More

    ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ನೆಗೆಟಿವ್

    ಶೃಂಗೇರಿ: ಬೇಗಾರಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರಂಟೈನ್​ನಲ್ಲಿದ್ದ ಆರು ಜನರ ಹಾಗೂ ಸಚ್ಚಿದಾನಂದಪುರದ ಕ್ವಾರಂಟೈನ್​ನಲ್ಲಿದ್ದ ನಾಲ್ಕು ಜನರ ಕರೊನಾ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. ದೆಹಲಿ ಹಾಗೂ ಮಹಾರಾಷ್ಟ್ರದಿಂದ ಬಂದ ಇಬ್ಬರು ಸೋಂಕಿತರ ಆರೋಗ್ಯ ಸ್ಥಿರವಾಗಿದೆ.

    ದೆಹಲಿಯಿಂದ ಬಂದ ಬೇಗಾರು ಗ್ರಾಪಂನ ಕೈಮರದ 37 ವರ್ಷದ (ಪಿ.2451) ಹಾಗೂ ಮಹಾರಾಷ್ಟ್ರದಿಂದ ಬಂದ ಕುತುಗೋಡು ತೆಕ್ಕೂರು ಗ್ರಾಮದ 23 ವರ್ಷದ (ಪಿ.2468) ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಇದರಲ್ಲಿ ವಾರ್ಡನ್ ಹಾಗೂ ಮೂರು ಅಡುಗೆ ಸಹಾಯಕಿಯರು ಇದ್ದರು.

    ಮತ್ತೊಮ್ಮೆ ಲಾಕ್​ಡೌನ್ ಸಡಿಲಿಕೆಯಿಂದ ಹೊರರಾಜ್ಯದಿಂದ ಬರುವರ ಸಂಖ್ಯೆ ಹೆಚ್ಚಾಗಬಹುದು. ತಾಲೂಕಿನ ಜನ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ. ದೆಹಲಿಯಿಂದ ಬಂದ ಬೇಗಾರಿನ ಸೋಂಕಿತ ಬಿದರಗೋಡು ಹಾಗೂ ಬೇಗಾರಿನ ಸುತ್ತಮುತ್ತ ಓಡಾಡಿದ್ದಾನೆ. ಸ್ಥಳೀಯರೊಂದಿಗೆ ಬೆರೆತಿದ್ದಾನೆ. ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸೋಂಕಿತ ಹೋಮ್ ಕ್ವಾರಂಟೈನ್​ನಲ್ಲಿ ಇದ್ದು ಸ್ಥಳೀಯರೊಂದಿಗೆ ಬೆರೆತಿಲ್ಲ. ತಾಲೂಕಿನ ಅಧಿಕಾರಿಗಳು ಕೂಡ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಯಾರೂ ಭಯಪಡಬೇಕಿಲ್ಲ ಎಂದು ಹಲವು ಗ್ರಾಮಸ್ಥರು ವಾಟ್ಸ್​ಆಪ್ ಮೂಲಕ ತಾಲೂಕಿನ ಜನರಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts