More

    ಪತ್ರಿಕಾ ವಿತರಕರಿಗೆ ಆಶ್ರಯ, ಆರೋಗ್ಯ ರಕ್ಷಣೆಗೆ ನೆರವು

    ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವರ ನೆರವಿನೊಂದಿಗೆ ಪತ್ರಿಕಾ ವಿತರಕರಿಗೆ ಆಶ್ರಯ, ಆರೋಗ್ಯ, ವಿಮೆ ಸೇರಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ದಾವಣಗೆರೆ ಮಹಾಮನಗರ ಪಾಲಿಕೆ ಮೇಯರ್ ವಿನಾಯಕ ಫೈಲ್ವಾನ್ ತಿಳಿಸಿದರು.
     ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘವು ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಪತ್ರಿಕಾ ವಿತರಕರ ಜತೆ ಬೆಳೆದಿರುವ ನನಗೆ ಕಷ್ಟಗಳ ಬಗ್ಗೆ ಅರಿವಿದೆ.ಅವರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆದ್ಯತೆ ನೀಡುವೆ. ಈ ಸಂಬಂಧ ಸಚಿವರ ಜತೆ ಸಮಾಲೋಚಿಸಿ ಸರ್ಕಾರದ ನೆರವು ಪಡೆಯಲಾಗುವುದು ಎಂದರು.
     *ಪತ್ರಿಕೆಗಳ ಜೋಡಣೆಗೆ ಶೆಲ್ಟರ್ *ಬಾಕ್ಸ್
     ಪತ್ರಿಕೆಗಳ ಜೋಡಣೆಗೆ ಅನುಕೂಲ ಆಗುವಂತೆ ಮಹಾನಗರ ಪಾಲಿಕೆಯಿಂದ ವಾರದೊಳಗೆ  ಶೆಲ್ಟರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮೇಯರ್ ಭರವಸೆ ನೀಡಿದರು. ಪತ್ರಿಕೆ ವಿತರಕರಿಗೆ ಪಾಲಿಕೆಯಿಂದ ಗುರುತಿನ ಚೀಟಿ ನೀಡಲಾಗುವುದು. ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ದಲ್ಲಿ  ಮೂವರು ವಿತರಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
     ***
     
     ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸಚಿವರು ಪತ್ರಿಕಾ ವಿತರಕರನ್ನು ವಿಶೇಷ ಸೇವಾವಲಯದ ಗುಂಪಿನಲ್ಲಿ ಪರಿಗಣಿಸಿ ನಿವೇಶನ ಒದಗಿಸಬೇಕು. ಎಸ್.ಎಸ್. ಜನಕಲ್ಯಾಣ ಟ್ರಸ್ಟ್‌ನಿಂದ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಪತ್ರಿಕಾ ವಿತರಕರ ಮಕ್ಕಳಿಗೂ ವಿಸ್ತರಿಸಬೇಕು ಎಂದು ಹೇಳಿದರು.
     ಪತ್ರಿಕೋದ್ಯಮದಲ್ಲಿ ಅತ್ಯಂತ ನಿರ್ಲಕ್ಷೃಕ್ಕೆ ಒಳಗಾದ ಪತ್ರಿಕಾ ವಿತರಕರು ಇತ್ತೀಚೆಗೆ ಸಂಘಟನೆ ಮೂಲಕ ಜಾಗೃತರಾಗಿದ್ದು ಬೇಡಿಕೆಗಳ ಕುರಿತಂತೆ ಶಾಸಕರು ಹಾಗೂ ಜಿಲ್ಲಾ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರೆ ಎಲ್ಲರೂ ಕೈಜೋಡಿಸುವುದಾಗಿ ತಿಳಿಸಿದರು.
     ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಪತ್ರಿಕಾ ವಿತರಕರು   ಮನೆ, ಮನೆಗೆ ಪತ್ರಿಕೆಗಳನ್ನು ಹಾಕುವ ಮೂಲಕ ಜನತೆಗೆ ಸುದ್ದಿಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಪಾಲಿಕೆಯಿಂದ ವಿತರಕರಿಗೆ ಸೂರು ಕಲ್ಪಿಸುವುದು ಸೇರಿ ಅಗತ್ಯ ಬೇಡಿಕೆಗಳನ್ನು  ಪರಿಗಣಿಸಬೇಕು ಎಂದರು.
     ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್ ಮಾತನಾಡಿ, ಪತ್ರಿಕಾ ವಿತರಕರು ಸೌಲಭ್ಯ ಕೇಳುತ್ತಿರುವುದು ನ್ಯಾಯೋಚಿತವಾಗಿದೆ. ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕಣ್ಣು  ತೆರೆಯಬೇಕು. ನಾವೆಲ್ಲರೂ ನಿಮ್ಮೊಂದಿಗಿದ್ದು ಕೈ ಜೋಡಿಸುತ್ತೇವೆ ಎಂದು ತಿಳಿಸಿದರು.
     ಪತ್ರಕರ್ತ ನಾಗರಾಜ್ ಬಡದಾಳ್ ಮಾತನಾಡಿ, ಪತ್ರಿಕಾ ವಿತರಕರು ಜೀವನ ನಿರ್ವಹಣೆಗೆ ವರ್ಷದಲ್ಲಿ 361ದಿನ ಕೆಲಸ ನಿರ್ವಹಿಸುತ್ತಿದ್ದರೂ ಕಳೆದ 40 ವರ್ಷಗಳಿಂದ  ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದಾರೆ ಎಂದು ಬೇಸರಿಸಿದರು. ಹಿರಿಯ ಪತ್ರಕರ್ತರು ಜಿಲ್ಲಾ  ಸಚಿವರನ್ನು ಭೇಟಿ ಮಾಡಿ ವಿತರಕರ ಬೇಡಿಕೆ ಈಡೇರಿಸಲು ಪ್ರಯತ್ನಿಸೋಣ ಎಂದರು.
     ವಿಜಯವಾಣಿ ಸ್ಥಾನಿಕ ಸಂಪಾದಕ ನವೀನ್ ಎಂ.ಬಿ.ಮಾತನಾಡಿ, ಪತ್ರಿಕಾ ವಿತರಿಕೆಗೆ ಆಶ್ರಯ, ಆರೋಗ್ಯ ವಿಮೆ, ಪಿಂಚಣಿ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಾರ್ತಾ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡ ಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts