More

    ದಾವಣಗೆರೆ: ರೋಟರಿ ಸಂಸ್ಥೆಯಿಂದ ಆರೋಗ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆಯ ನೂತನ ಅಧ್ಯಕ್ಷ ಆರ್.ಟಿ.ಮೃತ್ಯುಂಜಯ ಹೇಳಿದರು.

    ನಗರದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2020-21ನೇ ಸಾಲಿನ ದಾವಣಗೆರೆ ರೋಟರಿ ಸಂಸ್ಥೆ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಅಧಿಕಾರ ಸ್ವೀಕರಿಸಿ, ಮಾತನಾಡಿದರು.

    ಆರೋಗ್ಯವೇ ಭಾಗ್ಯ ಎಂಬುದು ಕೇವಲ ನಾಲ್ಕು ತಿಂಗಳಲ್ಲಿ ಎಲ್ಲರ ಅನುಭವಕ್ಕೆ ಬಂದಿದೆ. ಪ್ರಸಕ್ತ ವರ್ಷದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ನೇತ್ರದಾನ ಶಿಬಿರಗಳ ಆಯೋಜನೆ, ವಿವಿಧೆಡೆ ಫೇಸ್ ಮಾಸ್ಕ್ ವಿತರಣೆ ಹಾಗೂ ಉಚಿತ ಮ್ಯಾಮೋಗ್ರಾಫಿಕ್ ತಪಾಸಣೆ ನಡೆಸುವ ಆಲೋಚನೆ ಇದೆ ಎಂದರು.

    ಕಿವಿ-ಮೂಗು, ಗಂಟಲು ತಜ್ಞ ವೈದ್ಯ ಡಾ.ಎ.ಎಂ.ಶಿವಕುಮಾರ್ ಮಾತನಾಡಿ, ಭಾರತೀಯ ರೆಡ್‌ಕ್ರಾಸ್, ರೋಟರಿ ಹಾಗೂ ಲಯನ್ಸ್ ಸಂಸ್ಥೆಗಳು ನೂರು ವರ್ಷದಿಂದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿವೆ. ಸಮಾಜಕ್ಕೆ ಉಪಯುಕ್ತ ಕಾರ್ಯಗಳು ಆಗಬೇಕಿವೆ. ಒಳಿತು ಮಾಡುವುದು ನಮ್ಮ ಧ್ಯೇಯವಾಗಬೇಕು ಎಂದರು.

    ದಾವಣಗೆರೆ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಆರ್.ಟಿ.ಮೃತ್ಯುಂಜಯ, ಕಾರ್ಯದರ್ಶಿಯಾಗಿ ಅಂದನೂರು ಆನಂದ್‌ಕುಮಾರ್ ಹಾಗೂ ಖಜಾಂಚಿಯಾಗಿ ಬೇತೂರು ಜಗದೀಶ್, ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷರಾಗಿ ಶೋಭಾ ಧನಂಜಯ್, ಕಾರ್ಯದರ್ಶಿಯಾಗಿ ಆಶಾ ಜಗದೀಶ್ ಅಧಿಕಾರ ಸ್ವೀಕರಿಸಿದರು. ಮಾಜಿ ಗವರ್ನರ್ ನಯನ್ ಪಾಟೀಲ್, ಸುರೇಖಾ ಚಿಗಟೇರಿ ಪದಗ್ರಹಣ ನಡೆಸಿಕೊಟ್ಟರು.

    ರೋಟರಿ ಜಿಲ್ಲೆಯ ಉಪ ಗವರ್ನರ್ ಚಂದ್ರಾಚಾರ್, ನಿವೃತ್ತ ಉಪ ಗವರ್ನರ್ ಆರ್.ಎಸ್.ವಿಜಯಾನಂದ, ಉತ್ತಂಗಿ ಬಸವರಾಜ್, ಪದ್ಮಾ ಪ್ರಕಾಶ್ ಇತರರಿದ್ದರು. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts