More

    ಸಾವಿರ ವಿವಿಗಳಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆ ಕಡ್ಡಾಯ

    ದಾವಣಗೆರೆ : ಹೊಸ ಶಿಕ್ಷಣ ನೀತಿ ಅಡಿಯಲ್ಲಿ ದೇಶದ 1 ಸಾವಿರ ವಿಶ್ವವಿದ್ಯಾಲಯಗಳಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆ ಕಡ್ಡಾಯ ಮಾಡಲಾಗಿದೆ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
     ಇಲ್ಲಿನ ಬಾಪೂಜಿ ಕೇಂದ್ರೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ, ನೇತಾಜಿ ಓಪನ್ ಸ್ಕೌಟ್ಸ್ ಗ್ರೂಪ್ ಹಾಗೂ ಚೇತನ ಓಪನ್ ಗೈಡ್ ಗ್ರೂಪ್‌ನ ರಜತ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
     ಪದವಿಗೆ ರೇಂಜರ್ಸ್ ಮತ್ತು ರೋವರ್ಸ್ ಕಡ್ಡಾಯ ಮಾಡಲಾಗಿದ್ದು, 5 ಸೆಮಿಸ್ಟರ್‌ಗಳಲ್ಲಿ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಇದಕ್ಕೆ 50 ಅಂಕ ಮೀಸಲಿಡಲಾಗಿದೆ. ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಚಿಂತನೆ ನಡೆಸಿದ್ದು, ರಾಜ್ಯದ ವಿಶ್ವವಿದ್ಯಾಲಯಗಳಲ್ಲೂ ರೇಂಜರ್ಸ್ ಮತ್ತು ರೋವರ್ಸ್ ಕಡ್ಡಾಯಗೊಳಿಸುವಂತೆ ಒತ್ತಡ ಹೇರಲು ನಿರ್ಧರಿಸಿದ್ದೇವೆ ಎಂದರು.
     ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಈ  ಹೊತ್ತಿನಲ್ಲಿ ಅದರ ಮರು ಸ್ಥಾಪನೆಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕಗಳು ಸೇರಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ ಎಂದು ಅಭಿಪ್ರಾಯಪಟ್ಟರು.
     ಸಾಮಾಜಿಕ ಜಾಲತಾಣಗಳ ಭರಾಟೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಮೌಲ್ಯಗಳ ಕೊರತೆ ಕಾಣುತ್ತಿದೆ. ಪಾಲಕರು ಮನೆಗಳಿಂದಲೇ ಸೇವಾ ಮನೋಭಾವ ಬೆಳೆಸಬೇಕು. ಅವರಿಗೆ ಕಷ್ಟದ ಪರಿಚಯ ಮಾಡಿಸದಿದ್ದರೆ ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬರುವುದಿಲ್ಲ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಎಚ್ಚರಿಸಿದರು.
     ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ದಕ್ಷಿಣ ವಲಯ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಮಂಜುನಾಥ ಕುರ್ಕಿ, ಬಾಪೂಜಿ ವಿದ್ಯಾಸಂಸ್ಥೆಯ ಕಿರುವಾಡಿ ಗಿರಿಜಮ್ಮ, ನೇತಾಜಿ ಓಪನ್ ಸ್ಕೌಟ್ಸ್ ಗ್ರೂಪ್ ಹಾಗೂ ಚೇತನ ಓಪನ್ ಗೈಡ್ ಗ್ರೂಪ್‌ನ ಸಂಸ್ಥಾಪಕ ಜೆ.ಎಸ್. ವಿಜಯ್, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಮ್ಮು ಮತ್ತು ಕಾಶ್ಮೀರದ ಪುರುಷೋತ್ತಮ್ ಲಾಲ್ ದುಬೆ, ರಾಜಸ್ಥಾನದ ಮುಖೇಶ್ ಜಿ., ಉತ್ತರ ಪ್ರದೇಶದ ವಿಜಯಕುಮಾರ್ ಮಿಶ್ರಾ, ಮಂಜುಳಾ ಸಿ. ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts