More

    ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ

    ದಾವಣಗೆರೆ : ರಾಜ್ಯ ಸರ್ಕಾರದ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಉನ್ನತ ಶಿಕ್ಷಣದ ಉಪನ್ಯಾಸಕರಿಗೆ ಪುನರ್ ಮನನ ಅಭಿವೃದ್ಧಿ ಕಾರ್ಯಾಗಾರ ನಗರದ ಜೈನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೋಮವಾರ ಆರಂಭವಾಯಿತು.
     ಹೊಸ ಶಿಕ್ಷಣ ನೀತಿಯ ರೂಪುರೇಶೆಗಳಂತೆ ಉನ್ನತ ಶಿಕ್ಷಣದಲ್ಲಾಗುವ ಬದಲಾವಣೆಗಳನ್ನು ಮನಗಂಡು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀಡಲು ವೃತ್ತಿಪರ ಶಿಕ್ಷಣದಲ್ಲಿ ಅಧ್ಯಾಪಕರನ್ನು ತಯಾರು ಮಾಡಲು ಎರಡು ವಾರಗಳ ಅವಧಿಯ ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ 150ಕ್ಕೂ ಹೆಚ್ಚು ಅಧ್ಯಾಪಕರು ಆಗಮಿಸಿದ್ದಾರೆ.
     ಫ್ಲೆಕ್ಸಿಟ್ರಾನ್ ಸಂಸ್ಥೆಯ ಸಿಇಒ ಆರ್.ಎಸ್. ಹಿರೇಮಠ್ ಕಾರ್ಯಾಗಾರ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಹರೀಶ್ ಕುಮಾರ್, ತರಬೇತುದಾರ ಅವಿನಾಶ್, ಜೈನ್ ಸಮೂಹದ ಸಲಹೆಗಾರ ಡಾ. ಮಂಜಪ್ಪ ಸಾರಥಿ, ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್, ಸಂಚಾಲಕ ಡಾ. ಎನ್. ಮಧುಕೇಶ್ವರ, ಸಂಯೋಜಕ ಡಾ. ಎನ್.ವೈ. ಗಣೇಶ್ ಇದ್ದರು.
     ಕಾರ್ಯಾಗಾರದಲ್ಲಿ ಅಧ್ಯಾಪಕರಿಗೆ ಸ್ವಯಂ ಆವಿಷ್ಕಾರ, ಕಲಿಕೆಯ ಚಕ್ರವನ್ನು ಅರ್ಥಮಾಡಿಕೊಳ್ಳುವುದು, ವಿಮರ್ಶಾತ್ಮಕ ಚಿಂತನೆ, ಸಾಕ್ಷರತೆ ಕೌಶಲ, ಜೀವನ ಕೌಶಲ, ವಿನ್ಯಾಸ ಚಿಂತನೆಗಳಂತಹ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts