More

    ಗೆಲುವಿನ ಹಳಿಗೇರಿದ ಡೆಲ್ಲಿ ತಂಡ

    ಶಾರ್ಜಾ: ಅರಬ್ ರಾಷ್ಟ್ರದಲ್ಲಿ ರನ್ ಮಳೆಗೆ ಸಾಕ್ಷಿಯಾದ ಮತ್ತೊಂದು ಹೋರಾಟದಲ್ಲಿ ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-13ರ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ಎದುರು ರೋಚಕ ಜಯ ದಾಖಲಿಸಿತು. ಕೆಕೆಆರ್ ತಂಡದ ಇವೊಯಿನ್ ಮಾರ್ಗನ್ (44 ರನ್, 18 ಎಸೆತ, 1 ಬೌಂಡರಿ, 5 ಸಿಕ್ಸರ್) ಪ್ರತಿಹೋರಾಟದ ನಡುವೆಯೂ ಡೆಲ್ಲಿ ತಂಡ 18 ರನ್‌ಗಳಿಂದ ಜಯ ದಾಖಲಿಸಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಹೋರಾಟದಲ್ಲಿ ಉಭಯ ತಂಡಗಳು ರನ್‌ಹೊಳೆಯನ್ನೇ ಹರಿಸಿದವು. ಇದರೊಂದಿಗೆ ಡೆಲ್ಲಿ ಗೆಲುವಿನ ಹಳಿಗೇರಿತು.

    ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ನಾಯಕ ಶ್ರೇಯಸ್ ಅಯ್ಯರ್ (88*ರನ್, 38ಎಸೆತ, 7 ಬೌಂಡರಿ, 6 ಸಿಕ್ಸರ್) ಹಾಗೂ ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ (66ರನ್, 41 ಎಸೆತ, 4 ಬೌಂಡರಿ, 4 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 228 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ತಂಡ, ಬಿರುಸಿನ ಆರಂಭದ ನಡುವೆಯೂ 8 ವಿಕೆಟ್‌ಗೆ 210 ರನ್ ಗಳಿಸಲಷ್ಟೇ ಶಕ್ತವಾಯಿತು.

    ಸ್ಫೋಟಕ ಬ್ಯಾಟ್ಸ್‌ಮನ್ ನಿತೀಶ್ ರಾಣಾ (58ರನ್, 35 ಎಸೆತ, 4 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ನೀಡಿದರು. ಆನ್ರಿಚ್ ನೋರ್ಜೆ (33ಕ್ಕೆ 3) ಹಾಗೂ ಹರ್ಷಲ್ ಪಟೇಲ್ (34ಕ್ಕೆ 2) ಜೋಡಿ ಕೆಕೆಆರ್‌ಗೆ ಆಘಾತ ನೀಡಿತು. ಇದರ ನಡುವೆಯೂ ಮಾರ್ಗನ್ ಹಾಗೂ ರಾಹುಲ್ ತ್ರಿಪಾಠಿ (36 ರನ್, 16 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ 31 ಎಸೆತಗಳಿಗೆ 78 ರನ್ ಕಲೆಹಾಕಿ ಪ್ರತಿಹೋರಾಟ ತೋರಿತು. ಆದರೆ, ಅಂತಿಮ ಮೂರು ಓವರ್‌ಗಳಲ್ಲಿ ಕೆಕೆಆರ್ ಬ್ಯಾಟ್ಸ್‌ಮನ್‌ಗಳಿಗೆ ಡೆಲ್ಲಿ ಕಡಿವಾಣ ಹೇರಿತು.

    ಡೆಲ್ಲಿ ಕ್ಯಾಪಿಟಲ್ಸ್: 4 ವಿಕೆಟ್‌ಗೆ 228 (ಪೃಥ್ವಿ ಷಾ 66, ಶ್ರೇಯಸ್ ಅಯ್ಯರ್ 88, ಆಂಡ್ರೆ ರಸೆಲ್ 29ಕ್ಕೆ 2, ಕಮಲೇಶ್ ನಾಗರಕೋಟಿ 35ಕ್ಕೆ 1), ಕೋಲ್ಕತ ನೈಟ್ ರೈಡರ್ಸ್‌: 8 ವಿಕೆಟ್‌ಗೆ 210 (ಶುಭಮಾನ್ ಗಿಲ್ 28, ನಿತೀಶ್ ರಾಣಾ 58, ಮಾರ್ಗನ್ 44, ರಾಹುಲ್ ತ್ರಿಪಾಠಿ 36, ಆನ್ರಿಚ್ ನೋರ್ಜೆ 33ಕ್ಕೆ 3, ಹರ್ಷಲ್ ಪಟೇಲ್ (34ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts