More

    ವಿವಿಧ ಇಲಾಖೆಗಳ ಕಚೇರಿಗೆ ಡಿಸಿ ಶಿಲ್ಪಾನಾಗ್ ಭೇಟಿ

    ಯಳಂದೂರು: ಉಪನೋಂದಣಾಧಿಕಾರಿ, ಕಂದಾಯ ಇಲಾಖೆ, ಭೂದಾಖಲೆಗಳ ಅಭಿಲೇಖಾಲಯ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳು ಡಿಜಿಟಲೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ದಾಖಲೆಗಳ ಡಿಜಿಟಲೀಕರಣದ ಪೈಲಟ್ ಯೋಜನೆಗೆ ಯಳಂದೂರು ತಾಲೂಕು ಆಯ್ಕೆಯಾಗಿದೆ. ಇನ್ನು ಮುಂದೆ ಇಲ್ಲಿನ ಎಲ್ಲ ದಾಖಲೆಗಳು ಕಂಪ್ಯೂಟರ್‌ನಲ್ಲಿ ದಾಖಲೀಕರಣಗೊಳ್ಳಲಿದ್ದು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ. ದಾಖಲೆಗಳ ತಿದ್ದುಪಡಿ ಸೇರಿದಂತೆ ಸಾರ್ವಜನಿಕರ ಕೆಲಸಗಳು ಸುಗಮವಾಗಲಿದೆ ಎಂದು ಹೇಳಿದರು.

    ಅಂಗಡಿ ತೆರವುಗೊಳಿಸುವಂತೆ ಮನವಿ: ಬಸ್ ನಿಲ್ದಾಣದಲ್ಲಿರುವ ನರಸಮ್ಮ ಎಂಬುವರ ಅಂಗಡಿ ಮಳಿಗೆಯಿಂದ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇದನ್ನು ತೆರವುಗೊಳಿಸುವಂತೆ ಮುಖಂಡ ಮೀರೆ ಸಿದ್ದರಾಜು ಮನವಿ ಮಾಡಿದರು. ಪಟ್ಟಣದಲ್ಲಿ ರಸ್ತೆ ವಿಸ್ತರಣೆಗಾಗಿ ಮನೆ, ಅಂಗಡಿಗಳನ್ನು ಒಡೆದು 6 ವರ್ಷ ಕಳೆದಿದೆ. ಜಿಲ್ಲಾಧಿಕಾರಿ ಕೋರ್ಟಿನಲ್ಲಿದೆ ಎಂಬ ಕಾರಣಕ್ಕೆ ಈ ಒಂದು ಅಂಗಡಿಯನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ಅಪಘಾತ ವಲಯದಲ್ಲಿರುವ ಈ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಮನವಿಮಾಡಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ ಜಾಗವನ್ನು ಪರಿಶೀಲನೆ ನಡೆಸಲಾಗಿದೆ. ಕಾನೂನಾತ್ಮಕವಾಗಿ ಏನಿದೆ ಎಂದು ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು ಎಂದರು.

    ನಂತರ ಮತದಾನದ ಪ್ರಾತ್ಯಕ್ಷಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಡಿಸಿ ಶಿಲ್ಪಾನಾಗ್ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿ, ಸಾರ್ವಜನಿಕರಿಗೆ ಮತಯಂತ್ರ ಬಳಕೆ ಹಾಗೂ ಉಪಯೋಗದ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದರು.

    ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಜಯಪ್ರಕಾಶ್, ಪ.ಪಂ. ಮುಖ್ಯಾಧಿಕಾರಿ ಮಹೇಶ್ ಕುಮಾರ್, ಪ್ರಾಂಶುಪಾಲ ವಿಜಯ್, ಯದುಗಿರಿ, ಶಾಂತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts