More

    ನೃತ್ಯ, ಸಂಗೀತದ ಹಬ್ಬ ‘ಚಿರಂತನ ಉತ್ಸವ’

    ದಾವಣಗೆರೆ : ಚಿರಂತನ ಸಂಸ್ಥೆ ವತಿಯಿಂದ ‘ಚಿರಂತನ ಉತ್ಸವ-2023’ ಕಾರ್ಯಕ್ರಮವನ್ನು ಮೇ 28ರಂದು ನಗರದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ದೀಪಾ ಎನ್. ರಾವ್ ಹೇಳಿದರು.
     ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು 100 ಕಲಾವಿದರು ಭಾಗವಹಿಸುವರು ಎಂದು ತಿಳಿಸಿದರು.
     ಭರತನಾಟ್ಯ ಶಾಸ್ತ್ರೀಯ ನೃತ್ಯ, ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸುವ ಕಥಾವಸ್ತುವುಳ್ಳ ‘ಮಹಿಷ ಮರ್ದಿನಿ’ ಎಂಬ ವಿಶೇಷ ನೃತ್ಯರೂಪಕ, ಬೆಂಗಳೂರಿನ ನೃತ್ಯ ಗುರುಗಳಾದ ಚಿತ್ರಾ ವಿನೋದ್ ಅವರ ಶಿಷ್ಯರುಗಳ ‘ಏಕ್ಯಂ’ ತಂಡದವರು ‘ಶಿವೋಹಂ’ ಎಂಬ ನೃತ್ಯ ರೂಪಕ ಪ್ರಸ್ತುತಪಡಿಸುವರು ಎಂದರು.
     ಪಿಟೀಲು, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಿಟಾರ್ ಹಾಗೂ ಕೀಬೋರ್ಡ್‌ನಲ್ಲಿ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
     ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ‘ಕರ್ನಾಟಕ ಮಹಿಳಾ ಶ್ರೇಷ್ಠ ಸಾಧಕಿ’ ಪ್ರಶಸ್ತಿಯನ್ನು ರಾಜ್ಯದ 15ಕ್ಕೂ ಹೆಚ್ಚು ಮಂದಿಗೆ ನೀಡಲಾಗುವುದು. ಅವರಲ್ಲಿ ಜಿಲ್ಲೆಯ ನಾಲ್ವರು ಇದ್ದಾರೆ ಎಂದು ಮಾಹಿತಿ ನೀಡಿದರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಎನ್. ಚಲವಾದಿ, ಖ್ಯಾತ ನೃತ್ಯ ಗುರು ಡಾ.ಜಿ.ಕೆ. ಅಶ್ವಥ್ ಹರಿತಸ್, ಉದ್ಯಮಿಗಳಾದ ಅಥಣಿ ವೀರಣ್ಣ, ಹೇಮಾ ನಿರಂಜನ್, ಎಸ್.ಎಸ್. ಕೇರ್ ಟ್ರಸ್ಟ್‌ನ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಭಾಗವಹಿಸುವರು ಎಂದು ಹೇಳಿದರು.
     ಸಂಸ್ಥೆಯು 2001 ರಲ್ಲಿ ಆರಂಭವಾಗಿ 21 ವರ್ಷಗಳನ್ನು ಪೂರೈಸಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಹಲವು ಕಲೆಗಳಲ್ಲಿ ತರಬೇತಿ ನೀಡುತ್ತ ಬಂದಿದೆ. ಈ ಸಂಸ್ಥೆಯ ಕಲಾವಿದರು ಸಾಗರದಾಚೆಯೂ ಹಲವಾರು ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
     ಸಂಸ್ಥೆಯ ಕಾರ್ಯದರ್ಶಿ ಮಾಧವ ಪದಕಿ, ಎಂ.ಎಸ್. ಅಲಕನಂದಾ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts