More

    ದಾವಣಗೆರೆಯಲ್ಲಿ ಮಾಸ್ಕ್ ಜಾಗೃತಿ ಅಭಿಯಾನ

    ದಾವಣಗೆರೆ: ಕೋವಿಡ್ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ದಿಸೆಯಲ್ಲಿ ಜಿಲ್ಲಾಡಳಿತ ನಗರದಲ್ಲಿ ಮಂಗಳವಾರ ಮಾಸ್ಕ್ ಅಭಿಯಾನ ನಡೆಸಿತು.

    ಗಡಿಯಾರ ಕಂಬದಿಂದ ಪ್ರಾರಂಭವಾದ ಅಭಿಯಾನ ನಗರದ ವಿವಿಧೆಡೆ ಸಂಚರಿಸಿ, ಪಾದಚಾರಿಗಳು, ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸಿತು.

    ಮಾಸ್ಕ್ ಹಾಕದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಜತೆಗೆ ಪರಸ್ಪರ ಅಂತರ ಕಾಯ್ದು ಕೊಳ್ಳದ ಅಂಗಡಿಯವರಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದರು.

    ಜನನಿಬಿಡ ಪ್ರದೇಶಗಳಲ್ಲಿ ಮುಖಗವಸು ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಬುದ್ಧಿವಾದ ಹೇಳಿದರು. ನಿರ್ಲಕ್ಷ್ಯ ತೋರಿದರೆ ಕರೊನಾ ನಿರ್ಮೂಲನೆ ಕಷ್ಟಸಾಧ್ಯಎಂದು ತಿಳಿಸಿದರು.

    ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ವಾಹನ ಸವಾರರನ್ನು ತಡೆದು ದಂಡ ವಿಧಿಸಲಾಯಿತು. ಹಲವು ಅಂಗಡಿಗಳಲ್ಲಿ ಮಾಲೀಕರು, ಕೆಲಸಗಾರರು ಮುಖಗವಸು ಹಾಕಿರಲಿಲ್ಲ.
    ನಿಯಮಿತ ಸಂಖ್ಯೆಯಲ್ಲಿ ಗ್ರಾಹಕರಿಗೆ ಅಂಗಡಿಯೊಳಗೆ ಪ್ರವೇಶ ನೀಡಬೇಕು, ಸರದಿಯಂತೆ ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು. ಕೆಲವರು ದಂಡದಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುತ್ತಿದ್ದುದು ಕಂಡುಬಂದಿತು. ಎಸ್ಪಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts