More

    ಕಾರ್ಮಿಕ ಸಂಘಟನೆ, ಚಳವಳಿಗೆ ಬೇಕು ಬಲ

    ದಾವಣಗೆರೆ: ಇಂದು ಕಾರ್ಮಿಕರ ಶೋಷಣೆ ಹಾಗೂ ಬಂಡವಾಳಶಾಹಿಗಳ ಪೋಷಣೆ ನಡೆಯುತ್ತಲೇ ಇದೆ. ಇದರ ನಡುವೆ ಕಾರ್ಮಿಕ ಸಂಘಟನೆ ಹಾಗೂ ಚಳವಳಿ ಕಟ್ಟಬೇಕಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯರಿ ಹೇಳಿದರು.

    ಆವರಗೆರೆಯಲ್ಲಿ ಶನಿವಾರ, ಹಿರಿಯ ಕಾರ್ಮಿಕ ಮುಖಂಡರಾದ ಶೇಖರಪ್ಪ, ಸುರೇಶ್ ಅವರ 56ನೇ ವರ್ಷದ ಹುತಾತ್ಮರ ದಿನಾಚರಣೆ ಹಾಗೂ ಮಾಜಿ ಶಾಸಕ ಪಂಪಾಪತಿ ಅವರ 21ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದಾವಣಗೆರೆ ನಗರದಲ್ಲಿ 53 ವರ್ಷದ ಹಿಂದೆ ಘಟಿಸಿದ ಹಿರಿಯ ಕಾರ್ಮಿಕ ಮುಖಂಡರ ಬಲಿದಾನ, ಕಾರ್ಮಿಕ ಚಳವಳಿ ದಿಕ್ಸೂಚಿಯಾಯಿತು. ಹೋರಾಟಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಜತೆಗೆ ಕಾರ್ಮಿಕ ಸಂಘಟನೆಗೂ ಶಕ್ತಿ ತುಂಬಲಾಯಿತು. ಹಿರಿಯರ ಹೋರಾಟಗಳಿಂದ ನಾವಿಂದು ಸರಿಯಾದ ಪ್ರೇರಣೆ ಪಡೆಯಬೇಕು ಎಂದರು.

    ಎಐಟಿಯುಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆನಂದರಾಜ್ ಮಾತನಾಡಿ ಪ್ರತಿ ವರ್ಷವೂ ಹುತಾತ್ಮರ ಸ್ಮರಣೆ ನಡೆಯುತ್ತದೆ, ಭಾಷಣವನ್ನೂ ಮಾಡುತ್ತೇವೆ. ಆದರೆ ಯುವಕರಿಗೆ ಇದರ ಇತಿಹಾಸದ ತಿಳಿವಳಿಕೆ ನೀಡುವಲ್ಲಿ ನಾವಿನ್ನೂ ಹಿಂದಿದ್ದೇವೆ. ಕಾರ್ಮಿಕ ವರ್ಗಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ ಎಂದರು.

    ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಿಪಿಐ ಜಿಲ್ಲಾ ಮಂಡಳಿ ಸದಸ್ಯೆ ಎಂ.ಬಿ.ಶಾರದಮ್ಮ, ಸಹ ಕಾರ್ಯದರ್ಶಿ ಆವರಗೆರೆ ವಾಸು, ಇಪ್ಟಾ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ಷಣ್ಮುಖಸ್ವಾಮಿ ಮಾತನಾಡಿದರು.

    ಸಿಪಿಐ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಟಿ.ಎಸ್.ನಾಗರಾಜ, ಜಿ.ಎಸ್.ಬಸವರಾಜಪ್ಪ, ಜಿ.ಯಲ್ಲಪ್ಪ, ವಿ.ಲಕ್ಷ್ಮಣ, ಎಸ್.ಎಸ್.ಮಲ್ಲಮ್ಮ, ಜ್ಯೋತಿಲಕ್ಷ್ಮೀ, ಆನಂದಮೂರ್ತಿ, ಬಾನಪ್ಪ, ಐರಣಿ ಚಂದ್ರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts