More

    ಸೋಲು,ಗೆಲುವಿನ ವೇದಿಕೆಯಲ್ಲ

    ಕಾರಟಗಿ: ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸುವ ಶಿಕ್ಷಕರು ಹಾಗೂ ಪಾಲಕರ ಕರ್ತವ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಹೇಳಿದರು.

    ಇದನ್ನೂ ಓದಿ: ಕ್ರೀಡೆಯಲ್ಲಿನ ಸೋಲು, ಗೆಲುವಿನ ಮೆಟ್ಟಿಲು: ಉಷಾ ದಾಸರ

    ಪಟ್ಟಣದ ವಿದ್ಯಾನಗರದಲ್ಲಿನ ಆಕ್ಸ್‌ಫರ್ಡ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕಾರಟಗಿ ಪಶ್ಚಿಮ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಪ್ರತಿ ಮಗೂವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಪ್ರಚುರ ಪಡಿಸಲು ಸೂಕ್ತ ಪ್ರೋತ್ಸಾಹ ಮತ್ತು ವೇದಿಕೆಯ ಕೊರತೆ ಇರುತ್ತದೆ. ಸರ್ಕಾರ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಎನ್ನುವ ವಿಭಿನ್ನ ಕಾರ್ಯಕ್ರಮ ರೂಪಿಸಿದೆ.

    ಆದರೂ ಕೆಲ ಮಕ್ಕಳು ಪ್ರತಿಭೆ ಹೊರಹಾಕಲು ಹಿಂಜರಿಯುತ್ತವೆ. ಅಂತವರನ್ನು ಗುರುತಿಸಿ ಸಮಾಜಕ್ಕೆ ತೋರ್ಪಡಿಸುವ ಜತೆಗೆ ಪ್ರೋತ್ಸಾಹಿಸುವ ಹೋಣೆ ನಮ್ಮ ಮೇಲಿದೆ. ಈ ವೇದಿಕೆ ಗೆಲುವು ಮತ್ತು ಸೋಲಿಗೆ ಸಂಬಂಧಿಸಿದ್ದಲ್ಲ. ಪ್ರತಿಭೆ ಗುರುತಿಸಿ ನೀರೆರೇದು ಬೆಳೆಸುವ ಮಹತ್ತರವಾದ ಕಾರ್ಯ ಎಂದರು.

    ಕಾರಟಗಿ ಪಶ್ಚಿಮ ವಲಯ ಮಟ್ಟದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ 22ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ತೆಲುಗು, ಸಂಸ್ಕೃತಿ, ಅರೇಬಿಕ್ ಕಂಠಪಾಠ, ಲಘು ಸಂಗೀತ, ಛದ್ಮವೇಷ, ಕಥೆ ಹೇಳುವುದು,

    ಚಿತ್ರಕಲೆ, ಅಭಿನಯ ಗೀತೆ, ಕ್ಲೇಮಾಡಲಿಂಗ್, ಭಕ್ತಿಗೀತೆ, ಪದ್ಯ ವಾಚನ, ಮಿಮಿಕ್ರಿ, ಜನಪದ ಗೀತೆ ಮತ್ತು ನೃತ್ಯ, ಭರತನಾಟ್ಯ, ಚರ್ಚೆಸ್ಪರ್ಧೆ, ರಂಗೋಲಿ, ಗಜಲ್, ಕವ್ವಾಲಿ, ರಸಪ್ರಶ್ನೆ ಸೇರಿ ವಿವಿಧ ಪ್ರಕಾರಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

    ಆಕ್ಸ್‌ಫರ್ಡ್ ಪಬ್ಲಿಕ್ ಸ್ಕೂಲ್‌ನ ಸಂಸ್ಥಾಪಕ ಅಧ್ಯಕ್ಷ ಸಿದ್ದು ವಳಕಲದಿನ್ನಿ, ಸಿಆರ್‌ಪಿಗಳಾದ ತಿಮ್ಮಣ್ಣ ನಾಯಕ, ಮಂಜುನಾಥ, ನಾಗರಾಜ ಗಂಗಾವತಿ, ಮುಖ್ಯಶಿಕ್ಷಕರಾದ ಬಸಯ್ಯ ಹಿರೇಮಠ, ಅಂಬಿಕಾ ವಳಕಲದಿನ್ನಿ, ನಿವೃತ್ತ ಶಿಕ್ಷಕರಾದ ಸೋಮಲಿಂಗಪ್ಪ, ಅಲೀಹುಸೇನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts