More

    ವೇತನ ಪಾವತಿಗೆ ಡೇಟಾ ಎಂಟ್ರಿ ಆಪರೇಟರ್‌ಗಳ ಆಗ್ರಹ

    ಯಳಂದೂರು : ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಅಪರೇಟರ್‌ಗಳಿಗೆ ಕಳೆದ 11 ತಿಂಗಳಿಂದ ವೇತನ ಬಾಕಿ ಇದ್ದು, ಕೂಡಲೇ ಕೊಡಿಸಿಕೊಡಬೇಕೆಂದು ತಾಲೂಕಿನ ನಾಡಕಚೇರಿ ಡೇಟಾ ಎಂಟ್ರಿ ಆಪರೇಟ್‌ಗಳು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಮುಖಂಡ ಗುರುಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿನ ನಾಡಕಚೇರಿಗಳಲ್ಲಿ ಹಲವು ವರ್ಷಗಳಿಂದಲೂ ಡೇಟಾ ಎಂಟ್ರಿ ಅಪರೇಟರ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಳೆದ 11 ತಿಂಗಳಿಂದ ಇವರಿಗೆ ಸಂಬಳವಾಗಿಲ್ಲ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವರಿಗೆ ತುಂಬಾ ತೊಂದರೆಯಾಗಿದೆ. ಈಚೆಗೆ ಮೈಸೂರು ತಾಲೂಕಿನ ನಂಜನಗೂಡು ಗ್ರಾಮದ ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಕಿರುಕುಳವನ್ನು ಸಹಿಸಲಾರದೆ ಅಟಲ್‌ಜೀ ಜನಸ್ನೇಹಿ ಕೇಂದ್ರದ ಕಂಪ್ಯೂಟರ್ ಆಪರೇಟರ್ ಪರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ಬರೆದಿರುವ ಡೆತ್‌ನೋಟ್‌ನಲ್ಲಿ ಕಿರುಕುಳದೊಂದಿಗೆ ಕಳೆದ 10 ತಿಂಗಳಿಂದ ಸಂಬಳವಾಗದಿರುವುದೂ ನನ್ನ ಸಾವಿಗೆ ಕಾರಣ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ವಹಿಸಬೇಕು. ಜತೆ ಆಪರೇಟ್‌ಗಳ ಸಂಬಳ ಬಿಡುಗಡೆ ಮಾಡಬೇಕು ಎಂದು ಕೋರಿದಾಗ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಡಿಸಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

    ಜಿ.ವಿ.ಮಹದೇವಸ್ವಾಮಿ, ಶರತ್‌ಕುಮಾರ್, ಎಸ್.ಮಂಜುನಾಥ್, ಎಲ್. ಪ್ರಸನ್ನಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts