More

    “ದಿಲ್ಲಿ ಅಬ್ ದೂರ್​ ನಹಿ, ಆಪ್​ಕೆ ದರವಾಜೆ ಪರ್​ ಹೆ” : ಪ್ರಧಾನಿ ಮೋದಿ

    ಧೇಮಾಜಿ: ಭಾರತವನ್ನು ದಶಕಗಳವರೆಗೆ ಆಳಿದ ಹಿಂದಿನ ಸರ್ಕಾರಗಳು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸುತ್ತಾ ಬಂದಿವೆ. ಆದರೆ ತಮ್ಮ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಅಸ್ಸಾಂಗೆ ಭೇಟಿ ನೀಡಿರುವ ಮೋದಿ, ಈಗ ದೆಹಲಿ ಅಸ್ಸಾಂ ಜನರಿಗೆ ಹತ್ತಿರವಾಗಿದೆ ಎಂದರು.

    ಅಸ್ಸಾಂನಲ್ಲಿ ಆರಂಭವಾಗುತ್ತಿರುವ 3,300 ಕೋಟಿ ರೂಪಾಯಿ ಮೌಲ್ಯದ ಮೂರು ಪೆಟ್ರೋಲಿಯಂ ಕ್ಷೇತ್ರದ ಬೃಹತ್​ ಯೋಜನೆಗಳನ್ನು ಸೋಮವಾರ ಮೋದಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಧೇಮಾಜಿ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

    ಇದನ್ನೂ ಓದಿ: ಪೆಟ್ರೋಲ್ ದರ 100 ರತ್ತ: ಪ್ರಧಾನಿ ಮೋದಿ ಏನಂದ್ರು ಗೊತ್ತಾ?

    ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ನೇತೃತ್ವದ ರಾಜ್ಯ ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಯೋಜನೆಗಳನ್ನು ವಿವರಿಸಿದ ಮೋದಿ, ರಾಜ್ಯದ ಸಮತೋಲನವಾದ ಬೆಳವಣಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದೆ ಎಂದರು.

    ಸ್ವಾತಂತ್ರ್ಯ ಸಿಕ್ಕಾಗಿನಿಂದ ದಶಕಗಳವರೆಗೆ ಆಳ್ವಿಕೆ ನಡೆಸಿದವರು ದಿಸ್ಪುರ್​ (ಅಸ್ಸಾಂ ರಾಜಧಾನಿ) ದಿಲ್ಲಿಯಿಂದ ತುಂಬಾ ದೂರ ಇದೆ ಅಂತ ನಂಬಿದ್ದರು ಎಂದು ಟೀಕಿಸಿದ ಮೋದಿ, “ದಿಲ್ಲಿ ಅಬ್ ದೂರ್​ ನಹಿ, ಆಪ್​ಕೆ ದರವಾಜೆ ಪರ್​ ಹೆ” (ದೆಹಲಿ ಈಗ ದೂರ ಇಲ್ಲ, ನಿಮ್ಮ ಬಾಗಿಲಲ್ಲೇ ಇದೆ) ಎಂದು ನೆರೆದಿದ್ದ ಭಾರೀ ಜನಸಮೂಹಕ್ಕೆ ಹೇಳಿದರು. ಹಿಂದಿನ ಸರ್ಕಾರಗಳು ಅಸ್ಸಾಂ ಬಗ್ಗೆ ಮಲತಾಯಿಧೋರಣೆ ವಹಿಸಿದ್ದು, ಸಂಪರ್ಕ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮ ಎಲ್ಲವನ್ನೂ ನಿರ್ಲಕ್ಷಿಸಿದ್ದವು ಎಂದು ಮೋದಿ ಹೇಳಿದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಲ್ಲಿದ್ದಲು ಕಳ್ಳಸಾಗಾಣಿಕೆ ಸಿಬಿಐ ತನಿಖೆ : “ನನಗೆ ಏನೂ ಗೊತ್ತಿಲ್ಲ” ಎಂದ ರುಜಿರಾ ಬ್ಯಾನರ್ಜಿ

    VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಆತ್ಮ ಸಂಚಾರದ ದೃಶ್ಯ!? ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನ

    ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts