More

    ವಿಶ್ವಮಾನವತೆಯ ಸಾಲಿನಲ್ಲೇ ಏಕಾತ್ಮ ಮಾನವತೆ- ಇಂದು ದೀನದಯಾಳರ ಜಯಂತಿ

    ವಿಶ್ವಮಾನವತೆಯ ಸಾಲಿನಲ್ಲೇ ಏಕಾತ್ಮ ಮಾನವತೆ- ಇಂದು ದೀನದಯಾಳರ ಜಯಂತಿ“ನನ್ನ ಜೀವನದಲ್ಲಿ ಅಪಾರ ಪ್ರಭಾವ ಬೀರಿದವರು ಇಬ್ಬರು ಮಹಾನ್​ ವ್ಯಕ್ತಿಗಳು. ರಾಜ್​ಪಾಲ್​ ಪುರಿ ಮತ್ತು ಪಂಡಿತ ದೀನದಯಾಳ್​ ಉಪಾಧ್ಯಾಯ, ರಾಜ್​ಪಾಲ್​ ನನ್ನ ಪ್ರೌಢ ವಯಸ್ಸಿನಲ್ಲಿ ಬೀರಿದ ಪರಿಣಾಮ ಸುಲಭವಾಗಿ ಅಳಿಸುವಂಥದ್ದಲ್ಲ, ರಾಷ್ಟ್ರಕ್ಕೆ ಸಲ್ಲಿಸಬಹುದಾದ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರಪ್ರೇಮದ ಬೀಜಗಳನ್ನು ನನ್ನೊಳಗೆ ಅವರು ಬಿತ್ತಿದರು. ಈ ದಾರಿಯಲ್ಲಿ ಪಂಡಿತ್​ ದೀನದಯಾಳ್​ಜೀ ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ನನ್ನನ್ನು ಪ್ರಭಾವಿಸಿದರು. ರಾಜಕೀಯ ಕಾರ್ಯಕರ್ತನಾದ ನನಗೆ ಇವರಿಬ್ಬರೂ ನನ್ನ ಮನದಾಳದಲ್ಲಿ ಒಳ್ಳೆಯ ಅಡಿಗಲ್ಲು ಹಾಕಿದರು’.

    ಇವು ಭಾರತೀಯ ಜನತಾ ಪದ ಹಿರಿಯ ನಾಯಕ ಲಾಲಕಷ್ಣ ಆಡ್ವಾಣಿ ಅವರು ತಮ್ಮ ಆತ್ಮಕಥೆ “ನನ್ನ ದೇಶ ನನ್ನ ಜೀವನ’ ಕತಿಯಲ್ಲಿ ಪಂಡಿತ್​ ದೀನದಯಾಳರ ಕುರಿತು ಹೇಳುವ ಮಾತು. ಒಂದಿಡೀ ಸುದೀರ್ ಅಧ್ಯಾಯವನ್ನು ಆಡ್ವಾಣಿಯವರು ತಮ್ಮ ನೆಚ್ಚಿನ ನಾಯಕ ದೀನದಯಾಳರಿಗೆ ಮೀಸಲಿಟ್ಟಿದ್ದಾರೆ. ದೀನದಯಾಳರು ಎಂದ ಕೂಡಲೆ ಭಾರತೀಯ ಜನಸಂದ ನಾಯಕ, ಬಿಜೆಪಿಯ ಸೆದ್ಧಾಂತಿಕ ಅಡಿಪಾಯವನ್ನು ರೂಪಿಸಿದವರು ಎಂದು ರಾಜಕೀಯ ವಲಯದಲ್ಲಿ ತಿಳಿವಳಿಕೆ ಉಳ್ಳವರು ಹೇಳುತ್ತಾರೆ. ತುಸು ಹೆಚ್ಚು ಗೊತ್ತಿರುವವರು, ದೀನದಯಾಳ್​ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನದ ಬಗ್ಗೆ ಹೇಳುತ್ತಾರೆ. ಇವೆಲ್ಲವೂ ಸತ್ಯವಾದರೂ ಅದೆಲ್ಲವನ್ನೂ ಮೀರಿದ ವ್ಯಕ್ತಿತ್ವ ಪಂಡಿತ್​ ದೀನದಯಾಳ್​ ಉಪಾಧ್ಯಾಯ ಅವರದ್ದು.

    ರಾಜಕೀಯ ಕಾರ್ಯಕರ್ತರಷ್ಟೆ ಅಲ್ಲದೆ ಸೆದ್ಧಾಂತಿಕ ಬರಹಗಾರರು, ಪತ್ರಕರ್ತರೂ ಆಗಿದ್ದ ದೀನದಯಾಳರು ಹತ್ತಾರು ಸಾವಿರ ಪುಟಗಳಷ್ಟು ಬರೆದಿದ್ದಾರೆ. 2010ರಲ್ಲಿ ಬಿ.ಎಸ್​.ಯಡಿಯೂರಪ್ಪ ನೇತತ್ವದ ಸರ್ಕಾರದ ಅವಧಿಯಲ್ಲಿ ಕುವೆಂಪು ಭಾಷಾ ಭಾರತಿ ಸಂಸ್ಥೆ ಮೂಲಕ, ಪಂಡಿತ್​ ದೀನದಯಾಳ್​ ಉಪಾಧ್ಯಾಯರ ಸಮಗ್ರ ಬರಹಗಳನ್ನು ಕನ್ನಡದಲ್ಲಿ ತರಲಾಗಿದೆ. ಇದರಿಂದ ನನ್ನಂತಹ ಅನೇಕ ಆಸಕ್ತರಿಗೆ ದೀನದಯಾಳರ ವಿಚಾರಧಾರೆಯನ್ನು ಸುಲಲಿತವಾಗಿ ಓದಿ, ತಿಳಿದುಕೊಳ್ಳಲು ಅನುಕೂಲವಾಗಿದೆ.

    ಉತ್ತರಪ್ರದೇಶದ ಮಥುರಾ ಬಳಿಯ ಸಾಮಾನ್ಯ ಕುಟುಂಬದಲ್ಲಿ ದೀನದಯಾಳರು 1916ರ ಸೆಪ್ಟೆಂಬರ್​ 25ರಂದು ಜನಿಸಿದರು. ಅನೇಕ ಕಷ್ಟ, ದುರಂತಗಳು ಅವರ ಬಾಲ್ಯ ಮತ್ತು ನಂತರದ ದಿನಗಳಲ್ಲಿ ಆವರಿಸಿಕೊಂಡವು. ಈ ಕಷ್ಟಗಳ ನಡುವೆಯೇ ಬಿರ್ಲಾ ಕಾಲೇಜಿನಿಂದ ಇಂಟರ್​ ಮೀಡಿಯೆಟ್​ನ ಬೋರ್ಡ್​ ಪರೀೆಯಲ್ಲಿ ತೇರ್ಗಡೆ ಹೊಂದಿದರು. ಆಗ್ರಾದಲ್ಲಿ ಎಂ.ಎ. ಶಿಣ ಪೂರೈಸಿದರು. ನಂತರ ಆರೆಸ್ಸೆಸ್​ನಿಂದ ಪ್ರಭಾವಿತರಾಗಿ, 1937ರಲ್ಲಿ ಸಂದ “ಪ್ರಚಾರಕ’ ರಾಗಿ ಜೀವನ ಕಳೆಯಲು ನಿರ್ಧರಿಸಿದರು.

    ದೀನದಯಾಳರ ಮೇಲೆ ಅವರ ಕುಟುಂಬ ವಾತಾವರಣ ಪ್ರಭಾವ ಬೀರಿದೆಯಾದರೂ ಅವರಲ್ಲಿ ಅದಾಗಲೇ ಇದ್ದ ನೆತಿಕತೆ ಇಷ್ಟು ಎತ್ತರಕ್ಕೆ ಕೊಂಡೊಯ್ತು ಎಂಬುದಕ್ಕೆ ಬಾಲ್ಯದ ಟನೆಗಳೇ ಸಾ. ದೀನದಯಾಳರು ಬಾಲಕನಾಗಿದ್ದಾಗ ನಡೆದ ಟನೆ. ರಾತ್ರಿ 11 ಗಂಟೆ ಸುಮಾರಿಗೆ ಮನೆಯವರೆಲ್ಲ ಮಾತನಾಡುತ್ತ ಕುಳಿತಿದ್ದರು. 10-12 ಡಕಾಯಿತರ ಗುಂಪೊಂದು ಇದ್ದಕ್ಕಿದ್ದಂತೆ ಮನೆಗೆ ನುಗ್ಗಿತು. ಬಾಲಕ ದೀನದಯಾಳನನ್ನು ನೆಲಕ್ಕೆ ದಬ್ಬಿದ ಡಕಾಯಿತ ಎದೆಯ ಮೇಲೆ ಕಾಲಿಟ್ಟ. ಮನೆಯಲ್ಲಿರುವ ಎಲ್ಲ ಆಭರಣಗಳನ್ನು ಕೊಟ್ಟುಬಿಡುವಂತೆ, ಇಲ್ಲದಿದ್ದರೆ ಬಾಲಕನ ಹತ್ಯೆ ಮಾಡುವುದಾಗಿ ಕುಟುಂಬದವರನ್ನು ಬೆದರಿಸಿದ. ಏನು ನಡೆಯುತ್ತಿದೆ ಎಂದು ತಿಳಿಯದಿದ್ದ ಬಾಲಕ ಸ್ವಲ್ಪ ಸುಧಾರಿಸಿಕೊಂಡು, “ಡಕಾಯಿತರು ಎಂದರೆ ಶ್ರೀಮಂತರನ್ನು ಲೂಟಿ ಮಾಡಿ ಬಡವರಿಗೆ ಹಣ ಹಂಚುತ್ತಾರೆ ಎಂದು ಕೇಳಿದ್ದೆ. ಆದರೆ ನೀವು ನೋಡಿದರೆ ಬಡವರನ್ನೇ ಲೂಟಿ ಮಾಡುತ್ತಿದ್ದೀರಲ್ಲ?’ ಎಂದು ಮುಗ್ಧತೆಯಿಂದ ಪ್ರಶ್ನಿಸಿದ. ಬಾಲಕನ ಈ ಮಾತನ್ನು ಕೇಳಿದ ಡಕಾಯಿತರ ನಾಯಕ, ಲೂಟಿ ಮಾಡದೆ ಇಡೀ ತಂಡವನ್ನು ಕರೆದುಕೊಂಡು ಹಿಂದಿರುಗಿದನಂತೆ.

    ದೀನದಯಾಳರಲ್ಲಿದ್ದ ಈ ಮುಗ್ಧತೆ ಯೌವನವಾಸ್ಥೆಯಲ್ಲಿಯೂ ವ್ಯಕ್ತವಾದ ಟನೆಯೊಂದಿದೆ. ಅದನ್ನು, ಜನಸಂದ ಮತ್ತೊಬ್ಬ ಪ್ರಮುಖ ನಾಯಕ ನಾನಾಜಿ ದೇಶಮುಖರು ಈ ರೀತಿ ವಿವರಿಸಿದ್ದಾರೆ. “ಒಂದು ದಿನ ಬೆಳಗ್ಗೆ ನಾವಿಬ್ಬರೂ ಮಾರುಕಟ್ಟೆಗೆ ಹೋಗಿ ಎರಡು ಪೆಸೆ ತರಕಾರಿ ಕೊಂಡೆವು. ಇನ್ನೇನು ಮನೆ ಮುಟ್ಟಬೇಕು ಎನ್ನುವಷ್ಟರಲ್ಲಿ ದೀನದಯಾಳ್​ಜೀ ನಿಂತುಬಿಟ್ಟರು. ಅವರ ಕೆ ಜೇಬಿನಲ್ಲಿತ್ತು. ಅವರು ಹೇಳಿದರು “ನಾನಾ, ತಪ್ಪು ಮಾಡಿದ್ದೇವೆ’. ಏನೆಂದು ಕೇಳಿದಾಗ, “ನನ್ನ ಬಳಿ ನಾಲ್ಕು ಪೆಸೆ ಇತ್ತು. ಅದರಲ್ಲಿ ಒಂದು ಸವಕಲು ನಾಣ್ಯವಿತ್ತು. ತರಕಾರಿ ಮಾರುತ್ತಿದ್ದ ಆ ಮುದುಕಿಗೆ ಸವಕಲು ನಾಣ್ಯ ಕೊಟ್ಟು ಬಂದಿದ್ದೇವೆ. ಅವಳು ಏನೆಂದುಕೊಂಡಿರಬಹುದು? ಈಗಲೇ ವಾಪಸ್​ ಹೋಗಿ ಆಕೆಗೆ ಒಳ್ಳೆಯ ನಾಣ್ಯ ಕೊಟ್ಟು ಬರೋಣ’ ಎಂದರು. ಈ ಸಂಬಂಧ ಪಾಪಪ್ರಜ್ಞೆ ಅವರ ಮುಖದಲ್ಲಿ ಕಾಣುತ್ತಿತ್ತು. ವಾಪಸ್​ ಹೋಗಿ ಅಜ್ಜಿಯ ಹತ್ತಿರ ನಡೆದಿದ್ದನ್ನು ವಿವರಿಸಿದೆವು. ಅದಕ್ಕೆ ಅಜ್ಜಿ “ನಿಮ್ಮ ಸವೆದಿರುವ ನಾಣ್ಯವನ್ನು ಯಾರು ಗುರುತಿಸುತ್ತಾರೆ ಬಿಡಿ, ಹೋಗಿ, ಹೋಗಿ, ನೀವು ಕೊಟ್ಟಿರುವುದು ಪರವಾಗಿಲ್ಲ’ ಎಂದಳು. ಆದರೆ ದೀನದಯಾಳ್​ಜೀ ಅದನ್ನು ಕೇಳಿಸಿಕೊಳ್ಳಲೂ ಸಿದ್ಧರಿರಲಿಲ್ಲ, ಅವರು ಆ ಮುದುಕಿಯ ನಾಣ್ಯಗಳ ರಾಶಿಯಲ್ಲಿ ಆ ಸವಕಲು ನಾಣ್ಯವನ್ನು ಹುಡುಕಿ ತೆಗೆದರು. ಅದರ ಬದಲಾಗಿ ಒಳ್ಳೆಯ ನಾಣ್ಯ ಕೊಟ್ಟ ನಂತರವೇ ಅವರ ಮುಖದ ಮೇಲೆ ಕಳೆ ಬಂದಿತು. ಆ ಮುದುಕಿಯ ಕಣ್ಣುಗಳು ತೇವಗೊಂಡವು. “ನೀನು ತುಂಬ ಒಳ್ಳೆಯ ಹುಡುಗ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಆಕೆ ಹೇಳಿದಳು.

    ಮಕ್ಕಳಾಗಿದ್ದಾಗ ಮುಗ್ಧತೆ, ಯುವಕರಾಗಿದ್ದಾಗ ಬಿಸಿರಕ್ತದಲ್ಲಿ ಪ್ರಾಮಾಣಿಕತೆ ಸಾಮಾನ್ಯ. ಆದರೆ ಮುಂದಿನ ಜೀವನದಲ್ಲೂ ಅದನ್ನು ಕಾಯ್ದುಕೊಳ್ಳುವವರೇ ಮಹಾನ್​ ನಾಯಕರೆನಿಸಿಕೊಳ್ಳುತ್ತಾರೆ. ಈ ಕುರಿತು ದೀನದಯಾಳರ ಜೀವನ ಮತ್ತೊಂದು ಟನೆಯನ್ನು ಎಲ್​.ಕೆ.ಆಡ್ವಾಣಿ ವಿವರಿಸಿದ್ದಾರೆ. ರಾಜಸ್ಥಾನದ ವಿಧಾನಸಭೆಗೆ ಮೊದಲ ಚುನಾವಣೆ ನಡೆದಿತ್ತು. ಶ್ರೀಮಂತ ಕುಟುಂಬಗಳು ನೂರಾರು ಎಕರೆ ಜಮೀನನ್ನು ಹೊಂದುವ ಜಹಗೀರು ಪದ್ಧತಿಯನ್ನು ಕೊನೆಗಾಣಿಸುವುದಾಗಿ ಜನಸಂದ ಚುನಾವಣಾ ಪ್ರಣಾಳಿಕೆಯಲ್ಲಿ ೂಷಿಸಲಾಗಿತ್ತು. ಜನಸಂದ ನಾಯಕರಾದ ಶ್ಯಾಮಾಪ್ರಸಾದ ಮುಖಜಿರ್ ಹಾಗೂ ದೀನದಯಾಳ್​ ಉಪಾಧ್ಯಾಯ ಈ ಚಿಂತನೆಯ ಹಿಂದಿದ್ದರು. ಚುನಾವಣೆಯಲ್ಲಿ ಒಟ್ಟು 160ರಲ್ಲಿ 8 ಸ್ಥಾನಗಳಲ್ಲಿ ಜನಸಂ ಜಯಗಳಿಸಿತು. ಕಾಂಗ್ರೆಸ್​ ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಿತು. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಜನಸಂದ ಶಾಸಕಾಂಗ ಪದಲ್ಲಿ ಬಂಡಾಯ ಭುಗಿಲೆದ್ದಿತು. ಕಾರಣ, ಆಯ್ಕೆಯಾದ ಎಂಟು ಜನ ಶಾಸಕರೂ ಜಹಗೀರುದಾರರಾಗಿದ್ದರು. ಈ ಪೆಕಿ ಶಾಸಕರಾದ ಭೆರೋನ್​ ಸಿಂಗ್​ ಶೇಖಾವತ್​ ಹಾಗೂ ಜಗತ್​ ಸಿಂಗ್​ ರಲಾ ಅವರನ್ನು ಹೊರತುಪಡಿಸಿ ಎಲ್ಲ 6 ಶಾಸಕರೂ ಜಹಗೀರುದಾರಿ ಪದ್ಧತಿ ರದ್ದುಪಡಿಸುವಂತೆ ಜನಸಂ ದನಿಯೆತ್ತಬೇಕು ಎಂಬುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಮುಖಜಿರ್ ಹಾಗೂ ದೀನದಯಾಳ್​ ಉಪಾಧ್ಯಾಯ ಇಬ್ಬರೂ ರಾಜಸ್ಥಾನಕ್ಕೆ ಆಗಮಿಸಿ ಶಾಸಕರ ಜತೆ ಸಮಾಲೋಚನೆ ನಡೆಸಿದರು. ಆದರೆ ಪದ ವಾದವನ್ನು ಒಪ್ಪಲು ಆರು ಶಾಸಕರು ನಿರಾಕರಿಸಿದರು. ಯಾವುದೇ ಸಂದರ್ಭದಲ್ಲಿ ಪದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ ಇಬ್ಬರೂ ನಾಯಕರು 6 ಶಾಸಕರನ್ನೂ ಪದಿಂದ ವಜಾ ಮಾಡಿದರು.

    ಭಾರತೀಯ ಜನತಾ ಪಕ್ಕೆ ಇರುವ ಸೆದ್ಧಾಂತಿಕ ಅಡಿಪಾಯವನ್ನು ಈ ಟನೆಯಿಂದ ನೋಡಬಹುದು. ಜನತೆಗೆ ಕೊಟ್ಟ ಮಾತನ್ನು ಸದಾ ಉಳಿಸಿಕೊಳ್ಳಬೇಕು, ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಬಾರದು, ನಮ್ಮ ಆಲೋಚನೆಗಳು ಸಮಾಜದ ಅತ್ಯಂತ ಕಡೆಯ ನಾಗರಿಕನ ಆಧಾರವಾಗಿರಬೇಕು ಎಂಬ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆ ಕಾಣಲೇ ಇಲ್ಲ.

    ಉಪಾಧ್ಯಾಯ ಅವರು ಮುಂಬೆನಲ್ಲಿ 1965ರ ಏಪ್ರಿಲ್​ 22ರಿಂದ 25ರವರೆಗೆ ನಾಲ್ಕು ದಿನ ನೀಡಿದ ಉಪನ್ಯಾಸದಲ್ಲಿ ಏಕಾತ್ಮ ಮಾನವತೆ(ಇಂಟಿಗ್ರಲ್​ ಹ್ಯುಮ್ಯಾನಿಸಂ) ವಿಚಾರವನ್ನು ವಿಸತವಾಗಿ ಮೊದಲ ಬಾರಿಗೆ ಚಚಿರ್ಸಿದರು. ಪಾಶ್ಚಾತ್ಯ ಆಥಿರ್ಕ ಸಿದ್ಧಾಂತಗಳತ್ತ ನೋಡುತ್ತಿದ್ದ ಭಾರತೀಯರು ನಮ್ಮದೇ ತತ್ತ$$$್ವದ ಆಧಾರದಲ್ಲಿ ಆಥಿರ್ಕತೆ ರೂಪಿಸಿಕೊಳ್ಳಬೇಕೆಂಬುದು ಅವರ ಆಶಯವಾಗಿತ್ತು. ಆ ಸಮಯದಲ್ಲಿ ಪ್ರಮುಖವಾಗಿದ್ದ ಎರಡು ಆಥಿರ್ಕ ಸಿದ್ಧಾಂತಗಳೆಂದರೆ ಬಂಡವಾಳವಾದ ಹಾಗೂ ಕಮ್ಯೂನಿಸಂ. ಈ ಎರಡೂ ಸಿದ್ಧಾಂತಗಳು ಮಾನವನನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ವಿಲವಾಗಿವೆ. ಸಮಾಜದ ಎಲ್ಲ ಹಂತದ ವ್ಯವಸ್ಥೆಗಳನ್ನು ನಿಭಾಯಿಸುತ್ತಲೇ ಒಂದರ ಜತೆಗೆ ಮತ್ತೊಂದು ತಿಕ್ಕಾಟ ನಡೆಸದಂತೆ ಕಾಪಾಡಿಕೊಳ್ಳಬೇಕು. ಸಮಗ್ರ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ನಡೆಯುವುದೇ ಏಕಾತ್ಮ ಮಾನವತೆಯ ಸಾರ. ಇಡೀ ಸಮಾಜವನ್ನು ಒಬ್ಬ ವ್ಯಕ್ತಿಯಂತೆ ಕಾಣುವುದೇ ಏಕಾತ್ಮ ಮಾನವತೆಯಲ್ಲಿರುವ ವಿಶೇಷತೆ.

    1951ರ ಅಕ್ಟೋಬರ್​ನಲ್ಲಿ ಜನಸಂ ಸ್ಥಾಪನೆಯಾದಾಗ, ಹೊಸಪ ಕಟ್ಟಲು ಡಾ.ಶಾಮಾಪ್ರಸಾದ ಮುಖಜಿರ್ಯವರಿಗೆ ನೆರವಾಗುವಂತೆ ಆರೆಸ್ಸೆಸ್​ನ ಎರಡನೇ ಸರಸಂಚಾಲಕರಾದ ಗೋಳ್ವಲಕರ್​ ಗುರೂಜಿ ಕಳುಹಿಸಿದ ಪ್ರಚಾರಕರ ಮೊದಲ ತಂಡದಲ್ಲಿ ದೀನದಯಾಳ್​ಜೀ ಕೂಡ ಒಬ್ಬರಾಗಿದ್ದರು. 1953ರಲ್ಲಿ ಪದ ಮೊದಲ ಅಧಿವೇಶನ ಕಾನ್ಪುರದಲ್ಲಿ ನಡೆದಾಗ ಮುಖಜಿರ್ ದೀನದಯಾಳ್​ಜೀ ಅವರನ್ನು ಅಖಿಲ ಭಾರತ ಪ್ರಧಾನ ಕಾರ್ಯದಶಿರ್ಯನ್ನಾಗಿ ನೇಮಿಸಿದರು. 37 ವರ್ಷದ ದೀನದಯಾಳ್​ ಅವರ ಪ್ರಭಾವವನ್ನು ಅರಿತಿದ್ದ ಮುಖಜಿರ್, “ಇನ್ನೂ ಮೂವರು ದೀನದಯಾಳರು ನನಗೆ ಸಿಕ್ಕರೆ ಭಾರತದ ರಾಜಕೀಯ ಭೂಪಟವನ್ನು ಬದಲಿಸುತ್ತೇನೆ’ ಎಂದು ಉದ್ಗರಿಸಿದ್ದರು. ದುರಂತವೆಂದರೆ ಕೆಲವೇ ತಿಂಗಳಲ್ಲಿ ಮುಖಜಿರ್ ಅವರನ್ನು ವಿಧಿ ಕಿತ್ತುಕೊಂಡಿತು. ಪ ಅರಳಿ ಮುದುಡಿದ ಈ ಳಿಗೆಯಲ್ಲಿ ದೀನದಯಾಳರು ಪದ ನಾಯಕರಾಗಿ ಹೊರಹೊಮ್ಮಿದರು. ಮುಂದೆ ಸತತ 15 ವರ್ಷಗಳ ಅವಿಶ್ರಾಂತ ದುಡಿಮೆ ನಂತರ ಪ ನಿದಿರ್ಷ್ಟ ದಾರಿ ಕಂಡುಕೊಂಡಿತು. ಆಗ ಇದೇ ರಾಜಕೀಯ ಪಂಡಿತರು, ಜನಸಂ ಕಾಂಗ್ರೆಸ್​ಗೆ ಪರ್ಯಾಯ ಶಕ್ತಿ ಎಂದರು.

    ನಿರಂತರ ಪ್ರವಾಸ ದೀನದಯಾಳರಿಗೆ ಅನಿವಾರ್ಯವಾಗಿತ್ತು. ಸಾಮಾನ್ಯ ಜನರೊಂದಿಗೆ ಬೆರೆಯಬಹುದು ಹಾಗೂ ಓದಲು ಸಾಕಷ್ಟು ಸಮಯ ಲಭಿಸುತ್ತದೆ ಎಂಬ ಕಾರಣಕ್ಕೆ ಸದಾ ರೆಲಿನಲ್ಲಿ ಪ್ರಯಾಣಿಸುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ತಂದೆ&ತಾಯಿಯನ್ನು ಕಳೆದುಕೊಂಡ ಅವರು 25ನೇ ವಯಸ್ಸಿನವರೆಗೂ ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ಕಡಿಮೆಯೆಂದರೂ ಹನ್ನೊಂದು ಸ್ಥಳಗಳಲ್ಲಿ ವಾಸ ಮಾಡಿದ್ದರು. ಇಂಥ ಬಾಲ್ಯದಿಂದಾಗಿಯೇ ದೀನದಯಾಳರಲ್ಲಿ ಅನಿಕೇತನ ಪ್ರವತ್ತಿ ಮನೆಮಾಡಿತು. ಕುಟುಂಬದ ಬಂಧನಕ್ಕಷ್ಟೆ ಅಲ್ಲ, ರಾಜಕೀಯ ಅಧಿಕಾರಕ್ಕೂ ಅಂಟಿಕೊಳ್ಳಲಿಲ್ಲ. ಅವರು ಅಂಟಿಕೊಂಡಿದ್ದು ನೆತಿಕತೆ, ಸಿದ್ಧಾಂತ ಹಾಗೂ ಸರಳತೆಗೆ ಮಾತ್ರ.

    ಎಲ್​.ಕೆ.ಆಡ್ವಾಣಿ ಅವರ ಮಾತಿನಲ್ಲೇ ಸಮಾಪನ ಮಾಡುವುದಾದರೆ, “ಸ್ವಾತಂತ್ರ$್ಯದ ನಂತರದಲ್ಲಿ ಅಪರೂಪವಾಗಿದ್ದ ಶಿಸ್ತು, ಅರ್ಪಣಾಭಾವ ಮತ್ತು ಆದರ್ಶಗಳಿಂದ ಕೂಡಿದ ಸುಭದ್ರ ಪವೊಂದರ ಅಗತ್ಯವನ್ನು ದೀನದಯಾಳರು ಕಂಡುಕೊಂಡರು. ಆ ಪದ ಮೊದಲ ಹೆಜ್ಜೆಯಿಂದಲೇ ಅವರ ಜತೆ ನಾನಿದ್ದೆ ಎಂಬುದು ನನ್ನ ಅದಷ್ಟವೆಂದೇ ಭಾವಿಸುತ್ತೇನೆ’.
    ದೀನದಯಾಳರಂಥವರು ಆರಂಭಿಸಿದ ರಾಜಕೀಯ ಧಾರೆಯಲ್ಲಿ ನಾವು ಸೇರಿಕೊಂಡಿದ್ದೇವೆ ಎಂಬುದು ಈಗ ಬಿಜೆಪಿಯಲ್ಲಿರುವ ನಮ್ಮಂಥ ರಾಜಕೀಯ ಕಾರ್ಯಕರ್ತರಿಗೆ ಅದಷ್ಟವೆಂದೇ ಭಾವಿಸುತ್ತೇನೆ. ಹಾಗೂ ದೀನದಯಾಳ್​ ಉಪಾಧ್ಯಾಯರ ಜೀವನ ಮತ್ತು ಅವರು ಪ್ರತಿಪಾದಿಸಿದ ಏಕಾತ್ಮಮಾನವತಾ ಸಿದ್ಧಾಂತವನ್ನು ಸರಳ ರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಹೊಣೆ ನಮ್ಮಂಥ ಅಸಂಖ್ಯ ಕಾರ್ಯಕರ್ತರ ಮೇಲೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts