More

    ಎಚ್ಚರ, ಮತ್ತೆ ಬಂತು ಡೆಂಗಿ ಜ್ವರ

    ಪ್ರಕಾಶ್ ಮಂಜೇಶ್ವರ ಮಂಗಳೂರು 
    ಕರೊನಾ ರೌದ್ರ ತಾಂಡವದಿಂದ ಎಲ್ಲೆಡೆ ಸಾವು- ನೋವು ಸಂಭವಿಸುತ್ತಿರುವ ಹೊತ್ತಿನಲ್ಲಿಯೇ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯ ಜತೆ ಅಪಾಯಕಾರಿ ಸಾಂಕ್ರಾಮಿಕ ಡೆಂೆ ಜ್ವರ ಕಾಲಿಟ್ಟಿದೆ.
    ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 59 ಜನರಲ್ಲಿ ಡೆಂೆ ಸೋಂಕು ದೃಢಪಟ್ಟಿದೆ. ಸೋಂಕು ಶಂಕಿತ 917 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ಮತ್ತು ಸುಳ್ಯದಲ್ಲಿ ತಲಾ 14 ಸೋಂಕು ದೃಢಪಟ್ಟ ಪ್ರಕರಣಗಳಿವೆ. ಇತರ ತಾಲೂಕುಗಳಿಗೆ ಹೋಲಿಸಿದರೆ ಮಂಗಳೂರು ಮತ್ತು ಬೆಳ್ತಂಗಡಿಗಳದ್ದು ಕಡಿಮೆ ಪ್ರಕರಣ.
    ಕಳೆದ ವರ್ಷ ಜಿಲ್ಲೆಯ 239 ಜನರಲ್ಲಿ ಡೆಂೆ ಸೋಂಕು ದೃಢಪಟ್ಟಿತ್ತು. ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಜಿಲ್ಲೆಯಲ್ಲಿ ಡೆಂೆ ಸೋಂಕು ಅಧಿಕವಾಗಿ ಕಂಡುಬರುತ್ತಿದೆ.

    ಚಿಕಿತ್ಸೆ ಕಷ್ಟ: ಇಂದಿನ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಕೋವಿಡ್ ಹೊರತುಪಡಿಸಿದ ಇತರ ರೋಗಗಳಿಗೆ ಚಿಕಿತ್ಸೆ ಕೂಡ ಕಷ್ಟ. ಆಸ್ಪತ್ರೆ ಪರಿಸರದಲ್ಲಿ ಕೂಡ ಕರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈಗಾಗಲೇ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ರಕ್ತ ಮತ್ತು ಪ್ಲೇಟ್ಲೆಟ್ ಅವಶ್ಯಕತೆ ಇದ್ದು, ಡೆಂಘೆ ಸೋಂಕಿತರು ಕೂಡ ಆಸ್ಪತ್ರೆಗಳಲ್ಲಿ ದಾಖಲಾಗುವುದರಿಂದ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಎನ್ನುತ್ತಾರೆ ಕೋವಿಡ್ ನೋಡಲ್ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್.

    ಜ್ವರ ಸಮೀಕ್ಷೆ: ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂಗಳು ಎಲ್ಲ ಕಡೆ ಜ್ವರ ಸಮೀಕ್ಷೆ ನಡೆಸುತ್ತಿದ್ದು, ಇದರಿಂದ ಕರೊನಾ, ಡೆಂಘೆ ಸಹಿತ ಎಲ್ಲ ರೋಗಗಳ ಬಗ್ಗೆ ವಸ್ತುಸ್ಥಿತಿ ತಿಳಿಯಲಿದೆ. ಜತೆಗೆ ಸಾಂಕ್ರಾಮಿಕ ರೋಗಗಳು ಹರಡುವ ರೀತಿ ಮತ್ತು ಪರಿಹಾರ ಕ್ರಮ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.

    ಕರೊನಾಕ್ಕಿಂತ ಅಪಾಯಕಾರಿ: ಕರೊನಾ ಜಗತ್ತಿನಾದ್ಯಂತ ದೊಡ್ಡ ಸದ್ದು ಮಾಡುತ್ತಿದೆಯಾದರೂ, ಅದಕ್ಕಿಂತಲೂ ಅಪಾಯಕಾರಿ ಡೆಂೆ. ಕರೊನಾ ಒಮ್ಮೆ ಕಾಣಿಸಿಕೊಂಡವರಲ್ಲಿ ಸಾಮಾನ್ಯವಾಗಿ ಒಂದು ವರ್ಷದಲ್ಲಿ ಇನ್ನೊಮ್ಮೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಡೆಂೆಯಲ್ಲಿ ನಾಲ್ಕು ಪ್ರಭೇದಗಳಿದ್ದು, ಒಂದು ರೀತಿಯ ಸೋಂಕು ಕಾಣಿಸಿಕೊಂಡು ಅದರ ಲಕ್ಷಣ ಮಾಯವಾಗಿ ಇನ್ನೊಂದು ಪ್ರಭೇದದ ಸೋಂಕು ಕಾಣಿಸಿಕೊಳ್ಳಬಹುದು. ಡೆಂಘೆ ಸೋಂಕನ್ನು ನಿರ್ಲಕ್ಷಿಸಿದರೆ ಪ್ರಾಣಾಪಾಯ ಸಾಧ್ಯತೆ ಕರೊನಾಕ್ಕಿಂತ ಅಧಿಕ ಎನ್ನುತ್ತಾರೆ ಇಲಾಖೆ ಹಿರಿಯ ಅಧಿಕಾರಿಗಳು.

    ಮಾನವ ಸಂಪನ್ಮೂಲ ಕೊರತೆ: ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಬಹುಪಾಲು ಸಿಬ್ಬಂದಿ ಕರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದು, ಡೆಂೆ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸವಾಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫಾಗಿಂಗ್ ಮತ್ತು ರೋಗ ವಾಹಕ ಸೊಳ್ಳೆ ನಿರ್ಮೂಲನೆ ಕಾರ್ಯ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ಸಾರ್ವಜನಿಕರಿಂದ ಬೇಡಿಕೆ ಬಂದಿರುವ ಕಡೆಗಳಲ್ಲಿ ಫಾಗಿಂಗ್ ಮತ್ತು ಇತರ ಪೂರಕ ಕಾರ್ಯಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಇಲಾಖೆ ಅಧಿಕಾರಿಯೋರ್ವರು ತಿಳಿಸಿದ್ದಾರೆ.

    ಮಲೇರಿಯಾ ಬಾಧಿತರು 275
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಬಾಧಿತರ ಸಂಖ್ಯೆ ಕೂಡ ಏರುಗತಿಯಲ್ಲಿ ಸಾಗಿದೆ. ಇಲ್ಲಿಯ ತನಕ ಜಿಲ್ಲೆಯಲ್ಲಿ 267 ಮಂದಿಗೆ ಮಲೇರಿಯಾ ಬಂದಿದ್ದು, ಇದರಲ್ಲಿ ಸಿಂಹಪಾಲು ಮಹಾನಗರ ಪಾಲಿಕೆ ವ್ಯಾಪ್ತಿಯದು. ಪಾಲಿಕೆ ವ್ಯಾಪ್ತಿಯಲ್ಲೇ 223 ಪ್ರಕರಣಗಳು ಇವೆ.

    ಉಡುಪಿಯಲ್ಲಿ ಕಡಿಮೆ: ಉಡುಪಿ: ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಘೆ ಪ್ರಕರಣ ಇಳಿಕೆಯಾಗಿದೆ. 2020ರಲ್ಲಿ ಜನವರಿಯಿಂದ ಮೇ ವರೆಗೆ 72 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ 5 ತಿಂಗಳಲ್ಲಿ 23 ಪ್ರಕರಣ ಮಾತ್ರ ಪತ್ತೆಯಾಗಿದೆ. ಜನವರಿಯಲ್ಲಿ 2, ಫೆಬ್ರವರಿ 5, ಮಾರ್ಚ್ 9, ಏಪ್ರಿಲ್ 4, ಮೇ ತಿಂಗಳಲ್ಲಿ 3 ಪ್ರಕರಣ ಕಂಡುಬಂದಿದೆ.

    ಡೆಂಘೆ ಕರೊನಾಕ್ಕಿಂತಲೂ ಅಪಾಯಕಾರಿ. ಈ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿದಾಗ ಮಾತ್ರ ಪರಿಹಾರ ಸಾಧ್ಯ. ಮನೆ ಹಾಗೂ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಕಾರ್ಯ ಮೊದಲು ನಡೆಯಬೇಕು. ಜ್ವರ, ಮೈಕೈ ನೋವು, ಕಣ್ಣಗುಡ್ಡೆಯ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡವರು ಮೊದಲು ಹತ್ತಿರದ ಸರ್ಕಾರಿ ವೈದ್ಯರ ಮಾರ್ಗದರ್ಶನ ಪಡೆಯಬೇಕು.
    – ಡಾ.ನವೀನ್ ಚಂದ್ರ ಕುಲಾಲ್, ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣ ಅಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts