More

    ಸತತ ಪ್ರಯತ್ನ, ಶಿಸ್ತುಬದ್ಧ ಅಧ್ಯಯನ ಯಶಸ್ಸಿನ ಸೂತ್ರ

    ದಾವಣಗೆರೆ : ಸತತ ಪ್ರಯತ್ನ, ಶಿಸ್ತುಬದ್ಧ ಅಧ್ಯಯನದಿಂದ ಯಶಸ್ಸು ಸಾಧ್ಯ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಹೇಳಿದರು.
     ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಇಂಜಿನಿಯರ್ಸ್‌ ದಿನಾಚರಣೆ ಮತ್ತು ಇಂಟರ್‌ನಲ್ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿಯಲ್ಲಿ ನಡೆಯುತ್ತಿರುವ ಅನೇಕ ಯೋಜನೆಗಳ ಪರಿಚಯ ಮಾಡಿಕೊಟ್ಟರು.
     ಅಟಲ್ ಇನ್‌ಕ್ಯೂಬೆಷನ್ ಸೆಂಟರ್‌ನ ಸಿಇಒ ಡಾ. ಎ.ಪಿ. ಆಚಾರ್ ಮಾತನಾಡಿ, ಸ್ಟಾರ್ಟ್‌ಅಪ್ ಮತ್ತು ಇನ್‌ಕ್ಯೂಬೇಷನ್ ಸೆಂಟರ್‌ಗಳ ಸಂಕ್ಷಿಪ್ತ ಮಾಹಿತಿ ನೀಡಿದರು.
     ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಇಂಜಿನಿಯರ್ ಎಸ್.ಡಿ. ವಿಶ್ವನಾಥ ಸ್ಮರಿಸಿದರು. ಸಲಹೆಗಾರ ಡಾ. ಮಂಜಪ್ಪ ಸಾರಥಿ ಮಾತನಾಡಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವ ರಾಷ್ಟ್ರವ್ಯಾಪಿ ಕಾರ್ಯಕ್ರಮವಾಗಿದೆ ಎಂದು ತಿಳಿಸಿಕೊಟ್ಟರು.
     ಇಂಟರ್‌ನಲ್ ಹ್ಯಾಕಥಾನ್‌ನಲ್ಲಿ 64 ತಂಡಗಳು ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸಿದರು. ಪ್ರಾಚಾರ್ಯ ಡಾ. ಗಣೇಶ್ ಡಿ.ಬಿ ಮಾತನಾಡಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಶಿಸ್ತಿನ ಜೀವನವು ವಿದ್ಯಾರ್ಥಿಗಳಿಗೆ ಆದರ್ಶ ಎಂದು ಹೇಳಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಪಾಟೀಲ್, ಪ್ರೊ. ನಂದೀಶ್ ಬಿ.ಎಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts