More

    VIDEO| ಮುಂಬೈನ ಬೀದಿಗಳಿದ ದೀಪಿಕಾ ಪಡುಕೋಣೆ; ನಟಿಯನ್ನು ಕಂಡ ಸಾರ್ವಜನಿಕರ ಪ್ರತಿಕ್ರಿಯೆ ನೋಡಿ ಹೇಗಿದೆ…

    ಮುಂಬೈ: ಆ್ಯಸಿಡ್​ ದಾಳಿ ಆದವರ ಜತೆ ಜನ ಹೇಗೆ ವರ್ತಿಸುತ್ತಾರೆ ಎಂದು ತಿಳಿಯಲು ನಟಿ ದೀಪಿಕಾ ಪಡುಕೋಣೆ ಒಂದು ಹೊಸ ಪ್ರಯೋಗ ಮಾಡಿದ್ದಾರೆ.

    ಮುಂಬರುವ ಹೊಸ ಚಲನಚಿತ್ರ ಚಪಾಕ್​ನಲ್ಲಿನ ಆ್ಯಸಿಡ್​ ದಾಳಿಗೊಳಗಾದ ಪಾತ್ರಧಾರಿ ವೇಷ ಮತ್ತು ಮೇಕ್​ಅಪ್​ನಲ್ಲಿ ಮುಂಬೈನ ಬೀದಿಗಿಳಿದಿದ್ದರು. ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ ನಟಿ ದೀಪಿಕಾ. ಅದರಲ್ಲಿ ಮೊಬೈಲ್​ ಅಂಗಡಿ, ಮಾರುಕಟ್ಟೆ ಪ್ರದೇಶಗಳಲ್ಲಿ ಓಡಾಡಿದ್ದಾರೆ. ಯಾರಿಗೂ ತಿಳಿಯದಂತೆ ಕ್ಯಾಮರಾಗಳು ಅವರನ್ನು ಹಿಂಬಾಲಿಸಿವೆ.

    ಅಂಗಡಿಗಳಿಂದ ಹೊರ ಬರುತ್ತಿದ್ದಂತೆ ದೀಪಿಕಾ ಅವರನ್ನು ಜನರು ವಿಚಿತ್ರವಾಗಿ ನೋಡುತ್ತಾರೆ. ಆದರಲ್ಲಿ ಕೆಲವರು ಅವರನ್ನು ಗುರುತಿಸುತ್ತಾರೆ. ಅವರ ಜತೆಗೆ ಆ್ಯಸಿಡ್​ ದಾಳಿಗೊಳಗಾದ ಕೆಲವರು ಇದ್ದಾರೆ. ಅವರು ಕೂಡ ಚಿತ್ರದಲ್ಲಿ ಪಾತ್ರವಾಗಿದ್ದಾರೆ.

    ಮೊದಲು ಒಂದು ಮೊಬೈಲ್​ ಅಂಗಡಿಗೆ ತೆರಳಿದಾಗ ಅಲ್ಲಿ ಅಂಗಡಿಯವ ಸ್ವಾಗತಿಸುತ್ತಾನೆ. ಅಲ್ಲಿನ ಕೆಲ ಹೆಣ್ಣುಮಕ್ಕಳು ಈಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಗಂಡಸರು ಆಕೆಯನ್ನು ಗಮನಿಸುತ್ತಾರೆ. ಆದರೆ ಯಾರೂ ಒರಟಾಗಿ ವರ್ತಿಸುವುದಿಲ್ಲ. ಹೀಗೆ ದೀಪಿಕಾ ಮಾರುಕಟೆಯಲ್ಲಿ ಸುತ್ತಾಡುತ್ತಾರೆ. ಕೆಲವರು ತಮ್ಮ ಮಗು ಈಕೆಯನ್ನು ನೋಡಬಾರದು ಎಂಬಂತೆ ಮಗುವಿನ ಮುಖ ಮುಚ್ಚುತ್ತಾರೆ.

    ವಿಡಿಯೋದ ಕೊನೆಯಲ್ಲಿ “ನಾನು ಈ ದಿನ ಎನೆಲ್ಲ ಕಲಿತೆ ಎಂಬುದು ಈ ವಿಡಿಯೋ ಮೂಲಕ ನಿಮ್ಮ ಮುಂದೆ ಇದೆ. ಆದರೆ ನೀವು ಇದನ್ನು ನಂಬಲಿಕ್ಕಿಲ್ಲ. ನಮ್ಮೆಲ್ಲರ ದೃಷ್ಟಿಕೋನ ಬದಲಾಗಬೇಕಿದೆ” ಎಂದಿದ್ದಾರೆ.

    ಚಪಾಕ್​ ಚಿತ್ರವು ಸತ್ಯ ಘಟನೆ ಆಧಾರಿತ ಸಿನಿಮಾ. ತನ್ನ 15ನೇ ವರ್ಷದಲ್ಲಿ ಆ್ಯಸಿಡ್​ ದಾಳಿಗೆ ಒಳಗಾದ ಲಕ್ಷ್ಮೀ ಅಗರ್​ವಾಲ್​ ಎಂಬುವವರ ಜೀವನಾಧರಿತ ಕತೆ ಇದೆ. ಮೇಘನಾ ಗುಲ್ಜಾರ್​ ಚಿತ್ರವನ್ನು ನಿರ್ದೇಶಿಸಿದ್ದು ಜನವರಿ 10ರಂದು ಬಿಡುಗಡೆಗೊಳ್ಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts