More

    ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ

    ಸಿರಗುಪ್ಪ: ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಎಂದು ಎಂದು ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್‌ಬಣ)ಯ ಜಿಲ್ಲಾ ಸಂಚಾಲಕ ಎಚ್.ಬಿ.ಗಂಗಪ್ಪ ಹೇಳಿದರು.

    ಸಂವಿಧಾನದಿಂದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ

    ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 67ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಶೋಷಿತರಿಗೆ ಹಾಗೂ ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ಕಾನೂನು ಬದ್ಧವಾಗಿ ಸಂವಿಧಾನದ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದರು.

    ಇದನ್ನೂ ಓದಿ: ಸುನೀಲ್ ಕುಮಾರ್​ಗೆ ಸಿದ್ದು ಖಡಕ್​​ ಅವಾಜ್

    ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಸಂವಿಧಾನ ದೇಶದ ಅತ್ಯುತ್ತಮ ಗ್ರಂಥವಾಗಿದೆ. ಅಂಬೇಡ್ಕರ್ ಅವರು ಆಧುನಿಕ ಭಾರತದ ಪಿತಾಮಹಾರಾಗಿದ್ದಾರೆ. ಅವರು ಸಂವಿಧಾನದಲ್ಲಿ ಅಳವಡಿಸಿರುವ ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಬಹುದು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಲಾಗಿದೆ. ಎಲ್ಲರ ಹಕ್ಕನ್ನು ಗೌರವಿಸಿದಾಗ ದೇಶ ಅಭಿವೃದ್ಧಿವಾಗಲು ಸಾಧ್ಯ ಎಂದು ಹೇಳಿದರು.
    ತಾಲೂಕು ಸಂಚಾಲಕ ಎಂ.ದೊಡ್ಡಬಸಪ್ಪ, ಸಂಘಟನಾ ಸಂಚಾಲಕರಾದ ಎಸ್.ವೀರೇಶ, ಎಚ್.ಭೀಮೇಶ, ಎಸ್.ರಫಿ, ಪದಾಧಿಕಾರಿಗಳಾದ ಎಚ್.ವೀರೇಶ ಮಳಿಗೇಲಿ, ಬಿ.ಹನುಮೇಶ, ಮುಖಂಡರಾದ ನಡಿವಿ ಮೂಕಪ್ಪ, ಮಹಾದೇವ, ಮೇಕೆಲಿ ವೀರೇಶ, ರವಿ ಆರ್.ಮುತ್ತೂರು, ಚಂದ್ರಶೇಖರ, ಸೂರಪ್ಪ, ಹುಸೇನ್‌ಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts