More

    ಸ್ವಂತ ಕಾರನ್ನೇ ಹೊಂದಿಲ್ಲದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಆಸ್ತಿಯ ಮೌಲ್ಯವೆಷ್ಟು?

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಮತ್ತು ಆಮ್​ ಆದ್ಮಿ ಪಕ್ಷದ ನಡುವಿನ ಜಿದ್ದಾಜಿದ್ದಿಯ ಅಖಾಡವಾಗಿ ಮಾರ್ಪಾಡಾಗಿದೆ. ಮತದಾನಕ್ಕೆ ಇನ್ನು ಮೂರು ದಿನಗಳು ಬಾಕಿ ಇದ್ದು, ಚುನಾವಣಾ ಪ್ರಚಾರ ಭರಾಟೆ ಜೋರಾಗಿದೆ. ಆಪ್​ನಿಂದ ನವದೆಹಲಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಎಂ ಅರವಿಂದ್​ ಕೇಜ್ರಿವಾಲ್​ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ.

    ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್​ ಪ್ರಕಾರ ಕೇಜ್ರಿವಾಲ್​ ಒಟ್ಟು 3.4 ಕೋಟಿ ರೂ. ಸ್ಥಿರಾಸ್ತಿ ಮತ್ತು ಚರಾಸ್ಥಿಯ ಆಸ್ತಿಯ ಒಡೆಯರಾಗಿರಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 1.3 ಕೋಟಿ ರೂ. ಏರಿಕೆಯಾಗಿದೆ. 2015ರಲ್ಲಿ 2.1 ಕೋಟಿ ರೂ. ಆಸ್ತಿಯ ಮೌಲ್ಯವನ್ನು ಕೇಜ್ರಿವಾಲ್​ ಘೋಷಿಸಿಕೊಂಡಿದ್ದರು.

    ನಗದು ಮತ್ತು ಬಂಡವಾಳದಂತಹ ಚರಾಸ್ತಿಯ ಮೌಲ್ಯ 9.95 ಲಕ್ಷ ರೂ. ಆಗಿದ್ದು, ಪತ್ನಿ ಸುನಿತಾ ಅವರ ಚರಾಸ್ತಿ 12 ಲಕ್ಷ ರೂ. ಮೌಲ್ಯದ 320 ಗ್ರಾಂ ಚಿನ್ನ ಹಾಗೂ 40 ಸಾವಿರ ಮೌಲ್ಯದ 1 ಬೆಳ್ಳಿ ಒಳಗೊಂಡಂತೆ ಒಟ್ಟು 57.07 ಲಕ್ಷ ರೂ. ಇದೆ. 2015ರಲ್ಲಿ ಕೇಜ್ರಿವಾಲ್​ ಅವರ ಚರಾಸ್ತಿ 2.26 ಲಕ್ಷ ರೂ. ಹಾಗೂ ಪತ್ನಿ ಸುನಿತಾ ಅವರ ಚರಾಸ್ತಿ 15.28 ಲಕ್ಷ ರೂ. ಇತ್ತು.

    ವಿಶೇವೆಂದರೆ 2014-15ರಲ್ಲಿ 7.42 ಲಕ್ಷ ಇದ್ದ ಕೇಜ್ರಿವಾಲ್ ಅವರ​ ಆದಾಯವು 2018-19ರಲ್ಲಿ 2.81 ಲಕ್ಷಕ್ಕೆ ಕುಸಿದಿದೆ. ಅವರ ಪತ್ನಿ ಸುನಿತಾ ಅವರ ಆದಾಯದಲ್ಲೂ ಕುಸಿತ ಕಂಡಿದ್ದು, 2014-15ರಲ್ಲಿ 12.08 ಲಕ್ಷ ರೂ. ಇದ್ದ ಆದಾಯ 2018-19ರಲ್ಲಿ 9.94 ಲಕ್ಷ ರೂ.ಗೆ ಕುಸಿದಿದೆ. ವಿಶೇಷವೆಂದರೆ ಕೇಜ್ರಿವಾಲ್​ ಅವರು ಈವರೆಗೂ ಸ್ವಂತ ಕಾರನ್ನೇ ಹೊಂದಿಲ್ಲ.

    ಕಳೆದ ಬಾರಿ 92 ಲಕ್ಷ ರೂ. ಇದ್ದ ಕೇಜ್ರಿವಾಲ್​ ಅವರ ಸ್ಥಿರಾಸ್ತಿಯು ಈ ಬಾರಿ 1.77ಕ್ಕೆ ಏರಿಕೆಯಾಗಿದೆ. ಆದರೆ, ಪತ್ನಿ ಸುನಿತಾ ಅವರ ಸ್ಥಿರಾಸ್ತಿಯಲ್ಲಿ ಯಾವುದೇ ಬದಲಾವಣೆ ಆಗದೇ 1 ಕೋಟಿ ರೂ.ನಲ್ಲಿ ನಿಂತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts