More

    ಸಮಾಧಿ ಮಾಡಿದ್ದ ಮರುದಿನ ಆಸ್ಪತ್ರೆಯ ಶವಾಗಾರದಲ್ಲಿ ಪ್ರತ್ಯಕ್ಷವಾದ ಶವ!

    ನವದೆಹಲಿ: ಕರೊನಾ ಸೋಂಕಿಗೆ ಒಳಗಾಗಿರುವ ತಂದೆಯ ಶವವನ್ನು ಆಸ್ಪತ್ರೆಯಿಂದ ಪಡೆದು ಅವರ ಶವವನ್ನು ಸಮಾಧಿ ಮಾಡಿದ ನಂತರ ಅವರದ್ದೇ ಶವವು ಆಸ್ಪತ್ರೆಯ ಶವಾಗಾರದಲ್ಲಿ ಕಂಡು ಮಗನೊಬ್ಬ ದಿಗ್ಭ್ರಾಂತನಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಲಾಮುದ್ದೀನ್​ ರಹೀಂ ಎಂಬುವವರ ತಂದೆ 65 ವರ್ಷದ ಮೊಯಿನುದ್ದೀನ್​ ಕರೊನಾ ಸೋಂಕು ಪೀಡಿತರಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯ ವ್ಯಾಪ್ತಿಗೆ ಬರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಗಿತ್ತು.

    ಚಿಕಿತ್ಸೆ ಫಲಕಾರಿಯಾಗದೇ ಅವರ ತಂದೆ ಮೃತಪಟ್ಟಿರುವುದಾಗಿ ಜೂನ್​ 2ರಂದು ಕಲಾಮುದ್ದೀನ್​ ಅವರಿಗೆ ಆಸ್ಪತ್ರೆಯಿಂದ ಕರೆ ಬಂತು. ಸೋಂಕಿಗೆ ಒಳಗಾಗಿದ್ದರಿಂದ ಎಲ್ಲಾ ಮುಂಜಾಗರೂಕತೆಯನ್ನು ತೆಗೆದುಕೊಂಡ ಕಲಾಮುದ್ದೀನ್​ ಆ ಶವವನ್ನು ಪಡೆದರು. ಆದರೆ ಅವರ ಮುಖ ಊದಿಕೊಂಡಿತ್ತು. ಅದರ ಮೇಲೆ ರಕ್ತದ ಕಲೆ ಇತ್ತು. ಇದನ್ನು ಪ್ರಶ್ನಿಸಿದಾಗ ಆಸ್ಪತ್ರೆಯ ವೈದ್ಯರು, ‘ನಿಮ್ಮ ತಂದೆ ಡಯಾಲಿಸಿಸ್​ಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮುಖ ಊದಿಕೊಂಡಿದೆ’ ಎಂದರು.

    ಇದನ್ನೂ ಓದಿ: ಅಮೆರಿಕ ಪ್ರತಿಭಟನೆಯಿಂದ ಹೊತ್ತಿ ಉರಿದ ಬಳಿಕ ಈ ಯುವಕನಿಗೆ ಗಿಫ್ಟ್​​ಗಳ ಸುರಿಮಳೆ!

    ಇದನ್ನು ನಂಬಿದ ಕುಟುಂಬಸ್ಥರು ಶವದ ಸಮಾಧಿ ಮಾಡಿದರು. ಕರೊನಾ ಸೋಂಕಿನ ಭೀತಿಯಿಂದ ಲಗುಬಗೆಯಿಂದ ಶವಸಂಸ್ಕಾರ ನೆರವೇರಿತು.

    ಮಾರನೆಯ ದಿನ ಆಸ್ಪತ್ರೆಯಿಂದ ಅವರಿಗೆ ಕರೆ ಬಂದಿತು. ಇಲ್ಲೊಬ್ಬರು ಮೃತಪಟ್ಟಿದ್ದು, ಅವರನ್ನು ಗುರುತಿಸಬೇಕಿದೆ ಎಂದು ಕರೆದರು. ಗಾಬರಿಯಿಂದ ಕಲಾಮುದ್ದೀನ್​ ಆಸ್ಪತ್ರೆಗೆ ಹೋದಾಗ ಅದು ಅವರದ್ದೇ ತಂದೆಯ ಮೃತದೇಹವಾಗಿತ್ತು!

    ಇದರಿಂದ ಗಾಬರಿಗೊಂಡ ಅವರು, ಇವರು ನಮ್ಮ ತಂದೆ, ಹಾಗಿದ್ದರೆ ನಿನ್ನೆ ಸಮಾಧಿ ಮಾಡಿರುವುದು ನಮ್ಮ ತಂದೆಯಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಯಲ್ಲಿ ವಿಚಾರಿಸಿದರು. ಇದರಿಂದ ವಿಚಲಿತಗೊಂಡ ವೈದ್ಯರು, ದಾಖಲೆಗಳನ್ನು ಪರಿಶೀಲಿಸಿದಾಗ, ಹಿಂದಿನ ದಿನ ನೀಡಿದ್ದ ಶವ ಬೇರೆಯ ವ್ಯಕ್ತಿಯದ್ದು ಎಂದು ತಿಳಿದುಬಂತು. ಇಬ್ಬರ ಹೆಸರೂ ಒಂದೇ ರೀತಿಯದ್ದಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಸಿಬ್ಬಂದಿಯಿಂದ ಈ ಅನಾಹುತ ನಡೆದುಹೋಗಿತ್ತು.

    ಇದನ್ನೂ ಓದಿ: ಆಸ್ಪತ್ರೆಯ ಒಂದು ಎಡವಟ್ಟು: 500ಕ್ಕೂ ಹೆಚ್ಚು ಜನರ ಜೀವಕ್ಕೆ ಕರೊನಾ ಕುತ್ತು!

    ಅಧಿಕ ರಕ್ತದೊತ್ತಡದಿಂದಾಗಿ ಮೊಯಿನುದ್ದೀನ್ ಅವರನ್ನು ಜೂನ್ 4 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅದೇ ದಿನ ಮೃತಪಟ್ಟಿದ್ದರು. ನಂತರ ಕರೊನಾ ಪರೀಕ್ಷೆ ನಡೆಸಬೇಕಿರುವ ಕಾರಣ, ಶವವನ್ನು ಕುಟುಂಬದವರಿಗೆ ನೀಡಿರಲಿಲ್ಲ. ಆ ನಂತರ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ಎಡವಟ್ಟು ಮಾಡಿತ್ತು ಆಸ್ಪತ್ರೆ.

    ನಂತರ, ಹಿಂದಿನ ದಿನ ಸಮಾಧಿ ಮಾಡಿರುವ ಮನೆಯವರ ಪತ್ತೆ ಹಚ್ಚಿ ಅವರನ್ನೂ ಕರೆಸಿ, ಆಸ್ಪತ್ರೆಯ ಸಿಬ್ಬಂದಿ ಕ್ಷಮೆ ಕೋರಿದ್ದಾರೆ. ನಂತರ ಹಿಂದಿನ ದಿನ ಸಮಾಧಿ ಮಾಡಿದ ಜಾಗಕ್ಕೆ ನಿಜವಾದ ಕುಟುಂಬದವರು ಬಂದು ತಂದೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ವಿಧ್ವಂಸಕ ಕೃತ್ಯಗಳ ರೂವಾರಿ ‘ಲೇಡಿ ಡಾನ್’ಗೆ ಕರೊನಾ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts