More

    ದುರ್ಗೆಯ ಆರಾಧನೆಯಿಂದ ಅನುಗ್ರಹ

    ದಾವಣಗೆರೆ: ದುರ್ಗೆಯು ಮಾತೃ ಸ್ವರೂಪಿಯಾಗಿದ್ದು ತನ್ನನ್ನು ಆರಾಧನೆ ಮಾಡಿದವರಿಗೆ ಅನುಗ್ರಹಿಸುತ್ತಾಳೆ ಎಂದು ಕೂಡಲಿ ಶಂಕರ ಮಠದ ಹಿರಿಯ ಸ್ವಾಮೀಜಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಹೇಳಿದರು.
     ನಗರದ ಜಯದೇವ ವೃತ್ತದ ಶಂಕರ ಮಠದಲ್ಲಿ ಸೋಮವಾರ ವಿಜಯ ದಶಮಿಯ ಅಂಗವಾಗಿ ಆಶೀರ್ವಚನ ನೀಡಿದರು.
     ಶ್ರೀ ಶಂಕರಾಚಾರ್ಯರು ದೇವಿಯನ್ನು ಆರಾಧನೆ ಮಾಡಿಯೇ ಜಗದ್ವಿಖ್ಯಾತರಾದರು. ಲೋಕ ಕಲ್ಯಾಣ ಮಾಡುವ ದುರ್ಗಾ ಮಾತೆಯ ಮೊರೆ ಹೋದರೆ, ತಾಯಿಯು ತನ್ನ ಮಕ್ಕಳನ್ನು ಕಾಪಾಡುವ ರೀತಿಯಲ್ಲೇ ದೇವಿಯು ಭಕ್ತರನ್ನು ಕಾಪಾಡುತ್ತಾಳೆ. ಪ್ರತಿಯೊಬ್ಬರನ್ನೂ ತಾಯಿಯಂತೆ ನೋಡಬೇಕು ಎಂದು ತಿಳಿಸಿದರು.
     ಹತ್ತು ದಿನ ಸಂಭ್ರಮ
     ದಸರಾ ಅಂಗವಾಗಿ 10 ದಿನಗಳ ಕಾಲ ಚಂಡಿ ಪಾರಾಯಣ, ಪ್ರತಿ ನಿತ್ಯ ಚಂಡಿಕಾ ಹವನ, ಸಂಜೆ ದುರ್ಗಾ ದೀಪ ನಮಸ್ಕಾರ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿದವು. ಶ್ರೀ ಮಠದ ಉಸ್ತುವಾರಿ ಪವನ ಭಟ್ಟರು ನೇತೃತ್ವ ವಹಿಸಿದ್ದರು.
     ಸೋಮವಾರ ಸಂಜೆ ಮಠದ ಮುಂಭಾಗದಲ್ಲಿ ಅಂಬುಛೇದನ ನಡೆಯಿತು. ನೂರಾರು ಭಕ್ತರಿಗೆ ನಿತ್ಯವೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
     ನಗರದಲ್ಲಿ ತಮ್ಮ 39ನೇ ಚಾತುರ್ಮಾಸ್ಯ ವ್ರತ ಯಶಸ್ವಿಯಾಗಿ ನೆರವೇರಿಸಿಕೊಂಡ ಶ್ರೀಗಳು ಭಕ್ತರ ಅಪೇಕ್ಷೆಯ ಮೇರೆಗೆ ಮಂಗಳವಾರ ಪ್ರವಾಸಕ್ಕೆ ತೆರಳಿದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts