More

    ಸೋಂಕಿತರಿಗೆ ಔಷಧ ಪೂರೈಸಲು ಬಂದಿದೆ ‘ಪೃಥ್ವಿ’: ದೂರದಿಂದಲೇ ನಿಯಂತ್ರಿಸಬಹುದಾದ ರೋಬಾಟ್‌ ಇದು!

    ನವದೆಹಲಿ: ಕರೊನಾ ಸೋಂಕಿತರು ಮತ್ತು ಆರೋಗ್ಯ ಕಾರ್ಯಕರ್ತರ ನಡುವೆ ನೇರ ಸಂಪರ್ಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೋಬಾಟ್‌ಗಳ ಸಂಶೋಧನೆಯಲ್ಲಿ ಯುವಕ-ಯುವತಿಯರು ಮುಂದಾಗಿದ್ದಾರೆ.

    ಕಳೆದ ವಾರವಷ್ಟೇ ಸೋಂಕಿತರಿಗೆ ಆಹಾರ ಪೂರೈಕೆ ಮತ್ತು ಔಷಧ ಪೂರೈಕೆ ಮಾಡಲು ಎರಡು ಬಗೆಯ ರೋಬಾಟ್‌ ಅನ್ನು ಮುಂಬೈ ವಿದ್ಯಾರ್ಥಿಗಳು ಕಂಡು ಹಿಡಿದ ಬೆನ್ನಲ್ಲೇ ಈಗ ದೆಹಲಿಯ ಯುವಕರ ಗುಂಪು ಇದೇ ಉದ್ದೇಶಕ್ಕಾಗಿ ‘ಪೃಥ್ವಿ’ ಹೆಸರಿನ ರೋಬಾಟ್‌ ಕಂಡುಹಿಡಿದಿದ್ದಾರೆ.

    ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ನಂತರ ವಿದ್ಯಾರ್ಥಿಗಳಾದ- ನಿಶಾಂತ್ ಚಂದ್ನಾ (15), ಸೌರವ್ ಮಹೇಶ್ಕರ್ (16) ಮತ್ತು ಆದಿತ್ಯ ದುಬೆ (17) ಸೇರಿ ಈ ರೋಬಾಟ್‌ ತಯಾರಿಸಿದ್ದಾರೆ. ‘ಈ ರೋಬೋಟ್ ರೋಗಿಗಳಿಗೆ ಆಹಾರ ಮತ್ತು ಔಷಧಿಗಳನ್ನು ವಿತರಿಸುತ್ತದೆ. ಅಷ್ಟೇ ಅಲ್ಲದೇ, ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಷನ್‌ ಡೌನ್‌ಲೋಡ್ ಮಾಡಿಕೊಂಡರೆ ಇದನ್ನು ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಸ್ಮಾರ್ಟ್ ಟ್ಯಾಬ್ಲೆಟ್ ಅನ್ನು ಕೂಡ ಈ ರೋಬಾಟ್‌ಗೆ ಜೋಡಿಸಬಹುದು. ಈ ಮೂಲಕ ವೈದ್ಯರು ಮತ್ತು ರೋಗಿಗಳ ನಡುವೆ ವೀಡಿಯೊ ಕಾನ್ಫರೆನ್ಸಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಸೋಂಕಿತರನ್ನು ಪತ್ತೆ ಹಚ್ಚಲು ಸುಲಭವಾಗುವಂಥ ಅಪ್ಲಿಕೇಷನ್‌ಗಳನ್ನು ಕೂಡ ಇದರಲ್ಲಿ ಅಳವಡಿಸಲು ಯೋಚಿಸುತ್ತಿದ್ದೇವೆ. ಹೀಗಾದಲ್ಲಿ ವೈದ್ಯರು ಮತ್ತು ಸೋಂಕಿತರ ನಡುವೆ ಇನ್ನಷ್ಟು ಅಂತರ ಕಡಿಮೆಯಾಗಲು ಸಾಧ್ಯವಿದೆ ಎನ್ನುತ್ತಾರೆ ರೋಬಾಟ್‌ ರೂವಾರಿಗಳು. 5 ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಇದ‌ನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ. ಇಟಾಲಿಯನ್ ರೋಬೋಟ್‘ ಟಾಮಿ ’ ಈ ವಿದ್ಯಾರ್ಥಿಗಳ ಸ್ಫೂರ್ತಿ. (ಏಜೆನ್ಸೀಸ್​)

    ಪ್ರಸಿದ್ಧ ಹಲ್ದಿರಾಮ್ ಭುಜಿಯಾವಾಲಾ ಸ್ನ್ಯಾಕ್ಸ್​​ ಸಂಸ್ಥೆಯ ಮಾಲೀಕ ಮಹೇಶ್​ ಅಗರ್ವಾಲ್​ ನಿಧನ

    ತಬ್ಲಿಘಿ ಜಮಾತ್​ ನಿಷೇಧಿಸಿ, ಮರ್ಕಜ್​ನ ಬ್ಯಾಂಕ್​ ಖಾತೆ ಜಪ್ತಿ ಮಾಡಿ: ವಿಎಚ್​ಪಿ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts