More

    ಪ್ರಚಾರದ ಹುಚ್ಚು ಬ್ಯಾಡವೋ ತಮ್ಮ… ಕಾನೂನು ವಿದ್ಯಾರ್ಥಿಗೆ ಕಠಿಣವಾಗಿ ಪಾಠ ಕಲಿಸಿದ ಹೈಕೋರ್ಟ್​

    ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ ಅನ್ನು ತೆರವುಗೊಳಿಸುವಲ್ಲಿ ಕೇಂದ್ರ ಸರ್ಕಾರ ತರಾತುರಿ ತೋರಿದೆ. ಕೇವಲ ತನ್ನ ಆರ್ಥಿಕ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಸೋಂಕು ತೀವ್ರಗತಿಯಲ್ಲಿ ಹರಡುವ ಜತೆಗೆ, ದೇಶದ ಜನರ ಪ್ರಾಣವನ್ನೂ ಅಪಾಯ ಬಂದೊದಗಿದೆ. ಆದ್ದರಿಂದ, ಅನ್​ಲಾಕ್​ 1.0 ಅನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ 5ನೇ ವರ್ಷದ ಕಾನೂನು ವಿದ್ಯಾರ್ಥಿ ಅರ್ಜುನ್​ ಅಗರ್​ವಾಲ್​ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ತಿರಸ್ಕರಿಸಿದೆ.

    ಜತೆಗೆ, ಪ್ರಚಾರದ ಹುಚ್ಚಿನಿಂದಾಗಿ ಇಂಥ ಅರ್ಜಿಯನ್ನು ದಾಖಲಿಸಲಾಗಿದೆ. ಆದ್ದರಿಂದ, ಇನ್ನೊಮ್ಮೆ ಈ ರೀತಿ ಮಾಡದಂತೆ ಅವರಿಗೆ ಎಚ್ಚರಿಕೆ ನೀಡುವ ಜತೆಗೆ ನ್ಯಾಯಪೀಠ, 20 ಸಾವಿರ ರೂಪಾಯಿ ದಂಡ ವಿಧಿಸಿದೆ.

    ಅನ್​ಲಾಕ್​ 1.0ದಲ್ಲಿ ಕೇಂದ್ರ ಸರ್ಕಾರ ಪ್ರತಿಪಾದಿಸಿರುವ ಮಾರ್ಗಸೂಚಿಯನ್ನು ಪ್ರಶ್ನಿಸಿದ್ದ ಅವರು, ನಿರ್ಬಂಧಿತ ಚಟುವಟಿಕೆಗಳ ಮರುಆರಂಭಕ್ಕೆ ಅನುಮತಿ ನೀಡುವ ಅದರ ಕ್ರಮ ನ್ಯಾಯಸಮ್ಮತವಲ್ಲ ಎಂದು ಅರ್ಜುನ್​ ಅಗರ್​ವಾಲ್​ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
    ಇದರ ವಿಚಾರಣೆ ನಡೆಸಿದ ನ್ಯಾಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸುಬ್ರಮೊಣಿಯಂ ಪ್ರಸಾದ್​ ಅವರಿದ್ದ ನ್ಯಾಯಪೀಠ, ಅರ್ಜುನ್​ ಅಗರ್​ವಾಲ್​ ಅವರ ಅರ್ಜಿ ಸಂಪೂರ್ಣ ತಪ್ಪುಮಾಹಿತಿಗಳಿಂದ ಕೂಡಿದೆ. ಕೇವಲ ಪ್ರಚಾರ ಪಡೆಯುವ ಉದ್ದೇಶದಿಂದ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

    ಇದನ್ನೂ ಓದಿ: ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು ಮತ್ತೊಂದು ತಬ್ಲಿಘಿ ಸಮಾವೇಶ

    ಕೇಂದ್ರ ಸರ್ಕಾರ ಮಾರ್ಚ್​ನಿಂದ ಇದುವರೆಗೆ ಕೋವಿಡ್​-19 ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರಣಿ ಆದೇಶಗಳನ್ನು ಹೊರಡಿಸಿದೆ. ನಿರ್ಬಂಧಗಳು ಜಾರಿಯಲ್ಲಿದ್ದ ಸಂದರ್ಭದಲ್ಲಿ ಜನರಿಗೆ ಹೆಚ್ಚಿನ ಕಷ್ಟವಾಗದಂತೆ ಕ್ರಮ ಕೈಗೊಂಡಿದೆ. ಕಾಲಕಾಲಕ್ಕೆ ಅದು ಆರ್ಥಿಕ ಉತ್ತೇನ ಪ್ಯಾಕೇಜ್​ಗಳನ್ನು ಘೋಷಿಸುವ ಮೂಲಕ ಜನರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ನ್ಯಾಯಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.
    ವಿಶ್ವಾದ್ಯಂತ ನಿರ್ಬಂಧಗಳನ್ನು ಸಡಿಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್​-19 ಹರಡುವಿಕೆಯನ್ನು ತಡೆಯುವ ಜತೆಗೆ ನಿರ್ದಿಷ್ಟ ವರ್ಗದ ಜನರು ಉಪವಾಸದಿಂದ ಬಳಲದಂತೆ ನೋಡಿಕೊಳ್ಳಲು ಸರ್ಕಾರ ಕಾಲಕಾಲಕ್ಕೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದೆ.

    ಲಾಕ್​ಡೌನ್​ ಅನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಇದನ್ನು ಗಮನಿಸಿದಾಗ ಲಾಕ್​ಡೌನ್​ ತೆರವುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತರಾತುರಿ ತೋರಿದೆ ಎನಿಸುತ್ತಿಲ್ಲ. ಸರ್ಕಾರ ದೇಶದಲ್ಲಿನ ಕೋವಿಡ್​-19 ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಕರೊನಾ ಸೋಂಕು ಹರಡುವಿಕೆ ವ್ಯಾಪಕವಾಗುತ್ತಿದೆ ಎಂದು ಅನಿಸಿದಾಗ ಪರಿಸ್ಥಿತಿಗೆ ಅನುಗುಣವಾಗಿ ಮತ್ತೊಮ್ಮೆ ಲಾಕ್​ಡೌನ್​ ಜಾರಿಗೊಳಿಸಲು ಅದು ಸಿದ್ಧವಿದೆ ಎಂದು ಅಭಿಪ್ರಾಯಪಟ್ಟಿದೆ.

    ಕರೊನಾ ಬಗ್ಗೆ ಎಚ್ಚರಿಸಿ ಸರ್ಕಾರದ ಶಿಕ್ಷೆಗೆ ಗುರಿಯಾಗಿ ಮೃತಪಟ್ಟ ವೈದ್ಯನ ಪತ್ನಿಗೆ ಮಗು ಜನನ: ಭಾವುಕ ಮಾತು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts