More

    ರಾಮಾಯಣದ ಪಾತ್ರಗಳು ಬದುಕಿಗೆ ಹತ್ತಿರ

    ದಾವಣಗೆರೆ : ರಾಮಾಯಣದ ಪ್ರತಿಯೊಂದು ಪಾತ್ರಗಳೂ ನಮ್ಮ ಜೀವನಕ್ಕೆ ಹತ್ತಿರವಾಗಿವೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಚಾರ್ಯೆ ಛಾಯಾ ಶ್ರೀಧರ್ ಹೇಳಿದರು.
     ಹಮ್ ಫೌಂಡೇಶನ್ ಭಾರತ್ ದೇವನಗರಿ ಶಾಖೆ ವತಿಯಿಂದ ನಗರದ ಸದ್ಯೋಜಾತ ಹಿರೇಮಠದಲ್ಲಿ ಇತ್ತೀಚೆಗೆ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ರಾಮಾಯಣ ಕುರಿತಾದ ಲಿಖಿತ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
     ರಾಮಾಯಣದ ಪಾತ್ರಗಳ ಮೂಲಕ ಮೌಲ್ಯಗಳನ್ನು ಹೇಳಲಾಗಿದ್ದು ಮಕ್ಕಳು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
     ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಹಮ್ ಫೌಂಡೇಶನ್ ಭಾರತ್, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
     ಫೌಂಡೇಶನ್‌ನ ದಕ್ಷಿಣ ಪ್ರಾಂತ ಮಹಿಳಾ ಸಂಚಾಲಕಿ ಡಾ. ಆರತಿ ಸುಂದರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲವಿಕಾಸ ತರಬೇತಿ ಕಾರ್ಯಕ್ರಮದಡಿ ರಾಮಾಯಣ ರಸಪ್ರಶ್ನೆ ಸ್ಪರ್ಧೆಯನ್ನು ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ನಡೆಸಲಾಗಿದ್ದು, ಆ ಮೂಲಕ  ಮಕ್ಕಳಲ್ಲಿ ಮೌಲ್ಯಗಳ ಅರಿವನ್ನು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.
     ಜೂನಿಯರ್ ವಿಭಾಗದ ಮಕ್ಕಳಿಗೆ ತೆರೆದ ಪುಸ್ತಕ ಲಿಖಿತ ಪ್ರಶ್ನೆ ನಡೆಸಿದ್ದು ವಿಶೇಷವಾಗಿದ್ದು ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಆಯ್ದ 15 ಶಾಲೆಗಳಿಂದ 69 ಮಕ್ಕಳು ಭಾಗವಹಿಸಿದ್ದಾಗಿ ತಿಳಿಸಿದರು.
     ಫೌಂಡೇಶನ್ ಅಧ್ಯಕ್ಷೆ ಸುಮಾ ಸದಾನಂದ್ ಮಾತನಾಡಿ, ಫೌಂಡೇಶನ್ ವತಿಯಿಂದ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ  ಇನ್ನೂ ಹೆಚ್ಚಿನ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
     ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಚಂದನ ವಿಜಯಕುಮಾರ್, ಖಚಾಂಚಿ ಚೇತನ ಚಿದಂಬರಂ ಇದ್ದರು. ಶೀಲಾ ನಾಯಕ್ ಫೌಂಡೇಶನ್ ಗೀತೆ ಹಾಡಿದರು. ಉಪಾಧ್ಯಕ್ಷೆ ಹೇಮಾ ರುದ್ರಮುನಿ ಸ್ವಾಮಿ ಸ್ವಾಗತಿಸಿದರು. ಚಂದನ ವಿಜಯಕುಮಾರ್ ವಂದಿಸಿದರು. ದೇವಿಕಾ ಸುನೀಲ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts