More

    ಭಾರತೀಯ ಮಕ್ಕಳ ರಕ್ತದಲ್ಲೇ ಇದೆ ಬುದ್ಧಿವಂತಿಕೆ

    ದಾವಣಗೆರೆ : ಭಾರತದ ಮಕ್ಕಳಿಗೆ ಬುದ್ಧಿವಂತಿಕೆ ರಕ್ತಗತವಾಗಿ ಬಂದಿದೆ ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
     ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಸಹ ಶಿಕ್ಷಕರ, ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ, ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ, ‘ಎಸ್‌ಎಸ್‌ಎಲ್‌ಸಿ ನಂತರ ಮುಂದೇನು, ಹೇಗೆ?’ ವಿಷಯದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
     ದಡ್ಡ ವಿದ್ಯಾರ್ಥಿಗಳು ಭಾರತದಲ್ಲಿ ಹುಟ್ಟುವುದೇ ಇಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಎತ್ತರಕ್ಕೆ ಬೆಳೆಯಬಲ್ಲರು. ಇದರಲ್ಲಿ ಶಿಕ್ಷಕರ ಜವಾಬ್ದಾರಿ ದೊಡ್ಡದಿದೆ ಎಂದು ತಿಳಿಸಿದರು.
     ಅಮೆರಿಕದ ಶಾಲೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳೇ ಟಾಪರ್‌ಗಳಾಗಿದ್ದಾರೆ. ಅಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಶೇ. 15ರಷ್ಟು ಭಾರತೀಯರಿದ್ದಾರೆ. ಇತರ ದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ ಎಂದು ಹೇಳಿದರು.
     ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಆದ್ದರಿಂದ ಶಿಕ್ಷಕರ ನೇಮಕಾತಿ ಮಾಡುವಾಗ ಸರ್ಕಾರ ಬಹಳ ಯೋಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ತಿಳಿಸಿದರು.
     ಶಿಕ್ಷಕರು ವಿಜ್ಞಾನಿಗಳ ರೀತಿಯಲ್ಲಿ ಸಂಶೋಧನಾ ಪ್ರವೃತ್ತಿ ಹೊಂದಿರಬೇಕು. ಮಕ್ಕಳಿಗೆ ಹಲವು ವಿಧಾನಗಳಲ್ಲಿ ಕಲಿಸಬೇಕು. ನಮ್ಮಲ್ಲಿ ಪಠ್ಯಪುಸ್ತಕ ರಚನೆಯಲ್ಲೇ ಲೋಪಗಳಿದ್ದು ಅದನ್ನು ಸರಿಪಡಿಸಬೇಕಿದೆ ಎಂದರು.
     ವಿದ್ಯಾರ್ಥಿಗಳು ಆರಂಭದಿಂದಲೇ ಯೋಜಿತವಾಗಿ ಓದುವುದನ್ನು ರೂಢಿಸಿಕೊಳ್ಳಬೇಕು. ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಪರೀಕ್ಷೆಯೆಂದರೆ ಭಯ ಇರಬಾರದು, ಎದೆಗುಂದದೇ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
     ಮಕ್ಕಳಲ್ಲಿರುವ ಶಕ್ತಿಯನ್ನು ಗುರುತಿಸಬೇಕು, ಅವರನ್ನು ಮಿತಿಗೆ ಒಳಪಡಿಸಬಾರದು. ಸೂಕ್ತವಾದ ತರಬೇತಿ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts