More

    IPL 2024, CSKvsDC: ಫಲಿಸಲಿಲ್ಲ ಧೋನಿ ಹೋರಾಟ! ಅಬ್ಬರಿಸಿದ ಡೆಲ್ಲಿ, ಮುಗ್ಗರಿಸಿದ ಸಿಎಸ್​ಕೆ

    ಚೆನ್ನೈ: ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್​ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ರಿಷಭ್ ಪಂತ್ ಕ್ಯಾಪ್ಟನ್ಸಿಯ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಯಿತು. ಟಾಸ್ ಗೆದ್ದ ಡೆಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು 20 ಓವರ್​​ಗಳಲ್ಲಿ 192 ರನ್ ಗುರಿಯನ್ನು ಸಿಎಸ್​ಕೆಗೆ ನೀಡಿತ್ತು. ಆದರೆ, ಗುರಿ ತಲುಪುವಲ್ಲಿ ಮುಗ್ಗರಿಸಿದ ರುತುರಾಜ್ ಪಡೆ, ರನ್​ಗಳಿಂದ ಜಯ ಕಳೆದುಕೊಂಡಿತು. ಇದರಿಂದ ಟೂರ್ನಿಯ ಮೊದಲ ಸೋಲನ್ನು ಸಿಎಸ್​ಕೆ ದಾಖಲಿಸಿದೆ.

    ಇದನ್ನೂ ಓದಿ: ಎಚ್‌ಕೆಇ ಖಾತೆಯಲ್ಲಿ 165 ಕೋಟಿ ರೂ.ಜಮಾ :ಡಾ.ಭೀಮಾಶಂಕರ ಬಿಲಗುಂದಿ

    192 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಪಡೆ ಆರಂಭಿಕ ಹಂತದಲ್ಲೇ ಕ್ಯಾಪ್ಟನ್ ರುತುರಾಜ್​ರನ್ನು 1 ರನ್​ಗೆ ಕಳೆದುಕೊಂಡಿತು. ನಾಯಕನ ಬೆನ್ನಲ್ಲೇ ರಚಿನ್ ರವೀಂದ್ರ 2 ರನ್​ಗೆ ಕೂಡ ಪೆವಿಲಿಯನ್ ಹಾದಿಹಿಡಿದರು. ಇನ್ನು ಕೆಲ ಸಮಯ ಕ್ರೀಸ್​ನಲ್ಲಿ ಬೇರೂರಿದ್ದ ಅಜಿಂಕ್ಯ ರಹಾನೆ 45 ಮತ್ತು ಡೆರಿಯಲ್ ಮಿಚೆಲ್ 34 ಜೋಡಿಯಾಗಿ 79 ರನ್​ಗಳನ್ನು ತಂಡಕ್ಕೆ ಕೊಡುಗೆಯಾಗಿ ಕೊಟ್ಟರು.

    ಇನ್ನು ಶಿವಂ ದುಬೆ ಕೂಡ ಅಬ್ಬರಿಸುವಲ್ಲಿ ವಿಫಲರಾದರು. ಒಬ್ಬರ ಹಿಂದೆಯೇ ಮತ್ತೊಬ್ಬರ ವಿಕೆಟ್ ಕಳೆದುಕೊಂಡ ಸಿಎಸ್​ಕೆ, ಅಂತಿಮವಾಗಿ ಮಹೇಂದ್ರ ಸಿಂಗ್ ಧೋನಿ ಮತ್ತು ಜಡೇಜಾ ಜೋಡಿಯಾಟವನ್ನು ಕಣ್ತುಂಬಿಕೊಂಡಿತು. ಕಡೆಯ ಓವರ್​ವರೆಗೂ ಹೋರಾಟ ನಡೆಸಿದರೂ ಗೆಲುವು ದಾಖಲಿಸುವಲ್ಲಿ ಮಾತ್ರ ಸಿಎಸ್​ಕೆ ಮುಗ್ಗರಿಸಿತು. ಡೆಲ್ಲಿ ವಿರುದ್ಧ 20 ರನ್​​ಗಳಿಂದ ಸಿಎಸ್​ಕೆ ಸೋಲು ಅನುಭವಿಸಿತು.

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಡೆಬ್ಯೂ ನಿರ್ದೇಶಕರ ಜತೆ ಕೆಲಸ ಮಾಡೋದಿಲ್ಲ! ನಟ ವಿಜಯ ದೇವರಕೊಂಡ ಹೇಳಿಕೆಯ ಹಿಂದಿದೆ ಈ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts