More

    ಜಾಗೃತಿಗಾಗಿ ಡಿಸಿ ಪಾದಯಾತ್ರೆ

    ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗುರುವಾರ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಿಂದ ಶಾಸ್ತ್ರಿ ವೃತ್ತದವರೆಗೆ ಮುಖ್ಯರಸ್ತೆಯ ಪಕ್ಕದ ಎಲ್ಲ ಅಂಗಡಿಗಳಿಗೆ ಪಾದಯಾತ್ರೆಯಲ್ಲಿ ತೆರಳಿ ಪರಸ್ಪರ ಅಂತರ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದರು.
    ಮಾಸ್ಕ್ ಧರಿಸಿದ ವಿದ್ಯಾರ್ಥಿಗಳ ಬೆನ್ನುತಟ್ಟಿ ಶಹಭಾಸ್ ಹೇಳಿದರೆ, ಮಾಸ್ಕ್ ಹಾಕದೆ ಕಿಸೆಯಲ್ಲಿ ಇಟ್ಟುಕೊಂಡವರಿಗೆ ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸದೆ ಬಾಡಿಗೆ ಮಾಡುತ್ತಿದ್ದ ಆಟೋಚಾಲಕನಿಗೆ ದಂಡ ವಸೂಲಿಗೆ ಅಧಿಕಾರಿಗಳಿಗೆ ಸೂಚಿಸಿ, ಪ್ರಯಾಣಿಕರಿಗೆ ಮಾಸ್ಕ್ ಹಾಕದೆ ಮನೆಯಿಂದ ಹೊರಬರಬೇಡಿ ಎಂದರು. ಮಾಸ್ಕ್ ಧರಿಸದ ಕಾರು ಚಾಲಕರನ್ನೂ ಗದರಿದರು. ಮಾಸ್ಕ್ ಇಲ್ಲದೆ ಬರುವ ಗ್ರಾಹರಿಗೆ ಅವಕಾಶ ನೀಡಬೇಡಿ, ನಿಯಮ ಪಾಲಿಸುವ ಮೂಲಕ ಜಿಲ್ಲಾಡಳಿತದ ಜತೆ ಕೈಜೋಡಿಸಿ ಎಂದು ಅಂಗಡಿ, ಹೋಟೆಲ್ ಮಾಲೀಕರಲ್ಲಿ ಮನವಿ ಮಾಡಿದರು. ಹೋಟೆಲ್ ಪಾರಿಜಾತಕ್ಕೆ ತೆರಳಿ ತಮ್ಮ ಜತೆಗೆ ಬಂದ ಎಲ್ಲರಿಗೂ ಕಾಫಿ ಕುಡಿಸಿದರು.
    * ನಿಯಮ ಪಾಲಿಸಿ: ಮದುವೆ ಇನ್ನಿತರ ಸಮಾರಂಭಗಳಲ್ಲಿ ಕೋವಿಡ್ ನಿಯಮ ಕಡ್ಡಾಯ ಪಾಲಿಸಬೇಕು. ಹೋಳಿ ಇನ್ನಿತರ ಹಬ್ಬ, ಜಾತ್ರೆಯಲ್ಲಿ 500 ಜನರಷ್ಟೇ ಪಾಲ್ಗೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿ ಹೇಳಿದರು. ಶಾಲಾ ಕಾಲೇಜುಗಳಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿದ್ದು, ಆಫ್‌ಲೈನ್ ತರಗತಿಗಿಂತ ಆನ್‌ಲೈನ್ ತರಗತಿ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಶಿಕ್ಷಣ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು. ಹಳ್ಳಿಗಳಿಗೆ ಕರೊನಾ ಹೋಗದಂತೆ ಮಾಡುವ ಸಲುವಾಗಿ ಶೈಕ್ಷಣಿಕ ಕೇಂದ್ರ ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ ಎಂದರು.
    ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಸೀಲ್ದಾರ್ ಆನಂದಪ್ಪ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

    ಕೊಲ್ಲೂರು ರಥೋತ್ಸವಕ್ಕೆಭಕ್ತರಿಗೆ ಅವಕಾಶವಿಲ್ಲ: ಕೊಲ್ಲೂರು ರಥೋತ್ಸವ ಇರುತ್ತದೆ. ಆದರೆ ಭಕ್ತರಿಗೆ ದರ್ಶನ, ಸೇವೆಗಷ್ಟೇ ಸೀಮಿತ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು. ಕಳೆದ ಬಾರಿ ರಥೋತ್ಸವ ಸಂದರ್ಭ ಲಾಕ್‌ಡೌನ್ ಜಾರಿಯಾಗಿದ್ದು, ಭಕ್ತರು ಪಾಲ್ಗೊಳ್ಳಲು ಅವಕಾಶವಿರಲಿಲ್ಲ.

    ಡಿಸಿ ಬರ್ತಿದ್ದಾರೆ, ಮಾಸ್ಕ್ ಹಾಕ್ಕೊಳ್ಳಿ!: ಒಂದು ಕಡೆ ಜಿಲ್ಲಾಧಿಕಾರಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಒಬ್ಬ ಅಧಿಕಾರಿ ಡಿಸಿಗಿಂತ ಮುಂದಕ್ಕೆ ಸಾಗಿ ‘ಡಿಸಿ ಬರುತ್ತಿದ್ದಾರೆ, ಮಾಸ್ಕ್ ಹಾಕಿಕೊಳ್ಳಿ’ ಎಂದು ಹೇಳುತ್ತಿದ್ದರು. ಶಾಸ್ತ್ರಿ ವೃತ್ತದಲ್ಲಿದ್ದ ನೂರಾರು ವಿದ್ಯಾರ್ಥಿಗಳು ಡಿಸಿ ಬರುತ್ತಿರುವ ಮಾಹಿತಿ ತಿಳಿದು ಮಾಸ್ಕ್ ಧರಿಸಿದರು. ಡಿಸಿ ಪಾದಯಾತ್ರೆ ಮಾಡಿದ ಹಲವೆಡೆ ಈ ಸನ್ನಿವೇಶ ಕಂಡುಬಂತು.05

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts