More

    ದಾವಣಗೆರೆಯಲ್ಲಿ ಜೈನ ಸನ್ಯಾಸ ದೀಕ್ಷೆ ಶ್ರೀ ರತ್ನನಿಧಾನ ವಿಜಯಜೀ ನಾಮಕರಣ ಕಣ್ತುಂಬಿಕೊಂಡ ಜಿನ ಭಕ್ತರು

    ದಾವಣಗೆರೆ: ನಗರದ ಎಂ.ಜಿ. ರಸ್ತೆ ನಿವಾಸಿ, 18ರ ಹರೆಯದ ಮಯಂಕ್ ಕುಮಾರ್ ಮಹಾವೀರ್ ಸಂಘವಿ ಅವರು ಅಭಿನವ ರೇಣುಕ ಮಂದಿರದಲ್ಲಿ ಸೋಮವಾರ ಬೆಳಗ್ಗೆ ಜೈನ ಸಂಪ್ರದಾಯದ ಧಾರ್ಮಿಕ ವಿಧಾನಗಳಡಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
    ದೀಕ್ಷಾರ್ಥಿ ಮಯಂಕ್ ಕುಮಾರ್ ಅವರಿಗೆ ಮೊದಲಿಗೆ ವಿಜಯತಿಲಕ ಹಚ್ಚಲಾಯಿತು. ನಂತರ ರಜೋಹರಣ ಪ್ರಕ್ರಿಯೆ, ಸನ್ಯಾಸ ಧರ್ಮದ ರಿವಾಜುಗಳ ಕುರಿತು ಅವರ ಕಿವಿಯಲ್ಲಿ ಮಂತ್ರೋಚ್ಚಾರ ನಡೆಸಿ ಕೇಶಮುಂಡನ ಮಾಡಲಾಯಿತು.
    ಪಂಚ ಮಹಾವ್ರತಗಳ ಪಾಲನೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸನ್ಯಾಸಪೂರ್ವ ಹೆಸರು ಕಳಚಿ, ಶ್ರೀ ರತ್ನನಿಧಾನ ವಿಜಯಜೀ ಎಂಬುದಾಗಿ ನಾಮಕರಣ ಮಾಡಲಾಯಿತು.
    ಜೈನ ಆಚಾರ್ಯರಾದ ಶ್ರೀ ವಿಜಯ ಕುಮದಚಂದ್ರ ಸುರೀಶ್ವರಜೀ, ಶ್ರೀ ವಿಜಯ ತೀರ್ಥಭದ್ರ ಸುರೀಶ್ವರಜೀ, ಶ್ರೀ ಮಹಾಸೇನ ಸುರೀಶ್ವರಜೀ ಅವರು ದೀಕ್ಷಾ ಬೋಧನೆ ಮಾಡಿದರು. ಮುನಿಶ್ರೀ ತೀರ್ಥರತಿ ವಿಜಯಜೀ, ಮುನಿಶ್ರೀ ತೀರ್ಥರುಚಿ ವಿಜಯಜೀ, ಮುನಿಶ್ರೀ ಪುಣ್ಯನಿಧಾನ ವಿಜಯಜೀ ಹಾಗೂ 110 ಮಂದಿ ಗುರುಗಳು, ಶ್ರಾವಕ-ಶ್ರಾವಕಿಯರು, ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದವರು ಭಾಗಿಯಾಗಿದ್ದರು.
    ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ಸಂದರ್ಭದ ಕ್ಷಣಗಳನ್ನು ಅವರ ಕುಟುಂಬದವರು ಹಾಗೂ ಸಮಾಜದವರು ಕಣ್ತುಂಬಿಕೊಂಡರು. ಡಿಜೆಯಲ್ಲಿ ಹೊಮ್ಮಿದ ಜಿನದೇವರ ಹಾಡುಗಳನ್ನು ಆಲಿಸಿದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts