More

    ಸ್ಕೌಟ್ಸ್-ಗೈಡ್ಸ್‌ನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು

    ದಾವಣಗೆರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಸಹಬಾಳ್ವೆ ಮನೋಭಾವವನ್ನು ಬೆಳೆಸಲಿದೆ ಎಂದು ಜಿಲ್ಲಾ ಸಂಘಟಕಿ ಜೆ. ಅಶ್ವಿನಿ ಹೇಳಿದರು.
     ನಗರದ ಮಾಗನೂರು ಸರ್ವಮಂಗಳಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಉದ್ಘಾಟನೆ ಮತ್ತು ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.
     ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೇವಾ ಚಟುವಟಿಕೆಗಳೊಂದಿಗೆ ವಿಶೇಷ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
     ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ. ರತ್ನಾ ಮಾತನಾಡಿ, ರೋವರ್ಸ್‌ ಘಟಕ ಮೊದಲು ಪ್ರಾರಂಭಿಸಿದ ಬೈಡನ್ ಪೋವೆಲ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಬೆಳೆದುಬಂದ ದಾರಿಯನ್ನು ತಿಳಿಸಿದರು.
     ಪ್ರಾಚಾರ್ಯೆ ಪ್ರೊ. ಜಿ.ಸಿ. ನೀಲಾಂಬಿಕಾ ರೋವರ್ಸ್‌ ಘಟಕಕ್ಕೆ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
     ಪ್ರಾಧ್ಯಾಪಕರಾದ ಪ್ರೊ. ಟಿ.ಆರ್. ರಂಗಸ್ವಾಮಿ, ಡಾ. ಎ.ಬಿ. ವಿಜಯಕುಮಾರ್ ಇತರರು ಇದ್ದರು.
     ಕಾಲೇಜಿನ ರೋವರ್ಸ್‌ ಲೀಡರ್ ಪ್ರೊ. ಕೆ.ವೈ. ಈಶ್ವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಂಕಿತಾ ಪ್ರಾರ್ಥಿಸಿದರು. ಡಾ.ಎಂ. ಮಂಜಪ್ಪ ವಂದಿಸಿದರು, ಕೆ. ಪವಿತ್ರಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts