More

    ನಿಮ್ಮ ಟ್ವೀಟ್​ ಈಗಲಾದರೂ ಡಿಲೀಟ್​ ಮಾಡಬಹುದಾ?: ಮುಜುಗರಕ್ಕೀಡಾದ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್​ ತಿವಾರಿ

    ನವದೆಹಲಿ: ದೆಹಲಿ ಚುನಾವಣಾ ಫಲಿತಾಂಶದ ಅರ್ಧದವರೆಗೂ ಗೆಲವು ನಮ್ಮದೇ ಎಂದು ಹೇಳುತ್ತಿದ್ದ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್​ ತಿವಾರಿ ಕೊನೆಗೂ ಸೋಲನ್ನು ಒಪ್ಪಿಕೊಂಡು, ಭರ್ಜರಿ ಬಹುಮತ ಸಾಧಿಸಿದ ಆಮ್​ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ತಮ್ಮ ಹಿಂದಿನ ಟ್ವೀಟ್​ ಬಗೆಗಿನ ಪ್ರಶ್ನೆಯಿಂದ ಮುಜುಗರಕ್ಕೂ ಒಳಗಾದರು.

    ದೆಹಲಿಯ ಎಲ್ಲ ಮತದಾರರಿಗೂ ಹಾಗೂ ಶ್ರಮವಹಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳು. ಜನರು ತೀರ್ಪನ್ನು ನಾವು ಗೌರವಿಸುತ್ತೇವೆ. ಅರವಿಂದ್​ ಕೇಜ್ರಿವಾಲ್​ ಅವರಿಗೆ ಧನ್ಯವಾದಗಳು. ಜನರ ನಿರೀಕ್ಷೆಗಳನ್ನು ದೆಹಲಿ ಸರ್ಕಾರ ಪೂರೈಸಲಿದೆ ಎಂದು ಬಯಸಿದ್ದೇನೆ ಎಂದು ಟ್ವೀಟ್​ ಮಾಡಿದ್ದರು.

    ಮತದಾನ ದಿನ ಅಂದರೆ ಶನಿವಾರ ಟ್ವೀಟ್​ ಮಾಡಿದ್ದ ತಿವಾರಿ, ಬಿಜೆಪಿ 48 ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಮೂಲಕ ಸರ್ಕಾರವನ್ನು ರಚಿಸಲಿದೆ ಎಂದು ಹೇಳುವ ಮೂಲಕ ಬೇಕಾದರೆ ಟ್ವೀಟ್​ ಅನ್ನು ಸೇವ್​ ಮಾಡಿಕೊಳ್ಳಿ ಎಂದು ಬಲವಾದ ನಂಬಿಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿ 55 ಸ್ಥಾನಗಳನ್ನು ಗೆದ್ದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದ್ದರು.

    ನಿಮ್ಮ ಟ್ವೀಟ್​ ಅನ್ನು ಸೇವ್​ ಮಾಡಿಕೊಂಡಿದ್ದೇವೆ. ತಾವೀಗ ಅದನ್ನು ಡಿಲೀಟ್​ ಮಾಡಬಹುದಾ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಜಗರಕ್ಕೀಡಾದ ತಿವಾರಿ, ರಾಜ್ಯದ ಮುಖ್ಯಸ್ಥನಾಗಿ ರಾಜ್ಯವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಬಹುದಾ? ನಾವು ನಮ್ಮ ಆಂತರಿಕ ಸಮೀಕ್ಷೆಯನ್ನು ಹೊಂದಿದ್ದೆವು. 48 ಕ್ಷೇತ್ರಗಳಲ್ಲಿ ಮೌಲ್ಯ ಮಾಪನ ಮಾಡಿದ್ದೆವು. ಯೋಚನೆ ಮಾಡಿದ್ದಲ್ಲಿ ಎಡವಿದೆವು. ಜನರು ಬದಲಾವಣೆಗಾಗಿ ವೋಟ್​ ಮಾಡಿದ್ದಾರೆ. ನೀವು ನನ್ನ ಟ್ವೀಟ್​ ಸೇವ್​ ಮಾಡಿಕೊಂಡಿದ್ದರೆ, ಅದನ್ನು ಹಾಗೇ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.

    ಇನ್ನು ಚುನಾವಣಾ ಫಲಿತಾಂಶಕ್ಕೆ ಬರುವುದಾರೆ, ಸದ್ಯದ ಟ್ರೆಂಡ್​ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 52 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಆಪ್​ ಉಳಿದ 10 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ 6 ಸ್ಥಾನಗಳಲ್ಲಿ ವಿಜಯೋತ್ಸವ ಆಚರಿಸಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್​ ಖಾತೆ ತೆರೆಯುವಲ್ಲಿ ವಿಫಲವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts