More

    ತಗ್ಗಿದ ಮಳೆ, ನದಿ ಹರಿವಿನಲ್ಲಿ ಇಳಿಮುಖ

    ಬೆಳಗಾವಿ: ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ 3-4 ದಿನಗಳಿಂದ ಸುರಿಯುತ್ತಿರುವ ಮಳೆ ಕೊಂಚ ತಗ್ಗಿದೆ. ಹೀಗಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲೂ ಇಳಿಮುಖ ಕಂಡಿದೆ. ಕೃಷ್ಣಾ ನದಿಯಲ್ಲಿ 1,35,000 ಕ್ಯೂಸೆಕ್ ಒಳಹರಿವು ಇದೆ. ರಾಜ್ಯದ ಕೃಷ್ಣಾ ನದಿಗೆ 1,35,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ನದಿಗಳ ಒಳಹರಿವಿನಲ್ಲಿ ಇಳಿಮುಖವಾಗಿದೆ.

    ಮಳೆ ವಿವರ: ಮಹಾರಾಷ್ಟ್ರದ ಕೊಯ್ನದಲ್ಲಿ 49 ಮಿ.ಮೀ., ನವಜಾ- 55 ಮಿ.ಮೀ., ಮಹಾಬಲೇಶ್ವರ- 32 ಮಿ.ಮೀ., ವಾರಣಾ- 25 ಮಿ.ಮೀ., ಕಾಳಮ್ಮವಾಡಿ- 26 ಮಿ.ಮೀ., ರಾಧಾನಗರಿ- 44 ಮಿ.ಮೀ., ಪಾಟಗಾಂವ- 45 ಮಿ.ಮೀ. ಮಳೆಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಸದ್ಯ ಕೊಯ್ನ ಜಲಾಶಯ ಶೇ. 91, ವಾರಣಾ ಶೇ. 94, ರಾಧಾನಗರಿ ಶೇ. 100, ಕಣೇರ ಶೇ. 92, ಧೂಮ ಶೇ. 96, ಪಾಟಗಾಂವ ಶೇ. 100, ದೂಧಗಂಗಾ ಶೇ. 97 ತುಂಬಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,42,000 ಹಾಗೂ ಆಲಮಟ್ಟಿಯಿಂದ 1,00,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts