More

    ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು ಮತ್ತೊಂದು ತಬ್ಲಿಘಿ ಸಮಾವೇಶ

    ರಾಮನಗರ: ಕರೊನಾ ಈಗಷ್ಟೇ ವ್ಯಾಪಕ ರೂಪ ಪಡೆಯುತ್ತಿರುವ ರಾಮನಗರದಲ್ಲಿ ನಡೆಯಬೇಕಿದ್ದ ತಬ್ಲಿಘಿಗಳ ಸಮಾವೇಶ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿ ಹೋಯಿತೆ? ಇಂಥದ್ದೊಂದು ಚರ್ಚೆ ರಾಮನಗರದಲ್ಲಿ ಈಗ ನಡೆದಿದೆ.

    ರಾಮನಗರ ಟೌನ್, ನಾಲಬಂದ್ವಾಡಿ, ಮೋತಿನಗರ ಮುಖ್ಯರಸ್ತೆಯಲ್ಲಿ ಹೊಸದಾಗಿ ಕಟ್ಟಲಾಗಿರುವ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ನಂತರ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಭೆಗೆ ಈಗಾಗಲೇ ಹೆಚ್ಚು ಸೋಂಕಿತರನ್ನು ಹೊಂದಿರುವ ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಮೈಸೂರು ಸೇರಿ ವಿವಿಧ ಜಿಲ್ಲೆಗಳಿಂದ 1000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಬ್ಲಿಘಿಗಳು ಭಾಗವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಗುಪ್ತಚರ ಇಲಾಖೆಗೆ ಮೊದಲೇ ತಿಳಿದಿತ್ತು ಎನ್ನಲಾಗಿದೆ. ಇದನ್ನೂ ಓದಿ: ತಂದೆಯಿಲ್ಲದ ಹೆಣ್ಣು ಮಗುವಿನ ಸಂಪೂರ್ಣ ವಿದ್ಯಾಭ್ಯಾಸಕ್ಕೆ ನೆರವಾದ ಕಿಚ್ಚ ಸುದೀಪ್​

    ಆದರೆ, ಮಸೀದಿ ಪ್ರದೇಶದಲ್ಲಿ 60-70 ಮಂದಿಗಷ್ಟೇ ಪ್ರಾರ್ಥನೆಗೆ ಅವಕಾಶವಿರುವಾಗ ಇಷ್ಟೊಂದು ಜನ ಸೇರುವುದರಿಂದ ಕೋವಿಡ್-19 ಸೋಂಕು ಹರಡುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರ ಸಮಯಪ್ರಜ್ಞೆಯಿಂದ ತಬ್ಲಿಗಳ ಸಭೆ ರದ್ದಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ನಿರಾಕರಿಸಿದ್ದಾರೆ.

    ಬಡವರ ಹಣದಲ್ಲಿ ಕುಬೇರನಾದ ಕೆಐಎಡಿಬಿ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts