More

    ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ

    ಬೆಂಗಳೂರು: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಜಯಿಸಿದ ಮೊದಲ ಭಾರತೀಯರೆನಿಸುವ ಮೂಲಕ ಕ್ರೀಡಾ ಜಗತ್ತಿನಲ್ಲಿ ಸಂಚಲನ ಮೂಡಿಸಿದವರು ಕನ್ನಡಿಗ ಪ್ರಕಾಶ್ ಪಡುಕೋಣೆ. ಬುಧವಾರ ಅವರು 65ನೇ ವಯಸ್ಸಿಗೆ ಕಾಲಿಟ್ಟಿದ್ದು, ಅವರ ಪುತ್ರಿ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಶೇಷ ಸಂದೇಶದ ಮೂಲಕ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ.

    ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ

    ಅಪ್ಪ ತನ್ನನ್ನು ಮುದ್ದಿಸುತ್ತಿರುವ ಬಾಲ್ಯದ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ದೀಪಿಕಾ ಪಡುಕೋಣೆ, ‘ಎಂದೆಂದಿಗೂ ನಾನು ಪಡೆದ ಅತಿ ಶ್ರೇಷ್ಠ ಆಫ್​-ಸ್ಕ್ರೀನ್ ಹೀರೋ. ನಿಜವಾದ ಚಾಂಪಿಯನ್ ಎನಿಸುವುದು ವೃತ್ತಿಪರ ಸಾಧನೆಗಳಿಂದ ಮಾತ್ರವಲ್ಲ, ಅತ್ಯುತ್ತಮ ಮನುಷ್ಯರಾಗಿರುವುದರಿಂದ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಹ್ಯಾಪಿ 65ನೇ ಬರ್ತ್‌ಡೇ ಪಪ್ಪಾ, ವಿ ಲವ್ ಯೂ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗಿನ ಶವ ಮನೆಯಲ್ಲಿಯೇ ಸಿಕ್ಕಿತು ಕೊಳೆತ ಸ್ಥಿತಿಯಲ್ಲಿ!

    ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಇಂಡೋನೇಷ್ಯಾದ ಲಿಯೆಮ್ ಸ್ವಿ ಕಿಂಗ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸುವ ಮೂಲಕ ಕ್ರೀಡಾಲೋಕದಲ್ಲಿ ಭಾರತದ ಹೆಸರನ್ನು ಬೆಳಗಿದ್ದರು. ಆಗ ಅವರಿಗಿನ್ನೂ 24 ವರ್ಷ ವಯಸ್ಸು. ಕಿಂಗ್ ಫೈನಲ್ ಹಾದಿಯಲ್ಲೂ ಒಂದೂ ಗೇಮ್ ಸೋತಿರಲಿಲ್ಲ. ಆದರೆ ಪ್ರಶಸ್ತಿ ಹೋರಾಟದಲ್ಲಿ ಪ್ರಕಾಶ್ ಪಡುಕೋಣೆ 15-3, 15-10ರಿಂದ ಜಯಿಸಿದ್ದರು. 1971ರಲ್ಲಿ 16ನೇ ವಯಸ್ಸಿನಲ್ಲೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ಜಯಿಸಿದ್ದ ಪ್ರಕಾಶ್ ಪಡುಕೋಣೆ, ಈಗಲೂ ಈ ಸಾಧನೆ ಮಾಡಿದ ಅತಿಕಿರಿಯರೆನಿಸಿದ್ದಾರೆ. ನಂತರ 1979ರವರೆಗೂ ಸತತವಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಜಯಿಸುತ್ತ ಬಂದಿದ್ದ ಪ್ರಕಾಶ್, 1989ರಲ್ಲಿ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ನಿವೃತ್ತಿ ಹೊಂದಿದ್ದರು.

    ಕ್ರಿಕೆಟ್ ಕಾಮೆಂಟರಿಗೆ ಮಹಿಳೆಯರು ಬೇಡ ಎಂದ ಬಾಯ್ಕಟ್‌ಗೆ ಲೀಸಾ ಸೆಡ್ಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts