More

    ಫಾರ್ಮಸಿ ಕಾಲೇಜಿನಲ್ಲಿ ಫಾರ್ಮಾಕೋವಿಜಿಲೆನ್ಸ್ ಕಾರ್ಯಾಗಾರ

    ದಾವಣಗೆರೆ : ನಗರದ ಜಿ.ಎಂ. ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಫಾರ್ಮಾಕೋವಿಜಿಲೆನ್ಸ್ ಕಾರ್ಯಾಗಾರವನ್ನು ಫಾರ್ಮಕಾಲಜಿ ವಿಭಾಗದಿಂದ ಆಯೋಜಿಸಲಾಗಿತ್ತು.
     ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ ಫಾರ್ಮಾಕೋವಿಜಿಲೆನ್ಸ್ ಮೂಲ, ಪ್ರಾಮುಖ್ಯತೆ ಹಾಗೂ ವೈಶಿಷ್ಟ್ಯದ ಕುರಿತು ತಿಳಿಸಿದರು. ಬೆಂಗಳೂರಿನ ಯೆಬ್ವಿ ಕಂಪನಿಯ ಪಿವಿ ಹಿರಿಯ ವ್ಯವಸ್ಥಾಪಕ ಆನಂದ್ ಕುಂಚನೂರು ‘ಓವರವ್ಯೆ ಆಫ್ ಫಾರ್ಮಾಕೋವಿಜಿಲೆನ್ಸ್ ಪ್ರೋಸೆಸ್’ (ಫಾರ್ಮಾಕೋವಿಜಿಲೆನ್ಸ್ ಪ್ರಕ್ರಿಯೆಯ ಅವಲೋಕನ) ವಿಷಯ ಕುರಿತು ಮಾತನಾಡಿದರು.
     ಬೆಂಗಳೂರಿನ ಎಕ್ಸಂಚರ್ ಕಂಪನಿಯ ಹಿರಿಯ ಔಷಧ ಸುರಕ್ಷತೆ ವಿಶ್ಲೇಷಕ ಡಾ. ಭರತ್ ಕುಮಾರ್ ಅಣ್ಣವರಪು ‘ಲಿಟರೇಚರ್ ರಿಪೋರ್ಟ್ ಪ್ರೊಸೆಸಿಂಗ್ ಆಫ್ ಪಿವಿ’ ಬಗ್ಗೆ ಮಾತನಾಡಿದರು. ಮೈಸೂರಿನ ಯಾರಿಸ್ ಗ್ಲೋಬಲ್ ಕಂಪನಿಯ ಪ್ರಧಾನ ಸಲಹೆಗಾರ ಡಾ. ಶಶಾಂಕ್ ಹೊಸೂರು ಮೆಡ್ ಡ್ರಾ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಬೆಂಗಳೂರಿನ ಲೀಡಿಂಗ್ ಸಿಆರ್‌ಒ ವ್ಯವಸ್ಥಾಪಕ ಬಸವರಾಜ್ ಪೋತ್ರಾಜ್ ‘ಐಸಿಎಸ್‌ಆರ್ ರಿಪೋರ್ಟ್ ಆಫ್ ಪಿವಿ’ ಬಗ್ಗೆ ಮನದಟ್ಟು ಮಾಡಿಕೊಟ್ಟರು.
     ನಿರ್ವಾಹಕ ಕೇಶವ ಕೆ.ಎಸ್, ಮೊಹಮದ್ ಯೂಸುಫ್ ದಮನಿ, ಮೊಹಮದ್ ಯಾಸೀನ್, ಪೂಜಾ ಎ.ಎಂ ಹಾಗೂ ತೇಜಸ್ವಿನಿ ಎಚ್.ಎಂ ಇದ್ದರು. 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts