More

    15 ಹೊಸ ಶಾಖೆ ಪ್ರಾರಂಭಕ್ಕೆ ಪ್ರಸ್ತಾವನೆ ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮಾಹಿತಿ

    ಕೋಲಾರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಡಿಸಿಸಿ ಬ್ಯಾಂಕ್ ಸೇವೆ ತಲುಪಿಸುವ ಸಂಕಲ್ಪದೊಂದಿಗೆ ಅವಿಭಜಿತ ಜಿಲ್ಲೆಯಲ್ಲಿ 15 ಹೊಸ ಶಾಖೆಗಳ ಸ್ಥಾಪನೆಗೆ ಸಹಕಾರ ಇಲಾಖೆ ಹಾಗೂ ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹೊಸ ಶಾಖೆಗಳನ್ನು ಮುಂದಿನ ಆರ್ಥಿಕ ವರ್ಷದ ಮೊದಲಲ್ಲೇ ಪ್ರಾರಂಭಿಸುವ ಕುರಿತು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು, ನಬಾರ್ಡ್ ಹಾಗೂ ಸಹಕಾರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಮಾ.10ರ ವೇಳೆಗೆ 480 ಕೋಟಿ ರೂ. ಠೇವಣಿ ಸಂಗ್ರಹಿಸಬೇಕು. ಆಗ ಮಾತ್ರ ಸಿಬ್ಬಂದಿ ಶ್ರಮ, ಶ್ರದ್ಧೆ ಗಮನಿಸಿ ಡಿಎ ಮುಂಗಡ ಹಣ ಮಂಜೂರು ಮಾಡಲಾಗುವುದು. ಫೆಬ್ರವರಿ, ಮಾರ್ಚ್‌ನಲ್ಲಿ ಹೆಚ್ಚು ಮಹಿಳಾ ಸಂಗಳ ಸಾಲದ ನವೀಕರಣ ನಡೆಯಲಿದೆ. ಹೀಗಾಗಿ ಸಿಬ್ಬಂದಿ ಠೇವಣಿ ಸಂಗ್ರಹಕ್ಕೆ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಬ್ಯಾಂಕ್ 10 ವರ್ಷದ ಹಿಂದೆ ದಿವಾಳಿಯಾಗಿದ್ದಾಗ ವೇತನ ಸಿಗದೆ ಸಂಕಷ್ಟ ಅನುಭವಿಸಿದ್ದನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು. ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕದಂತೆ ಕಾಪಾಡುವ ಹೊಣೆ ನಮ್ಮನಿಮ್ಮೆಲ್ಲರದ್ದಾಗಿದೆ. ಅನ್ನ ನೀಡುವ ಬ್ಯಾಂಕ್ ಅನ್ನು ಸದೃಢಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

    ಪ್ಯಾಕ್ಸ್‌ಗಳ ಗಣಕೀಕರಣ ಕಾರ್ಯದ ಉಸ್ತುವಾರಿ ವಹಿಸಿರುವ ವಿಸಾಫ್ಟ್ ಸಿಬ್ಬಂದಿ ಒಂದೆರಡು ಪ್ಯಾಕ್ಸ್‌ಗಳ ಗಣಕೀಕರಣದ ಕೊನೆಯ ಹಂತದ ಕಾರ್ಯ ಬಾಕಿ ಇದ್ದು, ವಾರದೊಳಗೆ ಮುಗಿಸಿ, ಶೇ.100 ಗಣಕೀಕರಣದ ೋಷಣೆಗೆ ಕ್ರಮವಹಿಸಿ ಎಂದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಶಿವಕುಮಾರ್, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ಹುಸೇನ್ ದೊಡ್ಡಮನಿ, ವ್ಯವಸ್ಥಾಪಕರಾದ ಬೇಬಿ ಶಾಮಿಲಿ, ಭಾನುಪ್ರಕಾಶ್, ಯಲ್ಲಪ್ಪರೆಡ್ಡಿ, ಅರುಣ್‌ಕುವಾರ್, ಪದ್ಮಮ್ಮ, ವಿಸಾಫ್ಟ್‌ನ ವಿಶ್ವ ಇದ್ದರು.

    ಸೂಪರ್ ಮಾರ್ಕೆಟ್: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಪ್ಯಾಕ್ಸ್(ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ)ಗಳಲ್ಲಿ ಸ್ವದೇಶಿ ಕೇಂದ್ರ ಸಂಸ್ಥೆಯಿಂದ ರೈತರು, ಗ್ರಾಹಕರಿಗೆ ಅಗತ್ಯ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ಸೂಪರ್ ಮಾರ್ಕೆಟ್ ಸ್ಥಾಪನೆಗೆ ಸಹಕಾರ ನೀಡಿ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಸೂಚಿಸಿದರು. ಸ್ವದೇಶಿ ಕೇಂದ್ರದ ಅಧಿಕಾರಿಗಳಾದ ಮುರಳೀಧರ್, ಕೌಶಿಕ್ ಅವರನ್ನು ಬ್ಯಾಂಕ್ ಸಿಬ್ಬಂದಿಗೆ ಪರಿಚಯಿಸಿದ ಅವರು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೂಪರ್ ಮಾರ್ಕೆಟ್ ಸ್ಥಾಪನೆ ಕುರಿತ ಪ್ರಾರಂಭಿಕ ಪ್ರಯತ್ನ ಮುಗಿದಿದ್ದು, ಕೋಲಾರ ಜಿಲ್ಲೆಯಲ್ಲೂ ಇದಕ್ಕೆ ಸಹಕಾರ ನೀಡುವಂತೆ ಸೂಚಿಸಿದರು.

    ಸಾಲ ವಸೂಲಿ ಮಾಡಿ: ಸಾಲದ ಕಂತುಗಳು ಬಾಕಿ ಇದ್ದರೆ ಸಹಿಸಲಾಗದು. ಸಾಲ ಪಡೆದವರಿಂದ ಕಟ್ಟುನಿಟ್ಟಾಗಿ ವಸೂಲಿ ಮಾಡಿ. ಕೆಸಿಸಿ ಸಾಲ ವಸೂಲಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಏಕೆ ಎಂದು ಕೆಲವು ಶಾಖೆಗಳ ಅಧಿಕಾರಿಗಳನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಕೆಲಸದಲ್ಲಿ ಶಿಸ್ತು ಕಲಿಯಿರಿ, ಯಾವುದೇ ಕಡತವಾಗಿರಲಿ ದಿನಾಂಕವಾರು ಜೋಡಿಸಿಡಿ. ಕೇಳಿದ ತಕ್ಷಣ ಸಿಗದಿದ್ದರೆ ಕ್ರಮ ಅನಿವಾರ್ಯ. ಎನ್‌ಪಿಎ ಕಡಿಮೆಯಾಗಬೇಕು. ರಜೆ ಮರೆತು ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts