More

    ವೈಟ್​ಹೌಸ್​ನಿಂದ ಭಾರತಕ್ಕೆ ಹೊರಟ ವಿಡಿಯೋ ಪೋಸ್ಟ್ ಮಾಡಿದ ಟ್ರಂಪ್​; ಬನ್ನಿ, ಅಹಮದಾಬಾದ್​ನಲ್ಲಿ ಸಿಗುತ್ತೇನೆ ಎಂದ್ರು ಮೋದಿ

    ನವದೆಹಲಿ/ವಾಷಿಂಗ್ಟನ್​: ಇಂದು ಭಾರತಕ್ಕೆ ಆಗಮಿಸಲಿರುವ ಡೊನಾಲ್ಡ್​ ಟ್ರಂಪ್​ ಅವರು ನಿನ್ನೆ ಅಮೆರಿಕದಿಂದ ಹೊರಟಿದ್ದಾರೆ. ವೈಟ್​ಹೌಸ್ ಎದುರಿನಿಂದ ಹೆಲಿಕಾಪ್ಟರ್​ ಮೂಲಕ ಹೊರಟ ಅವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್​ನೊಂದಿಗೆ ಮೆಲಾನಿಯಾ ಜತೆ ಭಾರತಕ್ಕೆ ಹೊರಡುತ್ತಿದ್ದೇನೆ ಎಂದು ಟ್ರಂಪ್​ ಟ್ವೀಟ್ ಮಾಡಿದ್ದಾರೆ. ಅದೇ ವಿಡಿಯೋವನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಆಗಮನಕ್ಕಾಗಿ ಭಾರತ ಕಾಯುತ್ತಿದೆ ಎಂದಿದ್ದಾರೆ.

    ನಮ್ಮ ಎರಡೂ ದೇಶಗಳ ನಡುವಿನ ಸ್ನೇಹ ನಿಮ್ಮ ಈ ಭೇಟಿಯಿಂದ ಇನ್ನೂ ಬಲಗೊಳ್ಳಲಿದೆ. ಬನ್ನಿ, ಅಹಮದಾಬಾದ್​ನಲ್ಲಿ ನಿಮ್ಮನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ.

    ನಿನ್ನೆಯಿಂದಲೂ ಎರಡೂ ದೇಶಗಳ ನಾಯಕರು ಟ್ವಿಟರ್​ ಮೂಲಕವೇ ಪರಸ್ಪರ ಮಾತನಾಡಿಕೊಳ್ಳುತ್ತಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts