More

    ಪಾಲಕರ ಕಳೆದುಕೊಂಡದವರಿಗೆ ರಕ್ಷಣೆ ನೀಡಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ

    ತುಮಕೂರು : ಜಿಲ್ಲೆಯಲ್ಲಿ ಕರೊನಾದಿಂದ ತಂದೆ, ತಾಯಿ ಇಬ್ಬರನ್ನು ಕಳೆದುಕೊಂಡ 5 ಮಕ್ಕಳು ಹಾಗೂ ಒಬ್ಬರು ಪಾಲಕರನ್ನು ಕಳೆದುಕೊಂಡ 531 ಮಕ್ಕಳಿಗೆ ಪುನರ್ವಸತಿ, ಆರ್ಥಿಕ ನೆರವು ಮತ್ತು ಸುರಕ್ಷತೆ ಕಲ್ಪಿಸಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೊನಾ ಸೋಂಕು ಬಾಧಿತ ಹಾಗೂ ಲಾಲನೆ ಮತ್ತು ರಕ್ಷಣೆಗೆ ಅಗತ್ಯವಿರುವ ಮಕ್ಕಳ ಗುರುತಿಸುವಿಕೆ, ಪುನರ್ವಸತಿ ಕಲ್ಪಿಸುವ ಸಂಬಂಧ ಜರುಗಿದ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಕರೊನಾದಿಂದ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಆರೈಕೆ ಅತ್ಯಗತ್ಯ. ಆದ್ದರಿಂದ ಕರೊನಾ ಸಂತ್ರಸ್ತ ಮಕ್ಕಳು ಶೋಷಣೆಗೆ ಒಳಗಾಗದಂತೆ, ಕಾನೂನು ಬಾಹಿರ ದತ್ತು ಪ್ರಕ್ರಿಯೆಗೆ ಒಳಪಡದಂತೆ, ಬಾಲ ಕಾರ್ಮಿಕರಾಗದಂತೆ, ಬಾಲ್ಯವಿವಾಹ ಮತ್ತು ಕಳ್ಳಸಾಗಣೆಗೆ ಒಳಗಾಗದಂತೆ, ಭಿಕ್ಷಾಟನೆಗೆ ತೊಡಗದಂತೆ ಹಾಗೂ ಇನ್ನಿತರ ಸಂಕಷ್ಟಕ್ಕೆ ಈಡಾಗದಂತೆ ಮಕ್ಕಳನ್ನು ರಕ್ಷಿಸಲು ಕ್ರಮವಹಿಸಬೇಕು ಎಂದರು.

    ತೊಂದರೆಯಲ್ಲಿರುವ ಮತ್ತು ಲಾಲನೆ, ರಕ್ಷಣೆಗೆ ಅವಶ್ಯಕವಿರುವ ಮಕ್ಕಳ ನೆರವಿಗಾಗಿ ಸಹಾಯವಾಣಿ 1098 ಕಾರ್ಯ ಸಮರ್ಪಕವಾಗಿ ನಡೆಯಬೇಕು. ವಿಶೇಷವಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಕ್ಕಳ ಸಹಾಯವಾಣಿ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಿಕ ಜನದಟ್ಟಣೆ ಇರುವ ಸ್ಥಳಗಳಲ್ಲಿ ಸಹಾಯವಾಣಿ ವಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು ಎಂದರು.

    ಜಿಲ್ಲಾ ವ್ಯಾಪ್ತಿಯಲ್ಲಿ ಪಾಲಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ, ಕರೊನಾ ಕಾರಣದಿಂದ ಪಾಲಕರು ಆಸ್ಪತ್ರೆಗೆ ದಾಖಲಾಗಿ ತಾತ್ಕಾಲಿಕವಾಗಿ ಆಶ್ರಯದ ಅಗತ್ಯವಿರುವ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಕಂಡುಬಂದಲ್ಲಿ ಕೂಡಲೇ ಸಹಾಯವಾಣಿ 1098ಗೆ ಮಾಹಿತಿ ನೀಡುವಂತೆ ಕ್ಷೇತ್ರಮಟ್ಟದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಅರಿವು ಮೂಡಿಸಬೇಕು ಎಂದರು.

    ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಶ್ರೀಧರ್ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ 3590 ಮುಖ್ಯ, 519 ಮಿನಿ ಸೇರಿ 4109 ಅಂಗನವಾಡಿ ಕೇಂದ್ರಗಳಿದ್ದು, 73755 ಗಂಡು ಹಾಗೂ 71895 ಹೆಣ್ಣು ಸೇರಿ ಒಟ್ಟು 145650 ಮಕ್ಕಳಿದ್ದಾರೆ. ಈ ಪೈಕಿ ಇಬ್ಬರು ಪಾಲಕರನ್ನು ಕಳೆದುಕೊಂಡ 5 ಹಾಗೂ ಒಬ್ಬರು ಪಾಲಕರನ್ನು ಕಳೆದುಕೊಂಡ 531 ಮಕ್ಕಳ ಸೂಕ್ತ ರಕ್ಷಣೆಗೆ ಹಾಗೂ ಪ್ರಾಯೋಜಿತ ಕಾರ್ಯಕ್ರಮದಡಿ ಆರ್ಥಿಕ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ ಎಂದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಇದ್ದರು.

    ಕಾನೂನು ಬಾಹಿರ ದತ್ತು ತಡೆಗೆ ಕ್ರಮವಹಿಸಿ : ಕರೊನಾ ಸಾಂಕ್ರಾಮಿಕದಿಂದ ಪಾಲಕರನ್ನು ಕಳೆದುಕೊಂಡಿರುವ ಮಗುವನ್ನು ದತ್ತು ನೀಡುವ ಬಗ್ಗೆ ಸಾವಾಜಿಕ ಮಾಧ್ಯಮದಲ್ಲಿ ತಪ್ಪು ಸಂದೇಶ ನೀಡುವವರ ವಿರುದ್ಧ ಕ್ರಮಕೈಗೊಳ್ಳಲು ಕ್ರಮವಹಿಸಬೇಕು. ಮಕ್ಕಳನ್ನು ರಕ್ಷಿಸುವ ಕಾರ್ಯದಲ್ಲಿ ಬಾಲ್ಯವಿವಾಹ ತಡೆಗಟ್ಟುವ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಪಾರು ವಾಡುವ ಹಾಗೂ ಮಕ್ಕಳ ಸಾಗಣೆ ತಡೆಗಟ್ಟುವ ಸಂದರ್ಭದಲ್ಲಿ ಮಕ್ಕಳನ್ನು ಅವಾನವೀಯವಾಗಿ ನಡೆಸಿಕೊಂಡಿರುವ ಟನೆಗಳು ಕಂಡುಬಂದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಪಾಲಕರನ್ನು ಕಳೆದುಕೊಂಡಿರುವ ಮಗುವನ್ನು ದತ್ತು ನೀಡುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಸಂದೇಶ ಪ್ರಸಾರವಾಗದಂತೆ ಮೇಲ್ವಿಚಾರಣಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts