More

    ಬೋನಿಗೆ ಬಿದ್ದ ಕೋತಿ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

    ದಾವಣಗೆರೆ ; ಸಮೀಪದ ಹಳೇ ಕುಂದುವಾಡದಲ್ಲಿ ಗ್ರಾಮಸ್ಥರಿಗೆ ಉಪಟಳ ಮಾಡುತ್ತಿದ್ದ ಕೋತಿಯೊಂದು ಗುರುವಾರ ಬೋನಿಗೆ ಬಿದ್ದಿದೆ.
     ಕೆಲ ದಿನಗಳಿಂದ ಅದು ಸಿಕ್ಕ ಸಿಕ್ಕವರ ಮೇಲೆ ಎಗರುತ್ತಿತ್ತು. 20ಕ್ಕೂ ಹೆಚ್ಚು ಜನರಿಗೆ, ಮಕ್ಕಳಿಗೆ ಕಚ್ಚಿ ಗಾಯಗೊಳಿಸಿತ್ತು. ವಿದ್ಯಾರ್ಥಿಗಳು ಶಾಲೆಗೆ ಹೋಗಲು, ವಾಪಸ್ ಬರಲು ಭಯಪಡುವಂತಾಗಿತ್ತು.
     ಕೋತಿ ಬೈಕ್ ಸವಾರರನ್ನೇ ಹೆಚ್ಚು ಗುರಿಯಾಗಿಸಿ ದಾಳಿ ಮಾಡುತ್ತಿತ್ತು. ಇದರಿಂದಾಗಿ ಅನೇಕರು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ಮುಷ್ಯನ ಕೀಟಲೆಯಿಂದ ಜನರು ಬೇಸತ್ತು ಹೋಗಿದ್ದರು.
     ಈ ಹಿನ್ನೆಲೆಯಲ್ಲಿ ಜನರು ಅರಣ್ಯ ಇಲಾಖೆ ಅಧಿಕಾರಿ ಶಶಿಧರ್ ಅವರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಇಲಾಖೆ ಸಿಬ್ಬಂದಿ ನಾಲ್ಕೈದು ದಿನದಿಂದ ಬೋನನ್ನು ಇಟ್ಟಿದ್ದರು. ಬುಧವಾರ ಕೋತಿಯು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತ್ತು.
     ಗುರುವಾರ ಬೆಳಗ್ಗೆ ಅರಣ್ಯ ಇಲಾಖೆಯ ನಾಲ್ಕು ಜನರ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಬೋನನ್ನು ಬೇರೆ ಕಡೆ ಸ್ಥಳಾಂತರಿಸಿ, ಹಣ್ಣು ಹಾಗೂ ಕನ್ನಡಿಯನ್ನು ಇಡಲಾಗಿತ್ತು. ಹಣ್ಣು ತಿನ್ನುತ್ತ ಅದು ಬೋನಿನ ಒಳಗೆ ಹೋದ ತಕ್ಷಣ ಸಿಬ್ಬಂದಿ ಲಾಕ್ ಮಾಡಿದರು. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆ ಸಿಕ್ಕ ಕೋತಿಯನ್ನ ಕಾಡಿಗೆ ಬಿಡಲು ಸಿದ್ಧತೆ ನಡೆದಿದೆ.
     ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಹಿದಾಯಿತ್, ಹರೀಶ್, ಮರುಳಸಿದ್ದಪ್ಪ, ದೇವರಾಜ್, ಶರಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts