More

    ವಿನಾಯಕ ಮಹೋತ್ಸವಕ್ಕೆ ಸುವರ್ಣ ಸಂಭ್ರಮ

    ದಾವಣಗೆರೆ : ನಗರದ ಸ್ವಸ್ತಿಕ್ ಗ್ರೂಪ್ ವತಿಯಿಂದ 50ನೇ ವರ್ಷದ ಶ್ರೀ ವಿನಾಯಕ ಮಹೋತ್ಸವವನ್ನು ಈ ವರ್ಷ ಆಚರಿಸಲಾಗುತ್ತಿದ್ದು, ಸುವರ್ಣ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ ಸಂಗೀತ ಕಾರಂಜಿ ಹಾಗೂ ಭಗೀರಥ ಪ್ರಯತ್ನದ ಪುರಾಣ ಕಥನವನ್ನು ನೀರಿನ ಪರದೆ ಮೇಲೆ ತೋರಿಸಲಾಗುವುದು ಎಂದು ಸ್ವಸ್ತಿಕ್ ಗ್ರೂಪ್ ಅಧ್ಯಕ್ಷ ಪ್ರವೀಣ್ ಹೇಳಿದರು.
     ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ. 18ರಂದು ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಲ್ಲಿ ವಿನಾಯಕ ಸ್ವಾಮಿ ಪ್ರತಿಷ್ಠಾಪನೆ ನಡೆಯಲಿದೆ. ವಿನೋಬನಗರದ 1ನೇ ಮುಖ್ಯ ರಸ್ತೆಯಲ್ಲಿರುವ ನರಹರಿಶೇಟ್ ಕಲ್ಯಾಣ ಮಂಟಪದ ಪಕ್ಕದ ಬಯಲಿನಲ್ಲಿ ಲೇಸರ್ ಶೋ ನಡೆಯಲಿದೆ ಎಂದು ತಿಳಿಸಿದರು.
     ರಾಜ್ಯದಲ್ಲೇ ಪ್ರಥಮ ಬಾರಿಗೆ 60 ಅಡಿ ಅಗಲ, 30 ಎಡಿ ಎತ್ತರದಿಂದ ಬೀಳುವ ನೀರಿನ ಮೇಲೆ ಈ ಪ್ರದರ್ಶನ ನಡೆಸಲಾಗುತ್ತಿದೆ. ಈ ಪ್ರದರ್ಶನಕ್ಕೆ ಚಿತ್ರಕತೆ, ಸಾಹಿತ್ಯ ರಚನೆ ಹಾಗೂ ಧ್ವನಿಯನ್ನು ಹಿರಿಯ ವ್ಯಂಗ್ಯಚಿತ್ರ ಕಲಾವಿದ ಎಚ್.ಬಿ. ಮಂಜುನಾಥ್ ಪ್ರಸ್ತುತ ಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
     ಸೆ. 18ರಿಂದ 27ರ ವರೆಗೆ ಸಂಜೆ 6 ರಿಂದ ರಾತ್ರಿ 10ರ ವರೆಗೆ ನಡೆಯಲಿರುವ ಪ್ರದರ್ಶನವನ್ನು ಪ್ರತಿ ದಿನವೂ ಸಾಧಕರೊಬ್ಬರು ಉದ್ಘಾಟಿಸಲಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದ ಜಿ.ಎಂ. ಸಿದ್ದೇಶ್ವರ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು. ತಿಲಕ್, ಮಹೇಶ್, ಕೃಷ್ಣ, ವಿಷ್ಣು, ಎನ್.ಕೆ. ರವಿ ಸುದ್ದಿಗೋಷ್ಠಿಯಲ್ಲಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts