More

    ಬುದ್ಧಿ, ಮನಸ್ಸಿನ ಏಕಾಗ್ರತೆಯಿಂದ ಆನಂದ ಪ್ರಾಪ್ತಿ

    ದಾವಣಗೆರೆ : ಚಂಚಲಶೀಲ ಮನಸ್ಸನ್ನು ಬುದ್ಧಿಯಿಂದ ನಿಗ್ರಹಿಸುತ್ತಾ ಏಕಾಗ್ರತೆಯಿಂದ ಅದನ್ನು ಆತ್ಮಾನುಭವದ ಕಡೆಗೆ ಹರಿಸಿದಾಗ ಆನಂದ ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.
     ನಗರದ ಜಯದೇವ ವೃತ್ತದ ಶ್ರೀ ದತ್ತಾತ್ರೇಯ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ಮಂಗಳವಾರ, ದತ್ತ ಜಯಂತಿ ಅಂಗವಾಗಿ ಏರ್ಪಾಡಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಬ್ರಹ್ಮ, ವಿಷ್ಣು, ಪರಮೇಶ್ವರರ ಸಂಯುಕ್ತ ರೂಪವಾದ ದತ್ತಾತ್ರೇಯರ ಸಂಕೇತವೆಂದರೆ ಜ್ಞಾನಾರ್ಜನೆಯು ಬ್ರಹ್ಮವಾಗಿಯೂ, ಪಡೆದ ಜ್ಞಾನದ ಉಳಿಸಿಕೊಳ್ಳುವಿಕೆಯು ವಿಷ್ಣುವಾಗಿಯೂ, ಅಜ್ಞಾನ ನಾಶವು ಶಿವ ಸಂಕೇತವಾಗಿ ಶುಭವಾಗುತ್ತದೆ. ಹೀಗಾಗಿಯೇ ದತ್ತಾತ್ರೇಯರು ಪರಮ ಗುರು ಎನಿಸಿಕೊಳ್ಳುತ್ತಾರೆ ಎಂದರು.
     ನಿರ್ಗುಣ, ನಿರಾಕಾರ, ಸತ್ ಚಿತ್ ಆನಂದದಾಯಕ ಪರಬ್ರಹ್ಮ ವಸ್ತುವಿನ ಅನುಭವ ಬರಬೇಕೆಂದರೆ ಋತ ಸತ್ಯಗಳ ಅರಿವಾಗಬೇಕು, ಇದಕ್ಕಾಗಿ ಜ್ಞಾನ ಸೃಷ್ಟಿಯಾಗಬೇಕು. ಸೃಷ್ಟಿಯಾದ ಜ್ಞಾನ ಶಾಶ್ವತವಾಗಿ ಉಳಿಯಬೇಕು. ಅಂತರದಲ್ಲಿ ಬರುವ ಅಜ್ಞಾನವು ನಾಶವಾಗಲೇ ಬೇಕು. ದತ್ತಾತ್ರೇಯ ರೂಪವು ತ್ರಿಮೂರ್ತಿ ಏಕತ್ರದ ಪರಮ ಸತ್ಯ ಸಂಕೇತವಾಗಿದೆ. ಇದನ್ನು ಅರಿತು ಪಾಲಿಸುವುದೇ ನಿಜವಾದ ದತ್ತಾತ್ರೇಯ ಪೂಜೆ ಮತ್ತು ಆರಾಧನೆ ಎಂದು ಹೇಳಿದರು.
     ಇದೇ ಸಂದರ್ಭದಲ್ಲಿ ಪುಷ್ಪಾಲಂಕಾರ ಸೇವಾಕರ್ತ ಡಾ. ಜಾದವ್ ಅವರನ್ನು ಗೌರವಿಸಿ ಆಶೀರ್ವದಿಸಲಾಯಿತು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಠಿ, ಗೀತಾ ಶ್ರೀಧರ್, ಅಧ್ಯಾತ್ಮ ಮಂದಿರದ ಆರ್.ಜಿ. ದತ್ತರಾಜ್ ಭಾಗವಹಿಸಿದ್ದರು. ವೇದ ಮೂರ್ತಿ ಶಿವರಾಮ ಶಾಸ್ತ್ರೀ ಮುಂತಾದವರು ಪೂಜಾದಿಗಳನ್ನು ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts