More

    ವಿದ್ಯಾರ್ಥಿಗಳ ಕಲಿಕೆಯ ಜತೆಗೆ ಅನುಭವದ ಪಾಠ

    ದಾವಣಗೆರೆ : ವಾಣಿಜ್ಯ ಮತ್ತು ನಿರ್ವಹಣಾ ಜ್ಞಾನ ಪಡೆಯುವ ವಿದ್ಯಾರ್ಥಿಗಳು ತರಗತಿಯ ನಾಲ್ಕು ಗೋಡೆಗಳ ನಡುವೆಯೇ ಉಳಿದರೆ ಸಾಲದು, ಹೊರ ಪ್ರಪಂಚದ ಅರಿವೂ ಇರಬೇಕಾಗುತ್ತದೆ.
    ಇಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ದವನ್ ಕಾರ್ನಿವಲ್-2022’ ನಲ್ಲಿ ದವನ್ ಕಾಲೇಜು ವಿದ್ಯಾರ್ಥಿಗಳಿಗೆ ಅಂಥದೊಂದು ಪ್ರಾಯೋಗಿಕ ಅನುಭವ ಒದಗಿಸಲಾಯಿತು.
    ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳು ಸ್ವತಃ ಬಂಡವಾಳ ಹೂಡಿ, ಮಳಿಗೆ ಬಾಡಿಗೆ ಪಡೆದಿದ್ದರು. ಒಟ್ಟು 16 ಮಳಿಗೆಗಳಲ್ಲಿ ವಿವಿಧ ಸಂಸ್ಕೃತಿಯ ಆಹಾರ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಗೇಮ್‌ಗಳನ್ನೂ ಆಡಿಸಲಾಯಿತು.
    ಟಾರ್ಗೆಟ್ ದಿ ಬಲೂನ್, ಡೋರ್ ಡೈಸ್, ಡಾಟ್ಸ್ ಗೇಮ್, ಬಜ್‌ವೈರ್, ಗೇಮಿಂಗ್ ಜೋನ್, ಕಪ್ ಟವರ್ ಕಾಯಿನ್, ಗೇಮ್ ಸ್ಪಾಟ್, ಟಚ್ ಮೆಂಟೋ, ಪಿಕ್ ಬಾಟಲ್, ಕ್ರೇಜಿ ಜೋನ್, ಡ್ಯಾನ್ಸಿಂಗ್ ಡಾರ್ಟ್ಸ್ ಮುಂತಾದ ಗೇಮ್‌ಗಳನ್ನು ಆಡಿಸಲಾಯಿತು.
    ಕೇಸರ್ ರಸ್‌ಮಲೈ, ಹೈದರಾಬಾದ್ ವೆಜ್ ದಮ್ ಬಿರಿಯಾನಿ, ಕೇರಳ ಪರೋಟ, ಸಮೋಸಾ, ಐಸ್‌ಕ್ರೀಂ, ರೊಟ್ಟಿಬುತ್ತಿ, ಬಿಳಿ ಹೋಳಿಗೆ, ವಿಜಯಪುರ ರೋಟಿ, ಚಿತ್ರನ್ನ ಇನ್ನಿತರ ತರಹೇವಾರಿ ಆಹಾರ ಪದಾರ್ಥಗಳು ಮಳಿಗೆಯಲ್ಲಿದ್ದವು.
    ವಿದ್ಯಾರ್ಥಿಗಳು ಹಾಡಿದರು, ಕುಣಿದರು, ಸೆಲ್ಫಿ ಪಡೆದುಕೊಂಡರು. ಕಲಿಕೆಯ ಜತೆಗೆ ನಲಿದಾಡಿದರು.
    ಹೋಟೆಲ್ ಉದ್ಯಮಿಗಳಾದ ಆಕಾಶ್ ಹೆಗಡೆ, ಡಿ.ಕೆ. ಸುಬ್ರಮಣ್ಯ, ಸಿ. ಹರೀಶ್, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಾಟೀಲ್, ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್, ಪ್ರಾಚಾರ್ಯೆ ಡಾ. ಜಿ.ಎಸ್. ಅಂಜು, ಉಪ ಪ್ರಾಚಾರ್ಯೆ ಎನ್. ಅನಿತಾ, ನೂತನ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಸ್. ಹಾಲಪ್ಪ, ಕೆ.ಟಿ. ಸುಮಿತ್ರಾ, ಎಚ್.ಸಿ. ಅಶ್ವಿನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts