More

    ಕನಿಷ್ಠ ವೇತನ ನೀಡಲು ಆಗ್ರಹ

    ಕನಿಷ್ಠ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಬೆಂಗಳೂರಿನಲ್ಲಿ ಫೆ. 14 ರಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಲಾಗುವುದು ಎಂದು, ಸಂಘದ ಖಜಾಂಚಿ ಆರ್.ಎಸ್. ಬಸವರಾಜ ಹೇಳಿದರು.
     ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 65 ಸಾವಿರ ನೌಕರರಿದ್ದು, 40 ಸಾವಿರ ಮಂದಿ ಭಾಗವಹಿಸುವರು. ದಾವಣಗೆರೆ ಜಿಲ್ಲೆಯಿಂದ 1500 ಸಿಬ್ಬಂದಿ ತೆರಳುವರು ಎಂದು ತಿಳಿಸಿದರು.
     ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರಗಂಟಿ, ಜವಾನ, ಸ್ವಚ್ಛತೆ ಮಾಡುವವರು 20-30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
     ಕರ ವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ 38,021 ರೂ, ನೀರಗಂಟಿಗಳಿಗೆ 33,006 ರೂ, ಜವಾನರಿಗೆ 28,750 ರೂ, ಸ್ವಚ್ಛತಾಗಾರರಿಗೆ 25 ಸಾವಿರ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದರು.
     ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ನಿವೃತ್ತರಾದರೆ ಅಥವಾ ಮರಣ ಹೊಂದಿದರೆ (ಅವಲಂಬಿತರಿಗೆ) ಪ್ರತಿ ತಿಂಗಳು ಕನಿಷ್ಠ 6 ಸಾವಿರ ರೂ. ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
     ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಬಯೋಮೆಟ್ರಿಕ್ ಸಹಿ ಕಡ್ಡಾಯಗೊಳಿಸಿದ್ದನ್ನು ಕೈಬಿಡಬೇಕು. ನೀರಗಂಟಿಗಳಿಗೆ ನಿರ್ದಿಷ್ಟ ಕೆಲಸಗಳನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
     ಸಂಘದ ಮುಖಂಡರಾದ ಎಸ್.ಸಿ. ಶ್ರೀನಿವಾಸಾಚಾರ್, ಆನಂದ್‌ರಾಜ್, ಜಿ.ಎಸ್. ಬಸವರಾಜ್, ಚಂದ್ರಪ್ಪ, ಓಂಕಾರಪ್ಪ, ಹಾಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts