More

    ವಂದೇ ಭಾರತ್ ಸಂಚಾರ ಸಮಯ ಬದಲಾವಣೆಗೆ ಆಗ್ರಹ

    ಹುಬ್ಬಳ್ಳಿ: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ಆಗ್ರಹಿಸಿದೆ.


    ನಿಯೋಗದ ಸದಸ್ಯರು ಇತ್ತೀಚೆಗೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.


    ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಸದ್ಯದ ಸಂಚಾರ ಸಮಯ ಸಮರ್ಪಕವಾಗಿಲ್ಲ. ಈ ರೈಲು ಬೆಳಗ್ಗೆ 5.30ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 11.30 ಬೆಂಗಳೂರು ತಲುಪುವಂತೆ ಹಾಗೂ ಸಂಜೆ 5.30ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಧಾರವಾಡಕ್ಕೆ ಆಗಮಿಸುವ ರೀತಿಯಲ್ಲಿ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


    ವಾರಕ್ಕೊಮ್ಮೆ ಸಂಚರಿಸುವ ಹುಬ್ಬಳ್ಳಿ- ನಿಜಾಮುದ್ದಿನ್- ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ವಾರದಲ್ಲಿ 3 ಬಾರಿ ಓಡಿಸಬೇಕು. ಚಾಲುಕ್ಯ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ದಾದರ ಎಕ್ಸ್‌ಪ್ರೆಸ್, ಶರಾವತಿ ಎಕ್ಸ್‌ಪ್ರೆಸ್, ಜೋಧಪುರ ಎಕ್ಸ್‌ಪ್ರೆಸ್ ಹಾಗೂ ಗರೀಬ್ ನವಾಜ್ ಎಕ್ಸ್‌ಪ್ರೆಸ್ ರೈಲಿಗೆ ಪ್ರವಾಸಿ ತಾಣವಾದ ಲೋನಾವಾಲದಲ್ಲಿ 2 ನಿಮಿಷಗಳ ನಿಲುಗಡೆ ಕಲ್ಪಿಸಬೇಕು.

    ಹುಬ್ಬಳ್ಳಿ-ಕೋಪರಗಾಂವ (ಶಿರಡಿ) ನೇರ ರೈಲು ಸಂಚಾರ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ. ವಿಭಾಗೀಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಚನ್ನವೀರ ಮುಂಗರವಾಡಿ, ಗೌತಮ ಗುಲೇಚಾ, ಮದನ ತಾತೇಡ, ಸುಭಾಷ ಡಂಕ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts