More

    ಸಾಧನೆಗೆ ಪರಿಶ್ರಮದ ಜತೆಗೆ ಬೇಕು ಛಲ

    ದಾವಣಗೆರೆ : ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಸತತ ಪರಿಶ್ರಮದೊಂದಿಗೆ ಸಾಧಿಸುವ ಛಲ ಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ಶಿವರಾಜು  ಹೇಳಿದರು.
     ಜಿಲ್ಲಾ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ಜಿಎಂ ಹಾಲಮ್ಮ ಪಿಯು ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ  ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು  ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಉಪನ್ಯಾಸಕರ ಪ್ರಾಮುಖ್ಯತೆ ಬಹಳ ದೊಡ್ಡದು ಎಂದರು.
     ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ  ಉಪ ನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ದೇಶಕ್ಕೆ ದಾರ್ಶನಿಕರ ಕೊಡುಗೆ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು  ಇತರ ಉನ್ನತ ಶಿಕ್ಷಣದ ಮಹತ್ವದ ಜತೆಗೆ ಅಂಬೇಡ್ಕರ್ ಅವರ ಕನಸುಗಳ ಸಾಕಾರಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತು ಅದಕ್ಕೆ ಪದವಿ ಪೂರ್ವ ಶಿಕ್ಷಣದ ಕೊಡುಗೆ ಅಪಾರ ಎಂದು ತಿಳಿಸಿದರು.
     ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ಡಾ.ಜಿ.ಬಿ.ಈರೇಗೌಡ ಅವರು ಬದಲಾದ ಪಠ್ಯಕ್ರಮದ ಅನುಗುಣವಾಗಿ ಸಲಹೆ ಸೂಚನೆ ನೀಡಿದರು.    ಬೆಂಗಳೂರಿನ ನಿವೃತ್ತ ಪ್ರಾಚಾರ್ಯ ಡಾ.ಎಸ್.ಪಿ.ರಾಮಚಂದ್ರಪ್ಪ ಪಠ್ಯಕ್ರಮದ ಬಗ್ಗೆ ಚರ್ಚಿಸಿದರು. ಕಾಲೇಜಿನ ಸಹ ಆಡಳಿತಾಧಿಕಾರಿ ಜಿ.ಜೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಚ್.ಎಸ್.ಓಂಕಾರಪ್ಪ ಸ್ವಾಗತಿಸಿ ಅತಿಥಿಗಳನ್ನು ಸನ್ಮಾನಿಸಿದರು.
     —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts