More

    ಮಕ್ಕಳಲ್ಲಿ ಸರಿ, ತಪ್ಪುಗಳ ವಿವೇಕ ಜಾಗೃತಿ ಅಗತ್ಯ

    ದಾವಣಗೆರೆ : ಮಕ್ಕಳಲ್ಲಿ ಸರಿ, ತಪ್ಪುಗಳ ವಿವೇಕವನ್ನು ಬೆಳೆಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ರಾಮಕೃಷ್ಣ ಮಿಷನ್ ದಾವಣಗೆರೆ ಘಟಕದ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದ ಹೇಳಿದರು.
    ರಾಮಕೃಷ್ಣ ಮಿಷನ್ ವತಿಯಿಂದ ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಮಕ್ಕಳಿಗೆ ತಿಳಿಸಿದರೆ ಸಾಕು, ಉಳಿದಂತೆ ಅವರು ಶಾಲೆ, ಪರಿಸರದ ಮೂಲಕ ಕಲಿಯುತ್ತಾರೆ. ನಕಾರಾತ್ಮ ವಿಚಾರಗಳಿಗೆ ಅವಕಾಶ ಕೊಡದೆ ಅವರಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತುಂಬಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
    ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ಪಾಲಕರು ಮೊದಲು ಓದಬೇಕು. ದಿನಕ್ಕೆ 1 ಅಥವಾ 2 ಉಪದೇಶಗಳನ್ನು ಮಕ್ಕಳಿಗೆ ಹೇಳಬೇಕು. ಧೈರ್ಯ, ಸಾಹಸ, ಸ್ವಾಭಿಮಾನ, ಸೇವಾ ಮನೋಭಾವನೆಯನ್ನು ಬೆಳೆಸಬೇಕು ಎಂದರು.
    ಇದಕ್ಕೂ ಮೊದಲು ಅಮರ್ ಜವಾನ್ ಉದ್ಯಾನವನದಿಂದ ರಾಮಕೃಷ್ಣ ಆಶ್ರಮದ ವರೆಗೆ ಶೋಭಾಯಾತ್ರೆ ನಡೆಸಲಾಯಿತು. ಸ್ವಾಮಿ ವಿವೇಕಾನಂದರ ವೇಷಧಾರಿಯಾಗಿದ್ದ ಮಕ್ಕಳು ಗಮನ ಸೆಳೆದರು.
    ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನಡೆಸಿದ ಚಿತ್ರಕಲೆ ಸ್ಪರ್ಧೆಯ ವಿಜೇತರರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿ ವೇತನ ವಿತರಣೆಯೂ ನಡೆಯಿತು. ವೇಷಭೂಷಣ ಧರಿಸಿದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು.
    ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಉದ್ಯಮಿ ಜಯರುದ್ರೇಶ್, ಸಪ್ತಗಿರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಮಹಂತೇಶ್ ಭಾರತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts