More

    ಐಪಿಎಲ್ ಹೊಸ ತಂಡ ಖರೀದಿ ರೇಸ್‌ನಲ್ಲಿ ರಣವೀರ್-ದೀಪಿಕಾ!

    ನವದೆಹಲಿ: ಐಪಿಎಲ್ ಟೂರ್ನಿಯ 2 ಹೊಸ ತಂಡಗಳ ಖರೀದಿಗೆ ಈಗಾಗಲೆ ದೇಶ-ವಿದೇಶದ ಪ್ರತಿಷ್ಠಿತ ಉದ್ಯಮಿಗಳು ಪೈಪೋಟಿಗಿಳಿದಿರುವ ನಡುವೆ ಇದೀಗ ದೇಶದ ತಾರಾ ಜೋಡಿಯೊಂದು ಕೂಡ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಬಾಲಿವುಡ್‌ನ ಸ್ಟಾರ್ ದಂಪತಿಯಾದ ರಣವೀರ್ ಸಿಂಗ್ ಮತ್ತು ಕನ್ನಡತಿ ದೀಪಿಕಾ ಪಡುಕೋಣೆ ಐಪಿಎಲ್ ತಂಡ ಖರೀದಿಗೆ ಆಸಕ್ತಿ ತೋರಿದ್ದಾರೆ.

    ಕಾರ್ಪೋರೇಟ್ ಕಂಪನಿಯೊಂದರ ಜತೆಗೂಡಿ ರಣವೀರ್-ದೀಪಿಕಾ ಬಿಡ್ ಸಲ್ಲಿಸಲಿದ್ದಾರೆ ಎನ್ನಲಾಗಿದೆ. 1983ರ ಕಪಿಲ್ ಡೆವಿಲ್ಸ್ ವಿಶ್ವಕಪ್ ಯಶೋಗಾಥೆಯ ‘83’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ರಣವೀರ್-ದೀಪಿಕಾ ಇದೀಗ ತೆರೆಯ ಹೊರಗೂ ಕ್ರಿಕೆಟ್ ನಂಟು ಬೆಳೆಸಲು ಮುಂದಾಗಿದ್ದಾರೆ. ಐಪಿಎಲ್ ಹೊಸ ತಂಡಗಳ ಮೂಲಬೆಲೆ 2 ಸಾವಿರ ಕೋಟಿ ರೂ. ಆಗಿದ್ದು, 3 ಸಾವಿರ ಕೋಟಿ ರೂ.ಗೂ ಅಧಿಕ ಬೆಲೆಗೆ ತಂಡಗಳು ಮಾರಾಟವಾಗುವ ನಿರೀಕ್ಷೆ ಇದೆ. 17-18 ಆಸಕ್ತರು ಈಗಾಗಲೆ 10 ಲಕ್ಷ ರೂ. ಮೌಲ್ಯದ ಟೆಂಡರ್ ದಾಖಲೆಪತ್ರ ಖರೀದಿಸಿದ್ದಾರೆ.

    ಐಪಿಎಲ್‌ನಲ್ಲಿ ಬಾಲಿವುಡ್ ತಾರೆಯರು ತಂಡಗಳ ಮಾಲೀಕರಾಗುವುದು ಹೊಸದೇನಲ್ಲ. ಈಗಾಗಲೆ ಶಾರುಖ್ ಖಾನ್-ಜೂಹಿ ಚಾವ್ಲಾ ಮತ್ತು ಪ್ರೀತಿ ಝಿಂಟಾ ಕ್ರಮವಾಗಿ ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಸಹ-ಮಾಲೀಕರಾಗಿದ್ದಾರೆ. ಈ ಹಿಂದೆ ಶಿಲ್ಪಾ ಶೆಟ್ಟಿ ರಾಜಸ್ಥಾನ ರಾಯಲ್ಸ್ ತಂಡದ ಸಹ-ಮಾಲೀಕರಾಗಿದ್ದರು.

    ಟಿ20 ವಿಶ್ವಕಪ್‌ಗೆ ಸ್ಕಾಟ್ಲೆಂಡ್ ತಂಡದ ಜೆರ್ಸಿ ವಿನ್ಯಾಸಗೊಳಿಸಿದ್ದು 12 ವರ್ಷದ ಬಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts