More

    ಮುಸ್ಲಿಮರ ಮಹಾ ಸಮ್ಮೇಳನ ಏರ್ಪಡಿಸಲು ತೀರ್ಮಾನ

    ಮುದ್ದೇಬಿಹಾಳ : ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ರಾಜ್ಯದ 25000 ಮುಸ್ಲೀಮರನ್ನು ಒಂದೆಡೆ ಸೇರಿಸಿ 25 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಸ್ಲೀಮರ ಮಹಾ ಸಮ್ಮೇಳನ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಸಂಘದ ಅಧ್ಯಕ್ಷ ಎಲ್.ಎಸ್. ಬಶೀರಅಹ್ಮದ್ ಹೇಳಿದರು.

    ಇಲ್ಲಿನ ವಿಜಯಪುರ ರಸ್ತೆ ಪಕ್ಕದಲ್ಲಿರುವ ಸಂಘದ ತಾಲೂಕು ಘಟಕದ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲೀಮರ ಹಕ್ಕುಗಳ ರಕ್ಷಣೆ, ವಕ್ಫ್ ಆಸ್ತಿ ಸಂರಕ್ಷಣೆ, ಮುಸ್ಲೀಮರ 2ಬಿ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಿ ಮರುಸ್ಥಾಪಿಸುವುದು ಸೇರಿ 25 ಅಂಶಗಳ ಕುರಿತು ಮಹಾಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶೇ. 88 ಮುಸ್ಲಿಂರು ಒಂದು ಕಡೆ ನಿಂತು ಮತದಾನ ಮಾಡಿದ್ದು ಕಾರಣವಾಗಿದ್ದರೂ ನಮ್ಮ ಹಕ್ಕುಗಳ ರಕ್ಷಣೆ ಈ ಸರ್ಕಾರದಿಂದ ಆಗುತ್ತಿಲ್ಲ.

    ನಮ್ಮಿಂದ ಆಯ್ಕೆಯಾಗಿರುವ ಮುಸ್ಲಿಂ ಸಮಾಜದ ಶಾಸಕರು, ಸಚಿವರು ಈ ಸರ್ಕಾರದಲ್ಲಿ ಧ್ವನಿ ಎತ್ತಿ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಅಮಾಯಕ ಮುಸ್ಲೀಮರ, ಮುಸ್ಲೀಮ್ ಸಂಘ ಸಂಸ್ಥೆಗಳ ಮತ್ತು ಪದಾಧಿಕಾರಿಗಳ ಮೇಲೆ ಹಾಕಿರುವ ಪ್ರಕರಣ ಕೈಬಿಡುವಂತೆ ಒತ್ತಾಯಿಸಬೇಕು ಎಂದರು.

    ಅನ್ಯಧರ್ಮಿಯರ ಜೊತೆ ಮುಸ್ಲಿಮ್ ಸಮಾಜದವರು ಪ್ರೀತಿ, ವಿಶ್ವಾಸದಿಂದ ಬಾಳಬೇಕಿದೆ. ಇದು ನಮ್ಮ ಧರ್ಮದ ತತ್ವವೂ ಆಗಿದ್ದು ಕುರಾನ್ ಸಹ ಇದನ್ನೇ ಹೇಳುತ್ತದೆ. ಈ ದೇಶದಲ್ಲಿ ಹುಟ್ಟಿರುವ ನಾವು ಈ ದೇಶವನ್ನು ಪ್ರೀತಿಸಬೇಕು. ಈ ದೇಶದ ಕಾನೂನು ಗೌರವಿಸಬೇಕು.

    ಈ ದೇಶದ ಸಂವಿಧಾನ ಸ್ವೀಕರಿಸಬೇಕು. ಇದನ್ನು ನಮ್ಮ ಸಮಾಜದವರು ಒಪ್ಪಿಕೊಂಡು ಅಪ್ಪಿಕೊಂಡು ಪಾಲಿಸಲೇಬೇಕು ಎನ್ನುವ ಜಾಗತಿ ಮೂಡಿಸಲಾಗುತ್ತದೆ ಎಂದರು.

    ಅಧ್ಯಕ್ಷ ಬಶೀರಅಹ್ಮದ್, ಜಿಲ್ಲಾಧ್ಯಕ್ಷ ಎಲ್.ಕೆ.ನದಾ, ಎಂ.ಆರ್. ಕುಂಟೋಜಿ ಮತ್ತಿತರರನ್ನು ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.

    ಮುಖಂಡರಾದ ಎಂ.ಸಿ. ಮ್ಯಾಗೇರಿ, ಎಂ.ಆರ್. ಕುಂಟೋಜಿ, ಎ.ಎಲ್. ಮುಲ್ಲಾ, ಯುಸ್ೂ ಸಾತಿಹಾಳ, ಗೋವಿಂದಪ್ಪ ದಾಸರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts