More

    ದಾವಣಗೆರೆ ಜಿಲ್ಲೆಯಲ್ಲಿ 105 ಮನೆಗಳು ನೆಲಸಮ

    ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಬುಧವಾರ ರಾತ್ರಿವರೆಗೆ ಸುರಿದ ಮಳೆಗೆ 105 ಮನೆಗಳಿಗೆ ಹಾನಿಯಾಗಿದ್ದು 218.90 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

    ದಾವಣಗೆರೆ ಜಿಲ್ಲೆಯಲ್ಲಿ 105 ಮನೆಗಳು ನೆಲಸಮ

    ಜಿಲ್ಲೆಯಲ್ಲಿ ಒಟ್ಟು 4.1ಮಿ.ಮೀ. ಮಳೆ ಸುರಿದಿದೆ. ಚನ್ನಗಿರಿಯಲ್ಲಿ 9, ದಾವಣಗೆರೆ 2.9 ಹರಿಹರ 1.7, ಹೊನ್ನಾಳಿ 3.5, ಜಗಳೂರು 1.7 ಹಾಗೂ ನ್ಯಾಮತಿಯಲ್ಲಿ 5.7ಮಿ.ಮೀ ಮಳೆೆಯಾಗಿದೆ.

    ದಾವಣಗೆರೆ ತಾಲೂಕಿನಲ್ಲಿ 9, ಹರಿಹರ 4, ಹೊನ್ನಾಳಿ 26, ನ್ಯಾಮತಿ 31 ಹಾಗೂ ಚನ್ನಗಿರಿ ತಾಲೂಕಿನಲ್ಲಿ 35 ಮನೆಗಳು ಹಾನಿಗೆ ತುತ್ತಾಗಿವೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ನ್ಯಾಮತಿಯಲ್ಲಿ 31 ಮನೆ ಕುಸಿತ

    ನ್ಯಾಮತಿ: ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಸವಳಂಗ, ಶಾಂತಿನಗರ, ಗಡೇಕಟ್ಟೆ, ಸುರಹೊನ್ನೆ, ಆರುಂಡಿ, ದೊಡ್ಡೆತ್ತಿನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ 31 ಮನೆಗಳು ಕುಸಿದಿವೆ. ಇದರಿಂದ ಸುಮಾರು 66.55 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದ್ದಾರೆ. ಹೊನ್ನಾಳಿ 3 ಮಿ.ಮೀ., ಸವಳಂಗ 3.8 ಮಿ.ಮೀ., ಬೆಳಗುತ್ತಿ 6 ಮಿ.ಮೀ., ಹರಳೇಹಳ್ಳಿ 1.6 ಮಿ.ಮೀ., ಗೋವಿನಕೋವಿ 2.2 ಮಿ.ಮೀ., ಕುಂದೂರು 4.8 ಮಿ.ಮೀ., ಸಾಸ್ವೇಹಳ್ಳಿ 5.2 ಮಿ.ಮೀ. ಒಟ್ಟು ಸರಾಸರಿ 26.6 ಮಿ.ಮೀ. ಮಳೆ ಬಿದ್ದ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts