರಬೇಕಿದೆ. ಗರ್ಭಿಣಿಯರಿಗೆ ಉತ್ತಮ ಪೌಷ್ಟಿಕ ಆಹಾರ ನೀಡುವುದರಿಂದ ಮಗು ತಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು. ಈ ಭಾಗದಲ್ಲಿ ಸಂಘ ಸಂಸ್ಥೆಗಳು ಆರೋಗ್ಯ, ಶಿಕ್ಷಣ ಕುರಿತು ಅನೇಕ ಜಾಗೃತಿ ಮೂಡಿಸುವ ಮೂಲಕ ಬದಲಾವಣೆ ತಂದಿವೆ. ಮಹಿಳೆಯರು ಎಲ್ಲ ರಂಗದಲ್ಲಿ ಸೇವೆ ಸಲ್ಲಿಸುವುದರಿಂದ ದೌರ್ಜನ್ಯ ತಡೆಯಲು ಸಾಧ್ಯವಿದೆ. ಸಾಧನೆ ಮಾಡುವ ವ್ಯಕ್ತಿಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ ಎಂದರು.

    ಮುಂಜಾವು ಸ್ವಸಹಾಯ ಸಂಘದ ಮುಖ್ಯಸ್ಥೆ ಎಸ್.ಎಸ್.ಘಂಟಿ, ಶಾಂತಮ್ಮ ಬಾಲಪ್ಪ ಅರಕೇರಾ, ಶಿಕ್ಷಕಿ ನಾಗಲಕ್ಷ್ಮೀ ಪಾಟೀಲ್, ಪಲ್ಲವಿ ರಾಘವೇಂದ್ರ, ಹನುಮಂತ್ರಾಯ, ಅಮರೇಗೌಡ ಹೇರುಂಡಿ, ಸಂಗೀತಾ, ಚಂದ್ರಕಲಾ ಇತರರಿದ್ದರು.

    19-ಡಿವಿಡಿ-3
    ದೇವದುರ್ಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ಉತ್ಸವ ಹಾಗೂ ಮಹಿಳಾ ಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts